March 12, 2025

Bhavana Tv

Its Your Channel

ಮೊಗೇರ ಸಮಾಜದ ಧರಣಿ ಸತ್ಯಾಗ್ರಹ ; ಜಾಗಟೆ, ಶಂಖ ನಾದದೊಂದಿಗೆ ಮೆರವಣಿಗೆ

ಭಟ್ಕಳ: ಮೊಗೇರ ಸಮಾಜ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮತ್ತೆ ಪುನಃ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ೨೧ನೇ ದಿನ ತಲುಪಿದ್ದು ಮುಂಡಳ್ಳಿ ಭಾಗದ ಸಮಾಜದ ನೂರಾರು ಜನರು ಇಂದು ಜಾಗಟೆ, ಶಂಖ ನಾದದೊಂದಿಗೆ ಇಲ್ಲಿನ ಬಂದರ ರಸ್ತೆಯಿಂದ ಮೆರವಣಿಗೆ ಯಲ್ಲಿ ಬಂದು ತಾಲೂಕಾ ಆಡಳಿತ ಸೌಧದ ಪಕ್ಕದಲ್ಲಿ ಧರಣಿ ಮುಂದುವರಿಸಿದರು.

ಮೆರವಣಿಗೆಯು ಶಂಶುದ್ಧೀನ್ ಸರ್ಕಲ್ ಬಳಿಯಲ್ಲಿ ಬರುತ್ತಲೇ ಮಂಜಯ್ಯ ಮೊಗೇರ ಎನ್ನುವ ಮಧ್ಯ ವಯಸ್ಕರೋರ್ವರು ತಲೆಯ ಮೇಲೆ ಪೆಟ್ರೋಲ್ ಸುರಿದುಕೊಂಡು ಕೈಯಲ್ಲಿರುವ ಲೈಟರ್ ಆನ್ ಮಾಡಲು ಪ್ರಯತ್ನಿಸಿದ್ದು ತಕ್ಷಣ ಮೆರವಣಿಗೆಯಲ್ಲಿರುವವರು ಹಾಗೂ ಬಂದೋಬಸ್ತಿಗಾಗಿ ಬಂದಿದ್ದ ಪೊಲೀಸರು ಅವರನ್ನು ತಡೆದು ಸಮಾಧಾನಗೊಳಿಸಿದರು.
ನಂತರ ಮೆರವಣಿಗೆಯು ಹೆದ್ದಾರಿಯಲ್ಲಿ ಸಾಗಿ ಧರಣಿ ಪ್ರದೇಶವನ್ನು ತಲುಪಿತು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಫ್. ಕೆ. ಮೊಗೇರ ಅವರು ತಮ್ಮ ಹೋರಾಟ ೨೧ನೇ ದಿನಕ್ಕೆ ಕಾಲಿಟ್ಟರೂ ಸರಕಾರ ಘಟ್ಟಿ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುವ ಬೇಸರ ಸಮಾಜ ಬಾಂಧವರಿಗೆ ಬಂದಿದೆ. ಪ್ರಮಾಣ ಪತ್ರ ನೀಡದೇ ಇರುವುದರಿಂದ ಸರಕಾರಿ ಸೌಲಭ್ಯದಿಂದ ವಂಚಿತರಾದ ಜನರು ಹತಾಷರಾಗಿದ್ದಾರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರವಾದರೆ ಅದಕ್ಕೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದೂ ಹೇಳಿದರು.

error: