ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕರೋನಾ ವೈರಸ್ ನ್ನು ಹತೋಟಿಗೆ ತರಲು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಗಲಿರುಳು ಶ್ರಮಿಸುತ್ತಿದೆ. ಆದ್ದರಿಂದ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಪಾಲನೆ ಅನಿವಾರ್ಯವಾಗಿದೆ. ಎಲ್ಲರೂ ಕೈಜೋಡಿಸಿ ಹೋರಾಡಿದರೆ ಮಾತ್ರ ಕರೋನ ವೈರಸ್ ನಿಂದ ಮುಕ್ತಿ ಹೊಂದಬಹುದಾಗಿದೆ ಎಂದು ಶಾಸಕ ಸುನಿಲ ನಾಯ್ಕ ಹೇಳದ್ದಾರೆ
ಇಂತಹ ಸಂದರ್ಭದಲ್ಲಿ ದುಡಿಮೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಗಳಿಗೆ ದುಡಿಮೆಯಿಲ್ಲದೆ ದಿನಕಳೆಯಲು ಕಷ್ಟಸಾದ್ಯವಾಗುತ್ತಿದೆ. ಇಂತಹ ಕಡುಬಡವ ಕುಟುಂಬಗಳಿಗೆ ನನ್ನಿಂದಾಗುವ ಸಣ್ಣ ಸೇವೆಯನ್ನು ವದಗಿಸುವ ಸಲುವಾಗಿ ನನ್ನ ಖಾಸಗಿ ಕಛೇರಿಯಲ್ಲಿ ಪ್ರತಿನಿತ್ಯ ೫೦೦ ರಿಂದ ೬೦೦ ದಿನಸಿ ಸಾಮಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ತಯಾರಿಸಲಾಗುತ್ತಿದ್ದು ಕ್ಷೇತ್ರದ ಅತಿ ಕಡು ಬಡವರಿಗೆ ತಲುಪಿಸುವ ಕೆಲಸ ಸಾಗುತ್ತಿದೆ. ಇದುವರೆಗೂ ಸರಿಸುಮಾರು ೬೫೦೦ ಕುಟುಂಬಗಳಿಗೆ ಕಿಟ್ ಗಳನ್ನು ನೀಡಿದ್ದು ೧೦,೦೦೦ ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಲಾಗಿದೆ ಎಂದರು.
ಇನ್ನುಳಿದAತೆ ಕ್ಷೇತ್ರದಲ್ಲಿನ ಸಂಘ ಸಂಸ್ಥೆಗಳು, ಬಿಜೆಪಿಯ ಮುಖಂಡರು, ಊರಿನ ಮುಖಂಡರು, ಪಂಚಾಯತ್ ಸದಸ್ಯರು, ಮಾಜಿ ಶಾಸಕರು, ಸರ್ಪನಕಟ್ಟಾ ಸ್ಪೋರ್ಟ್ಸ್ ಕ್ಲಬ್ ನವರು ಹೀಗೆ ಹಲವರು ಈ ಒಂದು ಸಾಮಾಜಿಕ ಕಾರ್ಯದಲ್ಲಿ ಪಕ್ಷಾತೀತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವದು ಹೆಮ್ಮೆಯ ಸಂಗತಿಯಾಗಿದ್ದು ಎಲ್ಲರನ್ನೂ ಅಭಿನಂದಿಸಿದ್ದಾರೆ.
ಅಲ್ಲದೆ ವಿಶೇಷವಾಗಿ ದಿನನಿತ್ಯ ಕಛೇರಿಯಲ್ಲಿ ಕಿಟ್ ಗಳನ್ನು ತಯಾರಿಸಲು ಸಹಕರಿಸುತ್ತಿರುವ ಹಾಗೂ ಬಡಕುಟುಂಬಗಳಿಗೆ ಆ ಕಿಟ್ ಗಳನ್ನು ತಲುಪಿಸುತ್ತಿರುವ ಕಾರ್ಯಕರ್ತ ಮಿತ್ರರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ