March 12, 2025

Bhavana Tv

Its Your Channel

ಬಿಜೆಪಿಯ ಯುವ ಮುಖಂಡ ದಿನೇಶ ನಾಯ್ಕ ನಿಧನ

ಭಟ್ಕಳ: ಬಿಜೆಪಿಯ ಯುವ ಮುಖಂಡ, ಭಟ್ಕಳ ಚೌಥನಿಯ ನಿವಾಸಿ ದಿನೇಶ ನಾಯ್ಕ ಯಾನೆ ದಿನು ಹಂಟರ್ (43) ಹೃದಯಾಘಾತದಿಂದ ನಿಧನರಾಗಿದ್ದಾರೆ.

ವೈಯಕ್ತಿಕ ಕೆಲಸ, ಕಾರ್ಯದ ನಿಮಿತ್ತ ಶನಿವಾರ ಬೆಳಿಗ್ಗೆ ಗೆಳೆಯರೊಂದಿಗೆ ಕುಂದಾಪುರಕ್ಕೆ ತೆರಳಿದ್ದ ಅವರು, ನಂತರ ಬೈಂದೂರು ಹೊಟೆಲ್‌ನಲ್ಲಿ ಊಟ ಮಾಡುತ್ತಿರುವಾಗಲೇ ವಿಪರೀತವಾಗಿ ಮೈ-ಕೈ ನೋಯುತ್ತಿರುವ ಬಗ್ಗೆ ಗೆಳೆಯರಿಗೆ ತಿಳಿಸಿದ್ದರು. ಊಟದ ನಂತರ ಗೆಳೆಯರು ಅವರನ್ನು ಕುಂದಾಪುರ ನ್ಯೂ ಮೆಡಿಕಲ್ ಆಸ್ಪತ್ರೆಗೆ ಕರೆ ತಂದು ಪರೀಕ್ಷೆಗೆ ಒಳಪಡಿಸಿದ್ದು, ವೈದ್ಯರು ಕೂಡಲೇ ಮಣಿಪಾಲಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅಂಬುಲೆನ್ಸ್ನಲ್ಲಿ ಮಣಿಪಾಲಕ್ಕೆ ತೆರಳುತ್ತಿರುವಾಗಲೇ ದಿನೇಶ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಈ ಯುವ ನಾಯಕನ ಅಗಲಿಕೆ ಭಟ್ಕಳ ತಾಲೂಕಿನಾಧ್ಯಂತ ದಿಗ್ಬ್ರಮೆಯನ್ನು ಉಂಟುಮಾಡಿದ್ದು ದೀನು ಹಂಟರ್ ಇಂದು ಯುವ ಜನತೆಯನ್ನು ಬಿಟ್ಟು ಹೊಗಿದ್ದಾರೆ. ಮಣಿಪಾಲ ಆಸ್ಪತ್ರೆಯಿಂದ ಮಧ್ಯರಾತ್ರಿ ದಿನೇಶ ಅವರ
ಪಾರ್ಥಿವ ಶರೀರ ಸ್ವಗ್ರಹಕ್ಕೆ ಬರುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು ನೂರಾರು ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ಮೃತರು ಪತ್ನಿ, ಇಬ್ಬರು ಮಕ್ಕಳು , ಹಾಗೂ ಕುಟುಂಬಸ್ಥರನ್ನು ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಮುಖಂಡರು, ಭಟ್ಕಳ ಬಿಜೆಪಿಯ ಹಲವಾರು ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

error: