December 19, 2024

Bhavana Tv

Its Your Channel

ಸಿದ್ದಾಪುರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿ ಗೋಷ್ಠಿ

ವರದಿ: ವೇಣುಗೋಪಾಲ ಮದ್ಗುಣಿ

ಸಿದ್ದಾಪುರ: ಮನಸ್ಸನ್ನು ಸೀಮೆಯಾಚೆ ಹಿಗ್ಗಿಸುವ ಮಾಂತ್ರಿಕ ಸ್ಥಿತಿ ಒದಗಿಸುವ ಸಾಹಿತ್ಯದ ಸಾಂಗತ್ಯ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಹೇಳಿದರು.
ಅವರು ಕುಮಟಾ ಕನ್ನಡ ಸಂಘ ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿ ಸಭಾಂಗಣದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಮಾತನ್ನಾಡಿದರು.
ವ್ಯಕ್ತಿಯಾದವನು ತನ್ನ ಸುತ್ತಲಿನ ಆಗುಹೋಗುಗಳಿಗೆ ಪ್ರತಿಕ್ರಿಯಿಸುವ ಒಂದು ಸಾಧ್ಯತೆ ಸಾಹಿತ್ಯ. ಕವಿತೆ, ಕಥೆ, ಕಾದಂಬರಿ ಮುಂತಾಗಿ ಅಭಿವ್ಯಕ್ತಿಯ ಮಾಧ್ಯಮ ಭಿನ್ನವಾಗಿದ್ದರೂ ಅವೆಲ್ಲವೂ ಸಮಾಜದ ಒಳಿತನ್ನು ರೂಪಿಸುವ ದೃಷ್ಟಿಯಿಂದ ಸೃಷ್ಟಿಗೊಳ್ಳುತ್ತದೆ. ಬರವಣಿಗೆಗೆ ಸೃಷ್ಟಿಶೀಲ ಮನಸ್ಸು, ಧ್ಯಾನಸ್ಥ ಸ್ಥಿತಿ ಒದಗಿದಾಗ ಅರ್ಥಪೂರ್ಣ ಸಾಹಿತ್ಯ ರಚನೆ ಸಾಧ್ಯ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಸಾಹಿತಿ ಮಂಜುನಾಥ ಗಾಂವಕರ ಬರ್ಗಿ ಮಾತನಾಡಿ ಸಾಹಿತ್ಯ ಮನುಷ್ಯ ಸಂಬAಧಗಳನ್ನು ಗಟ್ಟಿಗೊಳಿಸಬೇಕೇ ಹೊರತು ಒಡೆಯುವದಲ್ಲ. ಅದರ ಪರಿಭಾಷೆ ಮಾನವೀಯತೆ, ಪರಸ್ಪರ ಹಾರ್ದಿಕ ಸಂವಹನ, ಸಮಾಜದ ಒಳಿತು ಎಲ್ಲವನ್ನೂ ಒಳಗೊಂಡಿದೆ. ಯುವ ಕವಿಗಳು ಭಾಷೆಯ ಬಳಕೆ, ಅದನ್ನು ವ್ಯಕ್ತಪಡಿಸುವ ರೀತಿ ಮುಂತಾದವುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದಾಗ ಉತ್ತಮ ಫಲ ಕೊಡಲು ಸಾಧ್ಯ ಎಂದರು.
ಕವಿ ತಿಗಣೇಶ್ ಕುಮಟಾ ಮಾತನಾಡಿ ಬರಹಗಳು ಮನಸ್ಸುಗಳನ್ನು ಅರಳಿಸಬೇಕು.ಕೆರಳಿಸಬಾರದು. ನೋವು ಕಾವ್ಯದ ತಾಯಿ. ಕಾವ್ಯ ನೋವಿನ ಬಾಯಿ. ಕನ್ನಡ ಸಂಘ ನಮ್ಮ, ನಿಮ್ಮೆಲ್ಲರದ್ದು. ಈ ಸಂಘ ಕನಸುಗಳನ್ನು ಮಾರಾಟ ಮಾಡದೇ ಅದನ್ನು ಮನಸ್ಸುಗಳಲ್ಲಿ ಬಿತ್ತುವ ಪ್ರಯತ್ನ ಮಾಡುತ್ತದೆ ಎಂದರು.
ಕವಿಗೋಷ್ಠಿಯಲ್ಲಿ ಫಾಲ್ಗುಣ ಗೌಡ ಅಚವೆ, ಹೊನ್ನಮ್ಮ ನಾಯಕ,ಉಮೇಶ ಮುಂಡಳ್ಳಿ, ಗಣಪತಿ ಕೊಂಡದಕುಳಿ, ಸುಬ್ರಾಯ ಬಿದ್ರೆಮನೆ, ಗ.ರಾ.ಭಟ್ಟ, ರೇಷ್ಮಾ ಉಮೇಶ, ಸಾವಿತ್ರಿ ಮಾಸ್ಕೇರಿ, ರಮೇಶ ಹೆಗಡೆ ಕೆರೆಕೋಣ, ವಿನಾಯಕ ಹೆಗಡೆ ಪೇಟೆಸರ, ಶಶಿಧರ ಹೆಗಡೆ, ಸುವರ್ಣಾ ಮಯ್ಯರ್, ಮಹೇಶಕುಮಾರ್ ಹನಕೆರೆ, ಉದಯ ನಾಯಕ, ಜಗನ್ನಾಥ ಮುಗವಳ್ಳಿ, ಕೃಷ್ಣ ಪದಕಿ, ದಿನೇಶ ಅಮೀನಳ್ಳಿ, ಯಶಸ್ವಿನಿ ಶ್ರೀಧರಮೂರ್ತಿ, ತಿಗಣೇಶ್ ಕವಿತೆ ವಾಚಿಸಿದರು. ಆರ್.ಎನ್.ಹೆಗಡೆ ನಿರೂಪಿಸಿದರು.

error: