December 20, 2024

Bhavana Tv

Its Your Channel

ವಿಜೃಂಭಣೆಯಿOದ ನಡೆದ ಮಳವಳ್ಳಿಯ ಮಲೆಮಹದೇಶ್ವರ ತೇರು

ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ತೇರು ವಿಜೃಂಭಣೆಯಿoದ ನೆರವೇರಿತು.
ದೇಗುಲದ ಅಧ್ಯಕ್ಷರಾದ ಮಹದೇವಸ್ವಾಮಿ ಯವರ ನೇತೃತ್ವದಲ್ಲಿನಡೆಯಿತು. ಮಂಗಳವಾರ ರಾತ್ರಿ 12 ಗಂಟೆ ಯಿಂದ ಬೆಳಗಿನ ಜಾವ 5:00 ವರೆಗೆ ವೀರಗಾಸೆ , ಹಾಲರಿವೆ ಕನ್ನಕನ್ನಡೀ, ಸತ್ತಿಗೆ ಸುರು ಪನಿ, ವಾದ್ಯಗಳ ಮೂಲಕ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಅನಂತರ 5.20 ದೇಗುಲದ ಪ್ರಧಾನ ಅರ್ಚಕರಾದ ನಂದೀಶ್ ರವರು ಕೊಂಡವನ್ನು ಹಾದು ನೆರವೇರಿಸಿದರು. ಬುಧವಾರ 3:00 ಗಂಟೆ ಸಮಯದಲ್ಲಿ ರಥೋತ್ಸವ ನಡೆಯಿತು ಗ್ರಾಮದ ಜನರು ರಥೋತ್ಸವ ಕ್ಕಾಗಿ ಬಂಧುಬಾAಧವರಿಗೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಂದಲೂ ಭಕ್ತರು ಆಗಮಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಅನಂತರ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಗ್ರಾಮಸ್ಥರು ಏರ್ಪಡಿಸಿದ್ದರು. ಶ್ರೀ ಮಲೆ ಮಹದೇಶ್ವರ ರಥೋತ್ಸವಕ್ಕೆ ಮಳವಳ್ಳಿ ಗ್ರಾಮಸ್ಥರು ಈಡುಗಾಯಿ ಹೊಡೆಯುವುದರ ಮುಖಾಂತರ ದೇವರ ಕೃಪೆಗೆ ಪಾತ್ರರಾದರು. ಈ ಸುಸಂದರ್ಭದಲ್ಲಿ ಮಳವಳ್ಳಿ ಗ್ರಾಮಸ್ಥರು ಯುವಕರು ಮುಖಂಡರುಗಳು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: