September 18, 2024

Bhavana Tv

Its Your Channel

ಪವಿತ್ರ ರಮಝಾನ್; ಲಾಕ್‌ಡೌನ್ ಮುಗಿಯುವವರೆಗೂ ಮನೆಯಲ್ಲೇ ನಮಾಝ್ ಮಾಡಿ-ಚೀಫ್ ಖಾಝಿ ಮೌಲಾನ್ ಕ್ವಾಜಾ ಅಕ್ರಮಿ

ಭಟ್ಕಳ: ರಮಝಾನ್ ಮಾಸವು ಇಡಿ ಜಗತ್ತಿನ ಮುಸ್ಲಿಮರ ಪಾಲಿಗೆ ಅತ್ಯಂತ ಪುಣ್ಯದಾಯಕ ಹಾಗೂ ಪವಿತ್ರವಾಗಿದ್ದು ಸಧ್ಯದ ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮುಗಿಯುವವರೆಗೆ ವಿಶೇಷ ತರಾವಿಹ್ ಪ್ರಾರ್ಥನೆ ಸೇರಿದಂತೆ ಎಲ್ಲ ನಮಾಝ್ ಗಳನ್ನು ತಮ್ಮ ತಮ್ಮ ಮನೆಯಲ್ಲಿ ನಿರ್ವಹಿಸುವಂತೆ ಜಮಾಅತುಲ್ ಮುಸ್ಲಿಮೀನ್ ಮರ್ಕಝಿ ಖಲಿಫಾ ಜಮಾಆತ್ ನ ಪ್ರಧಾನ ಖಾಜಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ಮನವಿ ಮಾಡಿಕೊಂಡಿದ್ದಾರೆ.
ಅವರು ಸರ್ವಜಮಾಅತ್ ನ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.
ಇಂದು ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಜನರು, ವಿಜ್ಞಾನಿಗಳು ಕೂಡ ಈ ರೋಗದಿಂದ ಅತ್ಯಂತ ತೊಂದರೆಯಲ್ಲಿದ್ದಾರೆ. ಇದರ ಸಂಪೂರ್ಣ ಚಿಕಿತ್ಸೆಯನ್ನು ಇದುವರೆಗೂ ಜಗತ್ತಿನಲ್ಲಿ ಯಾರೂ ಕೂಡ ಕಂಡು ಹಿಡಿಯಲು ಆಗುತ್ತಿಲ್ಲ ಈ ರೋಗದ ಮುಂದೆ ಎಲ್ಲರೂ ಕೈಚೆಲ್ಲಿ ಕುಳಿತುಕೊಂಡಿದ್ದಾರೆ. ಅದಕ್ಕಾಗಿ ಸರ್ಕಾರ ಲಾಕ್‌ಡೌನ್ ಹೇರಿದೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಇದ್ದುಕೊಂಡು ಧಾರ್ಮಿಕ ಆಚರಣೆಗಳನ್ನು ಮಾಡಬೇಕಾಗಿದೆ ರಮಝಾನ್ ಮಾಸವು ಇಡೀ ಜಗತ್ತಿನ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಈ ತಿಂಗಳಲ್ಲಿ ಮಾಡುವ ಆರಾಧನೆಗಳಿಗೆ ಅಲ್ಲಾಹನ ಬಳಿ ವಿಶೇಷವಾದ ಅನುಗ್ರಹಗಳು ಪ್ರಾಪ್ತಿಯಾಗಲಿವೆ. ನಿತ್ಯವೂ ನಡೆಯುವ ಸಾಮೂಹಿಕ ಆರಾಧನಾ ಕರ್ಮಗಳು ಲಾಕ್‌ಡೌನ್ ಅವಧಿ ಮುಗಿಯವವರೆಗೂ ತಮ್ಮ ತಮ್ಮ ಮನೆಗಳಲ್ಲಿ ಆಚರಿಸಿ ಯಾವುದೇ ಕಾರಣಕ್ಕೂ ನಿಯಮಗಳನ್ನು ಮೀರಿ ವರ್ತಿಸದಿರಿ ಎಂದು ಮೌಲಾನ ಮುಸ್ಲಿಮ ಸಮುದಾಯಕ್ಕೆ ಸಂದೇಶವನ್ನು ನೀಡಿದ್ದಾರೆ.
ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ಖಾಝಿಗಳೊಂದಿಗೆ ಸಭೆ ನಡೆಸಿದ್ದು ಈ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಲಾಕ್‌ಡೌನ್ ಅವಧಿಯಲ್ಲಿ ಯಾವ ರೀತಿ ನಾವು ಇದುವರೆಗೂ ನಡೆದುಕೊಂಡಿದ್ದೇವೆಯೂ ಅದೇ ರೀತಿ ತಾವು ರಮಝಾನ ಸಮಯದಲ್ಲೂ ಶುಕ್ರವಾರದ ನಮಾಝ್ ಸೇರಿದಂತೆ ರಾತ್ರಿ ನಡೆಯುವ ತರಾವಿಹ್ ನಮಾಝ್‌ಗಳನ್ನು ಮನೆಯಲ್ಲಿ ನಿರ್ವಹಿಸಿ, ಸ್ತಿçÃಯರು ಅಕ್ಕಪಕ್ಕದ ಮನೆಗಳಲ್ಲಿ ಸೇರದೆ ತಮ್ಮ ತಮ್ಮ ಮನೆಯಲ್ಲಿ ಪ್ರಾರ್ಥನೆಗಳನ್ನು ಈಡೇರಿಸಿಕೊಳ್ಳಬೇಕು, ಯುವಕರು ರಾತ್ರಿ ಸಮಯದಲ್ಲಿ ಅಲ್ಲಲ್ಲಿ ಗುಂಪೂಗೂಡಿ ನಿಂತುಕೊಳ್ಳುವುದು, ಹರಟೆ ಹೊಡೆಯುವುದು ಕೂಡ ನಿಯಮಕ್ಕೆ ವಿರುದ್ಧವಾಗಿದ್ದು ಅದನ್ನು ಕೂಡ ಈ ರಮಝಾನ್ ಮಾಸದಲ್ಲಿ ವರ್ಜಿಸಬೇಕು. ರಮಝಾನ ಮಾಸದಲ್ಲಿ ಅತಿ ಹೆಚ್ಚು ಪ್ರಾರ್ಥನೆಗಳು ಸ್ವೀಕರಿಸಲ್ಪಡುತ್ತವೆ. ಎಲ್ಲರೂ ಕೂಡ ಮಾನವಕುಲಕ್ಕೆ ಬಂದಿರುವ ಈ ಸಂಕಷ್ಟ ನಿವಾರಣೆಗಾಗಿ ಉಪವಾಸ ಇಡುವ ಮತ್ತು ತೊರೆಯುವ ಸಮಯದಲ್ಲಿ ದೇವನಲ್ಲಿ ಪ್ರಾರ್ಥಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

error: