
ಭಟ್ಕಳ : 34 ಲಕ್ಷ ರೂ. ವೆಚ್ಚದ ಮಾವಳ್ಳಿ 1 ಪಂಚಾಯತ ವ್ಯಾಪ್ತಿಯ ಹಿರೆದೋಮಿ ಭಾಗದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿಯಲ್ಲಿ ಹಣ ಲಪಟಾಯಿಸುವ ಉದ್ದೇಶ ಕಂಡು ಬಂದಿದೆ ಎಂಬುದಾಗಿ ಆರೋಪಿಸಿ ಕಾಮಗಾರಿ ಪೂರ್ಣಗೊಳ್ಳುವಂತೆ ತನಿಖೆ ನಡೆಸಬೇಕೆಂದು ಮಾವಳ್ಳಿ 1 ಪಂಚಾಯತ ಸದಸ್ಯರು ಸಹಾಯಕ ಆಯುಕ್ತೆ ಮಮತಾದೇವಿ ಜಿ ಎಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪಂಚಾಯತ ವ್ಯಾಪ್ತಿಯ ಹಿರೆದೋಮಿ ಗ್ರಾಮದಲ್ಲಿ 34 ಲಕ್ಷದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ 2 ವರ್ಷದಿಂದ ನಡೆಯುತ್ತಿದೆ. ಆದರೆ ಇಲ್ಲಿನ ತನಕ ಈ ಭಾಗದ ಜನರಿಗೆ ಕುಡಿಯುವ ನೀರಿನ ಸರಬರಾಜು ಆಗುತ್ತಿಲ್ಲ. ಕಾಮಗಾರಿ ಪೂರ್ಣಗೊಳ್ಳದೇ ಈಗಾಗಲೇ ಕಾಮಗಾರಿಯ ಬಿಲ್ ಸಹ ಬಿಡುಗಡೆಯಾಗಿದೆ. ಪೈಪ್ ಲೈನ್ ಅಳವಡಿಸಿಲ್ಲ. ಕೇವಲ ಟ್ಯಾಂಕ್ ನಿರ್ಮಿಸಿ ಅದಕ್ಕೆ ಪಂಪ್ ಸೆಟ್ ಅಳವಡಿಸಿದ್ದಾರೆ ಹೊರತು ನೀರಿನ ಸರಬರಾಜು ಜನರಿಗೆ ಆಗುತ್ತಿಲ್ಲ. ಹಾಗೂ ಟ್ಯಾಂಕ್ ಕೆಳಗಡೆ ನಿರ್ಮಿಸಿದ ಚೇಂಬರ್ ಈಗಾಗಲೇ ಒಡೆದು ಹೋಗಿದ್ದು, ಇವೆಲ್ಲದರ ಹಣವನ್ನು ಅಧಿಕಾರಿಗಳು, ಕಾಮಗಾರಿ ಗುತ್ತಿಗೆದಾರರು ಹಾಗೂ ಇಂಜಿನಿಯರಗಳು ಲಪಟಾಯಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
34 ಲಕ್ಷ ರೂ. ವೆಚ್ಚದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದರು ಉಪಯೋಗಕ್ಕೆ ಬಾರದಾಗಿದೆ. ಕಾಮಗಾರಿ ಕೆಲಸ ಮುಗಿಯದೇ ಹಣ ಬಿಡುಗಡೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದೇ ಜನರು ಪರಿತಪಿಸುವಂತಾಗಿದೆ. ಈಗಾಗಲೇ ಗ್ರಾಮ ಪಂಚಾಯತಿ ಬಳಕೆ ಒಪ್ಪಿಸಲಾಗಿದ್ದು ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೆ ಯಾರು ಸ್ಪಂದಿಸುತ್ತಿಲ್ಲ ಎಂಬುದು ಕೆಲಸ ಮುಗಿಸಿ ತಕ್ಷಣವೇ ಪಂಚಾಯತಗೆ ಒಪ್ಪಿಸುವಂತೆ ಕಳೆದ ತಿಂಗಳು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಹಾಗೂ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಒಂದು ವಾರದ ಗಡುವು ನೀಡಲಾಗಿತ್ತು. ಆದರೆ ಒಂದು ತಿಂಗಳು ಕಳೆದರು ಸಹ ಅಧಿಕಾರಿಗಳು ಇತ್ತ ಕಡೆ ಬಂದಿಲ್ಲವಾಗಿದ್ದು ಸರಕಾರದ ಹಣವು ಅನಾವಶ್ಯಕ ಪೋಲಾಗಿದೆ.
ಈ ಹಿನ್ನೆಲೆ ಸಹಾಯಕ ಆಯುಕ್ತೆ ಮಮತಾದೇವಿ ಜಿ ಎಸ್ ಅವರನ್ನು ಭೇಟಿ ಮಾಡಿದ ಪಂಚಾಯತ ಸದಸ್ಯರು ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರಿನ ಟ್ಯಾಂಕ್ ಸದ್ಬಳಕೆ ಆಗುವಂತೆ ಕೆಲಸ ಮಾಡಿಕೊಡಲು ಮನವಿ ಸಲ್ಲಿಸಿದರು.
ಈ ಸಂದರ್ಭಗಳಲ್ಲಿ ಮಾವಳ್ಳಿ -1 ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾದೇವಿ ತಿಮ್ಮಪ್ಪ ಮೋಗೇರ, ಸದಸ್ಯರಾದ ನಾಗೇಶ ರಾಮ ನಾಯ್ಕ, ನಯನ ನಾಗೇಶ್ ನಾಯ್ಕ, ಪದ್ಮ ಗೋವಿಂದ ನಾಯ್ಕ, ಆಹಿಶಾ ನಾಸಿರಾ, ತಿಮ್ಮಪ್ಪ ಜಿ ನಾಯ್ಕ ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ