December 22, 2024

Bhavana Tv

Its Your Channel

ಮೈಸೂರು ವಿಶ್ವ ವಿದ್ಯಾನಿಲಯದ 102ನೇ ಘಟಿಕೋತ್ಸವದ ಪ್ರಯುಕ್ತ ಪುನೀತ್ ರಾಜಕುಮಾರ್ ರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

ಮೈಸೂರು. ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದ ಪ್ರಯುಕ್ತ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಮರಣೋತ್ತರವಾಗಿ ಪುನೀತ್ ರಾಜ್ ಕುಮಾರ್ ರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜ್‌ಕುಮಾರ್ ರವರ ಕುಟುಂಬಸ್ಥರು ನೆರೆದಿದ್ದರು. ಇದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸದಸ್ಯರಾದ ಎಂ.ಸಿ. ರಾಜಶೇಖ ರ್ ವಕೀಲರು ಹಾಜರಿದ್ದರು ಸದರಿ ಪ್ರಶಸ್ತಿ ಪ್ರಧಾನ ಮಾಡಿರುವುದು ಮತ್ತೊಂದು ಕಡೆ ಮರಣೋತ್ತರವಾಗಿ ನೀಡುತ್ತಿರುವುದು ದುಃಖಕರ ವಿಚಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: