ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮಧು ಜಿ .ಮಾದೇಗೌಡ ಅವರು ಕಾಂಗ್ರೆಸ್ ಹೈಕಮಾಂಡ್ ಮತ್ತು ನಮ್ಮ ರಾಜ್ಯದ ಕೆಪಿಸಿಸಿ ಅಧ್ಯಕ್ಷರು ಮತ್ತು ಸಿ ಎಲ್ ಪಿ ನಾಯಕರು ನಮ್ಮ ತಂದೆ ಜಿ .ಮಾದೇಗೌಡರು ಮಾಡಿರುವ ಕೆಲಸಗಳನ್ನು ಮೆಲುಕು ಹಾಕಿ ನಮ್ಮನ್ನು ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ನಮ್ಮನ್ನು ಕಣಕ್ಕಿಳಿಸಿದ್ದಾರೆ. ಆದಕಾರಣ 4 ಜಿಲ್ಲೆ 21 ತಾಲೂಕಿನಲ್ಲಿ ಪ್ರವಾಸ ಮಾಡಿದ್ದೇನೆ. ಅಲ್ಲದೆ ಪ್ರತಿ ಪದವೀಧರರನ್ನು ನೇರವಾಗಿ ಭೇಟಿ ಮಾಡಿ ನಮಗೆ ಮತ ಹಾಕುವಂತೆ ಮನವಿ ಮಾಡಿದ್ದೇನೆ. ಮಂಡ್ಯ ಜಿಲ್ಲೆಯ ಹಿರಿಯ ಹೋರಾಟಗಾರರಾದ ಜಿ ಮಾದೇಗೌಡ ರವರ ಸುಪುತ್ರ ರದ ಮಧು ಜಿ ಮಾದೇಗೌಡರು ಬಿ .ಎ. ಎಂ.ಬಿ.ಎ ಶಿಕ್ಷಣವನ್ನು ಪಡೆದಿದ್ದಾರೆ ಅವರು ಮಾಜಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ಜನಪರ ಕೆಲಸಗಳನ್ನು ಮಾಡಿದ್ದಾರೆ.ಹಾಗೂ ಭಾರತಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ತಮ್ಮದೇ ಶಿಕ್ಷಣ ಸಂಸ್ಥೆಯಾದ ಭಾರತಿ ಎಜುಕೇಶನ್ ಟ್ರಸ್ಟ್ ವತಿಯಿಂದ 35000 ಪದವೀಧರರನ್ನು ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ. ಹಾಗಾಗಿ ಈ ಬಾರಿ ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಗೆಲ್ಲುತ್ತೇನೆಂಬ ವಿಶ್ವಾಸ ಮತ್ತು ಭರವಸೆಯನ್ನು ಇಟ್ಟುಕೊಂಡಿದ್ದೇನೆ.
ನಮಗೆ ಪದವೀಧರರ ನಿರುದ್ಯೋಗ ಸಮಸ್ಯೆ ಯ ಬಗ್ಗೆ ಸಾಕಷ್ಟು ಅರಿವಿದ್ದು ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಮ್ಮ ಮುಂದೆ ಬಂದಿದ್ದೇನೆ ನಮ್ಮನ್ನು ಬೆಂಬಲಿಸಿ ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ, ಕಾಂಗ್ರೆಸ್ ಯುವ ಮುಖಂಡರು ಎಚ್ ಎ0 ಗಣೇಶ್ ಪ್ರಸಾದ್, ನಂಜುAಡ ಪ್ರಸಾದ್, ಮುನಿರಾಜು, ಎಚ್ ಎಸ್ ನಂಜಪ್ಪ, ಪಿ.ಬಿ ರಾಜಶೇಖರ್ ,ಎಲ್ ಸುರೇಶ್ ,ಕಬ್ಬಳ್ಳಿ ಮಹೇಶ್, ಬಿಜಿ ಶಿವಕುಮಾರ್, ಜಿಕೆ ಲೋಕೇಶ್, ಕುಮಾರ್, ಬಸವರಾಜು ,ಅಣ್ಣಯ್ಯ ಸ್ವಾಮಿ, ಚಿದಾನಂದ, ಮಹೇಂದ್ರ ಎಚ್ಪಿ, ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್, ನವೀನ್, ಮಂಜಪ್ಪ ಬಿಎಂ, ಕಾರ್ಯಕರ್ತರು ಮುಖಂಡರು ಹಾಜರಿದ್ದರು
ವರದಿ:- ಸದಾನಂದ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.