
ಭಟ್ಕಳ: ರಾಷ್ಟಿçÃಯ ಹೆದ್ದಾರಿ ಹೋರಾಟ ಸಮಿತಿಯ ಕೋರಿಕೆಯ ಮೇರೆಗೆ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅವರು ಭಟ್ಕಳದ ಶಂಶುದ್ಧೀನ್ ಸರ್ಕಲ್ ನಿಂದ ಪಿ.ಎಲ್.ಡಿ. ಬ್ಯಾಂಕ್ ತನಕ ಪಿಲ್ಲರ್ ಮೇಲೆ ಫ್ಲೈ ಓವರ್‌ಮಾಡುವ ಬೇಡಿಕೆಗೆ ಪೂರಕವಾದ ಅಂಶಗಳನ್ನು ಪರಿಶೀಲಿಸಿದರು.
ಪಿ.ಎಲ್.ಡಿ. ಬ್ಯಾಂಕ್ ಸರ್ಕಲ್ ಹತ್ತಿರ ಮೊದಲು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ಅವರು ನಂತರ ಇಲ್ಲಿನ ಶಂಶುದ್ಧೀನ್ ಸರ್ಕಲ್ ಹತ್ತಿರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ವಿಷಯವನ್ನು ವಿವರಿಸಿದ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ರಾಜೇಶ ನಾಯಕ ಅವರು ಜಿಲ್ಲಾಧಿಕಾರಿಗಳಿಗೆ ಪಿಲ್ಲಾರ್ ಹಾಕಿ ಫ್ಲೆöÊ ಓವರ್ ಮಾಡುವ ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಟ್ಟರು. ಎನ್.ಎಚ್.ಎ.ಐ. ಅಧಿಕಾರಿಗಳು, ಐ.ಆರ್.ಬಿ. ಅಧಿಕಾರಿಗಳು ಈ ಸಂದರ್ಭದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಇಲ್ಲಿನ ಶಂಶುದ್ಧೀನ್ ಸರ್ಕಲ್ನಲ್ಲಿ ಒಂದು ಅಂಡರ್ ಪಾಸ್ ಹಾಗೂ ಅಲ್ಲಿಂದ ೨೦೦ ಮೀಟರ್ ದೂರದಲ್ಲಿ ಇನ್ನೊಂದು ಅಂಡರ್ ಪಾಸ್ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದಾಗ ಹೆದ್ದಾರಿ ಹೋರಾಟ ಸಮಿತಿಯ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಭಟ್ಕಳದಲ್ಲಿ ಅತೀ ಹೆಚ್ಚು ವಾಹನಗಳಿದ್ದು ದಿನವೊಂದಕ್ಕೆ ೧೫೦ ಒಳ ಹೋಗುವ ಹಾಗೂ ೧೫೦ ಹೊರ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳೇ ಇವೆ. ಜಿಲ್ಲೆಯಲ್ಲಿಯೇ ಭಟ್ಕಳ ಅತೀ ಹೆಚ್ಚು ದ್ವಿಚಕ್ರ ಹಾಗೂ ಲಘು ವಾಹನ ಹೊಂದಿದ ತಾಲೂಕಾಗಿದೆ. ಇಲ್ಲಿ ಅಟೋ ರಿಕ್ಷಾ, ಟೆಂಪೋಗಳು ನಿಲ್ಲಿವುದಕ್ಕೂ ಸ್ಥಳವಿರುವುದಿಲ್ಲ ಎಂದರಲ್ಲದೇ ಯಾವುದೇ ಕಾರಣಕ್ಕೂ ನಾವು ರ‍್ಯಾಂಪ್ ಮಾಡುವುದಕ್ಕೆ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಡಿ. ಪನ್ನೇಕರ್, ವಿಶೇಷ ಭೂಸ್ವಾಧೀನಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ, ಎನ್.ಎಚ್.ಎ.ಐ. ಇಂಜಿನಿಯರ್ ನವೀನಕುಮಾರ, ಐ.ಆರ್.ಬಿ.ಯ ಸಾವಲ್ಕರ್, ಶ್ರೀನಿವಾಸ್, ತಹಸೀಲ್ದಾರ್ ಸುಮಂತ್ ಬಿ.ಇ., ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಇನ್ಸಪೆಕ್ಟರ್ ದಿವಾಕರ ಪಿ.ಎಂ. ಉಪಸ್ಥಿತರಿದ್ದರು. ಹೆದ್ದಾರಿ ಹೋರಾಟ ಸಮಿತಿಯ ಇನಾಯತುಲ್ಲಾ ಶಾಬಂದ್ರಿ, ಜೇಲಾನಿ ಮೊಹತೆಶಂ, ಜೇಲಾನಿ ಶಾಬಂದ್ರಿ, ಎಂ.ಆರ್. ನಾಯ್ಕ, ಮೋಹಿದ್ದೀನ್ ರುಕ್ನುದ್ಧೀನ್, ಅಬ್ದುರ್ರಖೀಬ್ ಎಂ.ಜೆ., ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ