March 12, 2025

Bhavana Tv

Its Your Channel

ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿ ಇದ್ದರು ಬಲವಂತವಾಗಿ ಮುಸ್ಲಿಂ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿಸುತ್ತಿದ್ದ ನಾಲ್ವರ ಮೇಲೆ ಪ್ರಕರಣ ದಾಖಲು

ಭಟ್ಕಳ: ಹಿಜಾಬ್ ತೀರ್ಪಿನ ಹಿನ್ನೆಲೆ ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿಯ ನಡುವೆ ತೀರ್ಪಿನ ವಿರುದ್ಧ ಬಲವಂತವಾಗಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿಸುತ್ತಿದ್ದ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.

ಆರೋಪಿತರನ್ನು  ಶಾರೀಕ್ ಅನೀಸ್ ಪನ್ ಸೋಪ್ತಕರ್, ತೈಮುರ್ ಹಸ್ಸನ್ ಗವಾಯಿ ಶಾಹುಲ್ ಹಮೀದ್ ಗವಾಯಿ, ಅಜೀಮ್ ಅಹ್ಮದ್ ಮೊಹ್ಮದ ಅರಿಫ್, ಮೋಹಿದ್ದೀನ್ ಅಬೀರ್ ಅಬುಮೊಹ್ಮದ ಎಂದು ಗುರುತಿಸಲಾಗಿದೆ.ಇವರೆಲ್ಲ ಹಿಜಾಬ್ ನಿಷೇಧದ  ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಭಟ್ಕಳದಲ್ಲಿ ಮುಂಜಾಗ್ರತವಾಗಿ ಯಾವುದೇ ಅನುಮತಿ ಪಡೆಯದೆ ಗಲಾಟೆ ಮಾಡುವ ಉದ್ದೇಶದಿಂದ ಹೈಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ರೀತಿಯ ಪ್ರತಿಭಟನೆ, ಸಾರ್ವಜನಿಕ ಮೆರವಣಿಗೆ ,ಸಭೆ ಸಮಾರಂಭ ನಡೆಸುವುದನ್ನು ನಿಷೇದವಿದ್ದರು ಭಟ್ಕಳ ಹಳೆ ಬಸ್ ನಿಲ್ದಾಣದ ಸಮೀಪ ಹೈಕೋರ್ಟ್ ಘೋಷಿಸಿದ ಹಿಜಾಬ್ ತೀರ್ಪಿನ ವಿರುದ್ಧ ಭಟ್ಕಳದಲ್ಲಿ ಶಾಂತಿಯನ್ನು  ಕದಡುವ ಉದ್ದೇಶದಿಂದ ಬಲವಂತವಾಗಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿಸಿದ್ದಾರೆ.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾದ್ಯಂತ ನಿಷೇಧಾಜ್ಞೆ ಮಾಡಿದ್ದನ್ನು ಉದ್ದೇಶ ಪೂರಕವಾಗಿ ಉಲ್ಲಂಘನೆ ಮಾಡಲಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ

error: