March 12, 2025

Bhavana Tv

Its Your Channel

ರಂಜನ್ ಗ್ಯಾಸ್ ಏಜೆನ್ಸಿಯ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಬೃಹತ್ ಪಾದಯಾತ್ರೆ

ಭಟ್ಕಳ: ಲೋಕಕಲ್ಯಾಣಾರ್ಥವಾಗಿ ರಂಜನ್ ಗ್ಯಾಸ್ ಏಜೆನ್ಸಿಯ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಮಾ.1 ರಂದು ವಿಶ್ವ ಪ್ರಸಿದ್ಧ ಮಹಾಶಿವನ ತಾಣ ಮುರ್ಡೇಶ್ವರಕ್ಕೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯ ಪ್ರತಿನಿಧಿ ಸದಸ್ಯೆ ಶಿವಾನಿ ಶಾಂತಾರಾಮ ಹೇಳಿದರು.

ಭಟ್ಕಳದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.1 ರಂದು ನಸುಕಿನ ವೇಳೆ 3:45ಕ್ಕೆ ಇಲ್ಲಿನ ಮೂಡಭಟ್ಕಳ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆಯನ್ನು ಆರಂಭಿಸಲಾಗುತ್ತಿದ್ದು, 7:30ಕ್ಕೆ ಮುರ್ಡೇಶ್ವರ ತಲುಪಲಿದೆ. ಪಾದಯಾತ್ರೆಯು ಸರಿಸುಮಾರು 17 ಕಿಮೀ. ಕ್ರಮಿಸಲಿದ್ದು, ತಾಲೂಕಿನ ವಿವಿಧ ಭಾಗಗಳ ಸಾವಿರಾರು ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.

ಯಾತ್ರೆಯುದ್ಧಕ್ಕೂ ಭಕ್ತರಿಗೆ ಹಣ್ಣು, ಪಾನೀಯವನ್ನು ಒದಗಿಸಲಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಅಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ಮುಡೇಶ್ವರದಲ್ಲಿ ನೇರವಾಗಿ ಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲಿಯೇ ಎಲ್ಲರಿಗೂ ಲಘು ಉಪಹಾರವನ್ನು ನೀಡಲಾಗುತ್ತದೆ.

ಭಕ್ತರು ಭಟ್ಕಳಕ್ಕೆ ವಾಪಸ್ಸಾಗಲು 15 ಬಸ್ಸ್ಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಈ ಪಾದಯಾತ್ರೆಯನ್ನು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯ ಅಡಿಯಲ್ಲಿ ಹಮ್ಮಿಕೊಂಡು ಬರಲಾಗಿದ್ದು, ಯಾವುದೇ ರಾಜಕೀಯ ಉದ್ದೇಶವಿಲ್ಲ. ಹೆಚ್ಚಿನ ಮಾಹಿತಿಗಾಗಿ ರಂಜನ್ ಇಂಡೇನ್ ಎಜೆನ್ಸಿ ಭಟ್ಕಳ- 9379410595 ಇವರನ್ನು ಸಂಪರ್ಕಿಸಬಹುದು ಎಂದರು.

error: