
ಭಟ್ಕಳ : ಭಟ್ಕಳ ಶಾಸಕ ಸುನೀಲ ನಾಯ್ಕ ಶನಿವಾರ ಭಟ್ಕಳ ತಾಲ್ಲೂಕಿನ ಕೊಪ್ಪ ಪಂಚಾಯ್ತಿ ವ್ಯಾಪ್ತಿಯ ಉತ್ತರಕೊಪ್ಪದ ಗುಂಜಮಾವು ದಟ್ಟಅರಣ್ಯ ಕುಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿ ಸ್ಥಳೀಯ ಜನರ ಸಮಸ್ಯೆ ಆಲಿಸಿದರು.
ಉತ್ತರಕೊಪ್ಪ ಗ್ರಾಮಕ್ಕೆ ತೆರಳಿದ ಶಾಸಕರನ್ನು ಅಲ್ಲಿನ ನಿವಾಸಿಗಳು ಬೈಕ್ ಮೆರವಣಿಗೆ ಮೂಲಕ ತಮ್ಮ ಗ್ರಾಮಕ್ಕೆ ಸ್ವಾಗತಿಸಿಕೊಂಡರು. ನಂತರು ಶಾಸಕರು ಉತ್ತರ ಕೊಪ್ಪದ ಜನವಸತಿ ಮೂರು ಗ್ರಾಮಗಳಿಗೆ ತೆರಳಿ ಸ್ಥಳೀಯ ಸಮಸ್ಯೆ ಆಲಿಸಿದರು. ಈ ಸಂದರ್ಬದಲ್ಲಿ ಸ್ಥಳೀಯರು ಈ ಹಿಂದೆ ಸಲ್ಲಿಸಿದ ಹಲವು ಬೇಡಿಕೆಗಳ ಈಡೇರಿಸಿರುವ ಬಗ್ಗೆ ಜನರಿಗೆ ತಿಳಿಸಿ ಮುಂದಿನ ಅಭಿವೃದ್ದಿ ಕಾರ್ಯಕ್ಕೆ ಅನುದಾನ ನೀಡುವುದಾಗಿ ಆಶ್ವಾಸನೆ ನೀಡಿದರು.
ಗುಂಜಮಾವು ಮರಾಠಿಕೇರಿಯಲ್ಲಿ ಮರಾಠಿ ಜನಾಂಗದ ಜೊತೆ ಸಭೆ ನಡೆಸಿದ ಶಾಸಕರು ಅವರು ತಯಾರಿಸಿ ನಾಟಿಕೋಟಿ ಸಾರು ಊಟ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮರಾಠಿಗರು ತಮ್ಮ ಜಾನಪದ ನೃತ್ಯ ಡೋಲು, ಡಬಲ ಕುಣಿತ ನಡೆಸಿ ಶಾಸಕರನ್ನು ಮನರಂಜಿಸಿದರು. ದಟ್ಟಾರಣ್ಯ ಪ್ರದೇಶದಲ್ಲಿ ದುರ್ಗಮ ಕಾಡಿನಲ್ಲಿ ಪೋನ್ ಸಂಪರ್ಕ ಇರದ ಹಳ್ಳಿಯಲ್ಲಿ ಶಾಸಕರು ಬಂದು ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸಿದಕ್ಕೆ ಅಲ್ಲಿನ ಜನರು ಸಂತಸ ವ್ಯಕ್ತಪಡಿಸಿದರು. ನಂತರ ಮಾಸ್ತಿ ಮನೆಗೆ ಹೋಗಿ ರಾತ್ರಿ ಕಳೆದ ಶಾಸಕರು ಬೆಳಿಗ್ಗೆ ರಸ್ತೆ, ಸಭಾಭವನ ಸೇರಿಂದತೆ ವಿವಿಧ ಕಾಮಾಗರಿ ಚಾಲನೆ ನೀಡಿದ ನಂತರ ಜನಸಂಪರ್ಕ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಕಳೆದ 4 ವರ್ಷಗಳಿಂದ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ನನ್ನ ಹುಟುಹಬ್ಬವನ್ನು ಗ್ರಾಮದ ಜನರ ನಡುವೆ ಆಚರಿಸಿಕೊಳ್ಳುವ ಉದ್ದೇಶದಿಂದ ಇಲ್ಲಿ ಬಂದು ವಾಸ್ತವ್ಯ ಮಾಡಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಇಲ್ಲಿನ ಜನರ ಸಮಸ್ಯೆ ಆಲಿಸಿದ ನಾನು ಮುಂದಿನ ದಿನದಲ್ಲಿ ಬೇಡಿಕೆ ಈಡೇರಿಕೆಗೆ ಪಯತ್ನಿಸುತ್ತೇನೆ ಎಂದರು.
ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ, ಕಾರ್ಯದರ್ಶಿ ಮೋಹನ ನಾಯ್ಕ, ಭಾಸ್ಕರ ದೈಮನೆ, ಮುಖಂಡರಾದ ರಾಜೇಶ ನಾಯ್ಕ, ಸಂತೋಷ ನಾಯ್ಕ, ಶಬರೀಶ ನಾಯ್ಕ, ಪ್ರಮೋದ ಜೋಶಿ, ರಾಮಾ ನಾಯ್ಕ ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ