March 12, 2025

Bhavana Tv

Its Your Channel

ಭಟ್ಕಳದ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನಲ್ಲಿ ಭಾರತ ‘ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌  ರೋವರ್ಸನ ಅಗ್ನಿ ಎನ್ನುವ ಹೊಸ ಘಟಕ ಉದ್ಘಾಟನೆ

ಭಟ್ಕಳ: ಸ್ವಯಂ ಶಿಸ್ತು ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾದ ರೀತಿಯಲ್ಲಿರುತ್ತವೆ ಎಂದು ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಹೇಳಿದರು.

ಅವರು ಭಟ್ಕಳದ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನಲ್ಲಿ ಭಾರತ ಸ್ಕೌಟ್ಸ ಅಂಡ್ ಗೈಡ್ಸ್ ರೋವರ್ಸನ ಅಗ್ನಿ ಎನ್ನುವ ಹೊಸ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ ನಾಯಕ, ನಾವೆಲ್ಲ ಭಾರತೀಯರು ಎನ್ನುವ ಭಾವನೆಗೆ ಪ್ರಾಶಸ್ತö್ಯ ನೀಡಿದರೆ ನಮ್ಮ ಬಯಕೆ, ಭಾವನೆ ಮತ್ತು ವರ್ತನೆಗಳನ್ನು ನಿಯಂತ್ರಿಸಿ ಕೊಳ್ಳಬಹುದು. ಮನುಷ್ಯ, ಮನುಷ್ಯತ್ವ ವನ್ನು ಹೊಂದದೇ ಹೋದರೆ ಬದುಕು ವ್ಯರ್ಥ ಎಂದು ಹೇಳಿದರು.
ಭಾರತ ಸ್ಕೌಟ್ಸ ಅಂಡ್ ಗೈಡ್ಸ್ ನ ಜಿಲ್ಲಾ ಸ್ಥಳೀಯ ಸಂಸ್ಥೆ ಕಾರವಾರದ ಕಾರ್ಯದರ್ಶಿ ಬಿ.ಡಿ ಫರ್ನಾಂಡಿಸ್ ಹೊಸ ಘಟಕಕ್ಕೆ ಶುಭ ಹಾರೈಸಿದರು.
ಭಾರತ ಸ್ಕೌಟ್ಸ ಅಂಡ್ ಗೈಡ್ಸ್ ನ ಸಹಾಯಕ ರಾಜ್ಯ ಆಯುಕ್ತರಾದ ಕರಿಸಿದ್ಧಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರತ ಸ್ಕೌಟ್ಸ ಅಂಡ್ ಗೈಡ್ಸ್ ನ ಸ್ಥಳೀಯ ಸಂಸ್ಥೆ ಭಟ್ಕಳದ ಕಾರ್ಯದರ್ಶಿ ವೆಂಕಟೇಶ ಗುಬ್ಬಿಹಿತ್ತಲ್ ಮತ್ತು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ವಿರೇಂದ್ರ ವಿ.ಶಾನಭಾಗ ಸ್ವಾಗತಿಸಿದರು. ಉಪನ್ಯಾಸಕಿ ರೇಖಾ ಮೊಗೇರ ನಿರೂಪಿಸಿದರು. ಅಗ್ನಿ ರೋವರ್ಸ್ ಘಟಕದ ಅಧಿಕಾರಿ ಶಿವಾನಂದ ಭಟ್ ವಂದಿಸಿದರು.

error: