March 12, 2025

Bhavana Tv

Its Your Channel

ಸ್ನೇಹ ವಿಶೇಷ ಶಾಲೆಯ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಸಮಾಜ ಸೇವಕ ಈಶ್ವರ ನಾಯ್ಕ

ಭಟ್ಕಳ: ಉದ್ಯಮಿಗಳು , ಸಮಾಜ ಸೇವಕರು ಹಾಗೂ ರಾಜ್ಯ ಕಾಸ್ಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷರು ಹಾಗೂ ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾ ಪ್ರಭಾರಿಯಾಗಿರುವ ಈಶ್ವರ ನಾಯ್ಕ ತಮ್ಮ 55ನೆ ವರ್ಷ ಹುಟ್ಟು ಹಬ್ಬವನ್ನು ತಾಲೂಕಾಸ್ಪತ್ರೆಯ ರೋಗಿಗಳು ಹಾಗೂ ಕೋಕ್ತಿಯ ಸ್ನೇಹ ವಿಶೇಷ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಂಡರು.

ಒಬ್ಬ ವ್ಯಕ್ತಿ ಪರಿಶ್ರಮ ಹಾಗೂ ಆಸಕ್ತಿ ಇದ್ದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಭಟ್ಕಳದ ಉದ್ಯಮಿ ಈಶ್ವರ್ ನಾಯ್ಕ ಉದಾಹರಣೆಯಾಗಿದ್ದಾರೆ ಬಡ ಕುಟುಂಬದಿAದ ಬಂದ ಈಶ್ವರ್ ನಾಯಕ್ ರವರು ಹಂತ ಹಂತವಾಗಿ ಮೇಲೆ ಬಂದು ನಂತರ ಕ್ಲಾಸ್ ಒನ್ ಗುತ್ತಿಗೆದಾರರಾಗಿ ಗುರತಿಸಿಕೊಂಡವರು ಇವರು ಸರ್ಕಾರದ ಹಲವಾರು ರಸ್ತೆ ಯೋಜನೆಗಳನ್ನು ನಡೆಸಿದ್ದು ಇವರು ನಡೆಸಿದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುತ್ತದೆ ಎಂದು ಜನಸಾಮಾನ್ಯರಲ್ಲದೆ ಅಧಿಕಾರಿಗಳು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಇದಲ್ಲದೆ ಪಿಎಲ್ ಡಿ ಬ್ಯಾಂಕ್ ನ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ .

ಭಟ್ಕಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಮೊದಲು ಡಯಾಲಿಸಿಸ್ ಸೆಂಟರ್ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದು ಭಟ್ಕಳದ ಜನತೆಗೆ ಇವರ ಬಗ್ಗೆ ಇನ್ನಷ್ಟು ಮೂಡುವಂತಾಗಿದೆ ಹಾಗೂ ರಾಜ್ಯ ಕಾಸ್ಕಾರ್ಡ ಬ್ಯಾಂಕ್ ನ ಮಾಜಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ .ಇವರು ತಮ್ಮ 55 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು .ತಮ್ಮ ಹುಟ್ಟು ಹಬ್ಬದ ಪ್ರಯುಕ್ತವಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದ್ದಾರೆ .
ನಂತರ ಭಟ್ಕಳದ ಕೋಕ್ತಿಯಲ್ಲಿರುವ ಸ್ನೇಹ ವಿಶೇಷ ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು .ಕಳೆದ 8 ವರ್ಷಗಳಿಂದ ಇದೇ ಶಾಲೆಯಲ್ಲಿ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು ಈಶ್ವರ ನಾಯ್ಕ ಕಳೆದ 2ವರ್ಷಗಳಿಂದ ಕೋವಿಡ್ ಹಿನ್ನೆಲೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ .ಸದ್ಯ ಈ ಬಾರಿ ಕೋವಿಡ್ ಕಡಿಮೆಯಾದ ಹಿನ್ನೆಲೆ ಇಂದು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಮತ್ತೊಮ್ಮೆ ಸ್ನೇಹ ವಿಶೇಷ ಮಕ್ಕಳೊಂದಿಗೆ ಆಚರಿಸಿಕೊಂಡರು
ನಂತರ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಈಶ್ವರ ನಾಯ್ಕ ಅವರ ಸಮಾಜ ಸೇವೆ ಹಾಗೂ ಆಸ್ಪತ್ರೆಗೆ ನೀಡಿದ ಕೊಡುಗೆ ಬಗ್ಗೆ ಮಾತನಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು
ನಂತರ ಮಾಜಿ ಸೈನಿಕರಾದ ಶ್ರೀಕಾಂತ ನಾಯ್ಕ ಮಾತನಾಡಿ
ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾ ಪ್ರಭಾರಿಯಾಗಿರುವ ಈಶ್ವರ ನಾಯ್ಕ ತಮ್ಮ 55ನೇ ವರ್ಷ ಹುಟ್ಟು ಹಬ್ಬವನ್ನು ಸಾಮಾಜಿಕ ಕಳಕಳಿಯೊಂದಿಗೆ ಭಟ್ಕಳ ತಾಲೂಕಾಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮುಖಾಂತರ ಆಚರಿಸಿಕೊಂಡಿದ್ದಾರೆ.ಹಾಗೂ ಯಾರಿಗೂ ತಿಳಿಸದೆ ಎಳೆಮರಿ ಕಾಯಿಯಂತೆ ಸಾಕಷ್ಟು ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ ಎಂದರು

ನಂತರ ಮಾತನಾಡಿದ ಈಶ್ವರ ನಾಯ್ಕ ನಾನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷನಾದ ಅವಧಿಯಲ್ಲಿ ಕೋಕ್ತಿಯಲ್ಲಿ ಈ ಶಾಲೆ ಇರುವುದು ನನ್ನ ಗಮನಕ್ಕೆ ಬಂದಿದ್ದು. ನಂತರ ಇಲ್ಲಿಗೆ ಭೇಟಿ ನೀಡಿದ್ದೆ. ಬಡತನದಿಂದ ಬಂದ ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ದೇನೆ..ಕೆಲಸದ ಒತ್ತಡದಲ್ಲಿ ಹುಟ್ಟು ಹಬ್ಬದ ದಿನ ಈ ರೀತಿ ಮಕ್ಕಳೊಂದಿಗೆ ಕಳೆಯಬೇಕೆಂಬ ನಿರ್ಣಯವನ್ನು ಅಂದು ಮಾಡಿಕೊಂಡು ಪ್ರತಿ ವರ್ಷ ಇಲ್ಲಿಗೆ ಬಂದು ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೆನೆ ಎಂದರು
ಈಶ್ವರ ನಾಯ್ಕ ಸಮಾಜ ಸೇವಕರು ಹಾಗೂ ರಾಜ್ಯ ಕಾಸ್ಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷರು ಹಾಗೂ ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾ ಪ್ರಭಾರ ಇದೇ ವೇಳೆ ಸ್ನೇಹಾ ವಿಶೇಷ ಶಾಲೆ ವತಿಯಿಂದ ತಾಲ್ಲೂಕು ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು

ಹಾಗೂ ಇದಕ್ಕೂ ಪೂರ್ವದಲ್ಲಿ ಸಾರದಹೊಳೆಯ ಶ್ರೀ ಕೋಟೆ ಹನುಮಂತ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಳಶೋತ್ಸವ ಇರುವ ಹಿನ್ನೆಲೆಯಲ್ಲಿ ತಮ್ಮ ಜನ್ಮದಿನ ಏಪ್ರಿಲ್ 6 ರಂದು ಇರುವ ಹಿನ್ನೆಲೆ 6.66.666 ಹಣವನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ್ದಾರೆ

ಈ ಕಾರ್ಯಕ್ರಮವನ್ನು ಸ್ನೇಹ ವಿಶೇಷ ಶಾಲೆಯ ಮುಖ್ಯಸ್ಥೆ ಮಾಲತಿ ಉದ್ಯಾವರ್ ನಿರೂಪಿಸಿದರು ಹಾಗೂ ಪಾಂಡು ನಾಯ್ಕ ವಂದಿಸಿದರು

ಈ ಸಂದರ್ಭದಲ್ಲಿ ತಾಲೂಕಾಸ್ಪತ್ರೆಯ ವೈದ್ಯೆ ಬೆರೋಟಿನ್ ಫೆರ್ನಾಂಡಿಸ್,ಪಾAಡು ನಾಯ್ಕ ಶ್ರೀಕಾಂತ ನಾಯ್ಕ, ಸುಧಾಕರ ನಾಯ್ಕ, ನಾಗೇಶ ನಾಯ್ಕ ಹೊನ್ನೆಗದ್ದೆ,ನಾಗೇಂದ್ರ ನಾಯ್ಕ ಸರ್ಪನಕಟ್ಟೆ , ಶ್ರೀನಿವಾಸ ನಾಯ್ಕ ಹನುಮಾನ ನಗರ, ವಿಶ್ವ ನಾಯ್ಕ, ನಾಗೇಂದ್ರ ನಾಯ್ಕ ಹೇರೂರು, ಶಂಕರ ನಾಯ್ಕ,ಹಾಗೂ ಈಶ್ವರ ನಾಯ್ಕ ಅಭಿಮಾನಿ ಬಳಗ ಉಪಸ್ಥಿತರಿದ್ದರು

error: