March 12, 2025

Bhavana Tv

Its Your Channel

ಶ್ರೀ ಹಳೇಕೋಟೆ ಹನುಮಂತ ದೇವರ ಸಾರದಹೊಳೆ ವಿಡಿಯೋ ಗೀತೆ ಅನಾವರಣ ಗೊಳಿಸಿದ ಶಾಸಕ ಸುನಿಲ್ ನಾಯ್ಕ

ಭಟ್ಕಳ: ಶ್ರೀ ಹಳೇಕೋಟೆ ಹನುಮಂತ ದೇವರ ಸಾರದಹೊಳೆ ಆಡಳಿತ ಮಂಡಳಿಯವರ ನಿರ್ಮಾಣದಲ್ಲಿ, ರಾಜು ನಾಯ್ಕ ಚಿತ್ರಾಪುರ ಇವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಸಾರದ ಹೊಳೆ ಹನುಮಂತ ದೇವಸ್ಥಾನದ ಕುರಿತ ೬ ಹಾಡುಗಳಲ್ಲಿ ಅನುರಾಧ ಭಟ್ ಹಾಡಿರುವ ಒಂದು ಹಾಡು ಲಹರಿ ಸಂಸ್ಥೆಯ ಅಧಿಕೃತ ಯುಟ್ಯೂಬ್ ಚಾನಲ್‌ನಲ್ಲಿ ಈಗಾಲೇ ಬಿಡುಗಡೆಗೊಂಡಿದ್ದು ಎಲ್ಲಾಕಡೆ ಹರಿದಾಡ್ತಾ ಇದೆ.. ಹಾಗೆ ರಾಜೇಶ್ ಕೃಷ್ಣನ್ ಹಾಡಿರುವ ಗೀತೆಯು ಸಹ ಬಿಡುಗಡೆಗೊಂಡಿದ್ದು ಇದನ್ನು ನಮ್ಮ ಶಾಸಕರಾದ ಸುನಿಲ್ ನಾಯ್ಕ ಅವರು ಅನಾವರಣ ಗೊಳಿಸಿ ಮಾತನಾಡಿ ಶುಭ ಹಾರೈಸಿದರು..
ಪುಟ್ಟ ಹೃದಯಗಳ ಕರೆದ ಕರೆಗೆ ಬರುತ್ತಿದ್ದಾನೆ ವಾನರ ನಾಯಕ.. ಇದರಲ್ಲಿ ಹೇ ಭಗವಾನ್ ವಿಡಿಯೋ ಸಾಂಗ್ ಕೂಡ ಬಿಡುಗಡೆಗೆ ಸಿದ್ಧವಾಗಿದೆ ಎಂದು ರಾಜು ನಾಯ್ಕ ತಿಳಿಸಿದ್ದಾರೆ.

error: