ಭಟ್ಕಳ: ತಾಲೂಕಿನಲ್ಲಿ ಅರ್ಹರಿಗೆ ದಿನಸಿ ಹಾಗೂ ತರಕಾರಿಯ ಕಿಟ್ ವಿತರಿಸುತ್ತಿರುವ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಎಚ್.ಆರ್.ಎಸ್. ವೆಂಕಟಾಪುರದ ಕೆಲವು ಮನೆಗಳಿಗೆ ತೆರಳಿ ಜೀವನಾವಶ್ಯಕ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್‌ನ ಮೌಲಾನಾ ಮೊಹಮ್ಮದ್ ಜುಬೇರ್ ಅವರು ನಾವೆಲ್ಲರೂ ಒಂದೇ, ಒಬ್ಬರು ಸಂಕಷ್ಟದಲ್ಲಿರುವಾಗ ಅವರಿಗೆ ಸಹಾಯ ಮಾಡುವುದು ಮಾನವ ಧರ್ಮವಾಗಿದ್ದು ದೇಶದೆಲ್ಲೆಡೆ ಕೋವಿಡ್-೧೯ರಿಂದಾಗಿ ಲಾಲ್‌ಡೌನ್ ಆಗಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಬಡವ ಬಲ್ಲಿದ ಎನ್ನುವ ಬೇಧಭಾವ ಕೂಡಾ ಇಲ್ಲದೇ ಎಲ್ಲರಿಗೂ ತೊಂದರೆಯಾಗಿದೆ. ಈ ಭಾಗದ ಜನರು ಕೂಡಾ ಸಂಕಷ್ಟದಲ್ಲಿದ್ದು ಅವರ ಸಹಾಯಕ್ಕೆ ನಾವಿದ್ದೇವೆ ಎನ್ನುವುದನ್ನು ತಿಳಿಸಲು ಇಲ್ಲಿಗೆ ಬಂದಿದ್ದೇವೆ. ಎಲ್ಲರೂ ಕೂಡಾ ಕೋವಿಡ್-೧೯ರ ನಿಯಮ ಪಾಲಿಸಿ, ಮನೆಯಲ್ಲಿಯೇ ಸುರಕ್ಷಿತವಾಗಿರಿ, ಯಾವುದೇ ಕಾರಣಕ್ಕೂ ಹೊರಗಡೆ ಬಂದು ಸಂಕಷ್ಟಕ್ಕೆ ಸಿಲುಕದಿರಿ ಎನ್ನುವ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಸದಸ್ಯ ಎಂ. ಆರ್. ಮಾನ್ವಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಜಾಲಿ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹೀಂ, ಜಾಲಿ ಪಟ್ಟಣ ಪಂಚಾಯತ್ ಸದಸ್ಯ ಮಂಗಳ ಗೊಂಡ, ಎಚ್.ಆರ್.ಎಸ್.ನ ಖಮರುದ್ದೀನ್ ಮುಷಾಯಿಕ್ ಮುಂತಾದವರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.