April 27, 2024

Bhavana Tv

Its Your Channel

ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಕ್ವಾರೆಂಟೈನ್ ಸೀಲು

ಭಟ್ಕಳ: ಲಾಕ್‌ಡೌನ್ ನಿಯಮ ಉಲ್ಲಂಘಸಿದ ಆರೋದಡಿ ಮಸೀದಿಯಲ್ಲಿ ನಮಾಜ್ ನಿರ್ವಹಿಸುತ್ತಿದ್ದ ಮೂರು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಅವರ ಕೈಗೆ ೧೪ ದಿನಗಳ ಕ್ವಾರೆಂಟೈನ್ ಸೀಲು ಹಾಕಿ ಬಿಡುಗಡೆಗೊಳಿಸಿದ ಘಟನೆ ಸೋಮವಾರ ಸಂಜೆ ೭ಗಂಟೆಗೆ ಹೆಬಳೆ ಗ್ರಾ.ಪಂ ವ್ಯಾಪ್ತಿಯ ತೆಂಗಿನಗುoಡಿ ಅಥರ್ ಮೊಹಲ್ಲಾದಅಬ್ದುಲ್‌ರಹೀಮ್‌ಅಥರ್ ಮಸೀದಿಯಲ್ಲಿ ಜರಗಿದೆ.
ಘಟನೆಗೆ ಸಂಬoಧಿಸಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ಉಂಟಾಗಿದ್ದು ಭಟ್ಕಳದಲ್ಲಿ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಈ ಕುರಿತಂತೆ ಮರ್ಕಝಿಜಮಾಅತುಲ್ ಮುಸ್ಲಿಮೀನ್ ತೆಂಗಿನಗುoಡಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್‌ಇಕ್ಬಾಲ್ ಬಂಗಾಲಿ ಮಾಹಿತಿ ನೀಡಿದ್ದು ನಾವು ಲಾಕ್‌ಡೌನ್ ನಿಯಮಎಲ್ಲೋ ಉಲ್ಲಂಘಿಸಿಲ್ಲ. ತಂಝಿಮ್ ಹಾಗೂ ವಕ್ಫ್ ಬೋರ್ಡ್ ನಿರ್ದೇಶನದಂತೆ ಪಾಲನೆ ಮಾಡುತ್ತಿದ್ದು ಕೇವಲ ಮೂರು ಮಂದಿ ಮಾತ್ರ ನಮಾಝ್ ನಿರ್ವಹಿಸುತ್ತಿದ್ದಾರೆ. ಮಸೀದಿಯಲ್ಲಿ ಮೂವರಿಗಿಂತಒಬ್ಬ ವ್ಯಕ್ತಿಯು ಹೋಗಲು ಅನುಮತಿಇಲ್ಲ. ಹಾಗಾಗಿ ಪೊಲೀಸರು ಲಾಕ್‌ಡೌನ್ ನಿಯಮಉಲ್ಲಂಘನೆ ನೆಪವೊಡ್ಡಿವಿನಾಕಾರಣ ನಮಗೆ ಕಿರುಕುಳ ನೀಡುತ್ತಿದ್ದಾರೆಎಂದು ಆರೋಪಿಸಿದ್ದಾರೆ.
ಈ ಕುರಿತಂತೆ ಸ್ಥಳಿಯ ಆನ್‌ಲೈನ್ ಜಾಲತಾಣವೊಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜುರನ್ನು ದೂರವಾಣಿ ಮೂಲಕ ಸಂರ್ಪಕಿಸಿದ್ದು, ಸಾರ್ವಜನಿಕರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಸೀದಿಯಲ್ಲಿ ನೇಮಕವಾಗಿರುವ ಇಮಾಮ್ ಹಾಗೂ ಇರತ ಇಬ್ಬರನ್ನು ಹೊರತುಪಡಿಸಿ ಬೇರೆಯವರಿಗೆ ಮಸೀದಿಯಲ್ಲಿ ನಮಾಜ್ ನಿರ್ವಹಿಸಲು ಅವಕಾಶವಿಲ್ಲ. ಸೋಮವಾರ ಭಟ್ಕಳದಲ್ಲಿ ಪೊಲೀಸರು ವಶಪಡಿಸಿಕೊಂಡಿರು ವ್ಯಕ್ತಿಗಳು ಮಸೀದಿಯಲ್ಲಿ ನೇಮಕಗೊಂಡ ಇಮಾಮರು ಆಗಿರಲಿಲ್ಲ ಕಾರಣ ಅವರನ್ನು ವಶಪಡಿಸಿಕೊಂಡು ಎಚ್ಚರಿಕೆಯನ್ನು ನೀಡಿ ಸೋಮವಾರವೇ ಮನೆಗೆ ಕಳುಹಿಸಿದ್ದಾರೆ. ಭಟ್ಕಳದಲ್ಲಿ ಆದಷ್ಟು ಮಟ್ಟಿಗೆ ಎಲ್ಲರೀತಿಯ ಸೌಲಭ್ಯಗಳನ್ನು ನೀಡಿದ್ದೇವೆ ಎಂದು ಸ್ಪಷ್ಠೀಕರಿಸಿದ್ದಾರೆ.

error: