
ಭಟ್ಕಳ: ಇತಿಹಾಸ ಪ್ರಸಿದ್ಧ ಸಾರದಾಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವರ ಪುನರ್ ನಿರ್ಮಾಣ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರಕಿದ್ದು,ಸಂಜೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅಸಂಖ್ಯಾತ ಭಕ್ತ ಗಣಗಳನ್ನು ಒಳಗೊಂಡ ಭವ್ಯ ಮೆರವಣಿಗೆಯೊಂದಿಗೆ ದೇವಸ್ಥಾನದ ಪರ ಪ್ರವೇಶ ಮಾಡಿದರು.

ತಾಲೂಕಿನ ಗಡಿ ಭಾಗವಾದ ಗೊರಟೆ ಕ್ರಾಸ್ನಿಂದ ಸಹಸ್ರಾರು ಬೈಕ್ಗಳ ರ್ಯಾಲಿಯೊಂದಿಗೆ ಸ್ವಾಮೀಜಿಯವರನ್ನು ಬರ ಮಾಡಿಕೊಳ್ಳಲಾಯಿತು. ಎಲ್ಲಿ ನೋಡಿದರಲ್ಲಿ ಕೇಸರಿ ಧ್ವಜಗಳು ಹಾರಾಡುತ್ತಿರುವುದು ಕಂಡು ಬಂತು, ಶ್ವೇತ ವರ್ಣದ ಪಂಚೆ, ಅಂಗಿ ಧರಿಸಿದ ಹನುಮಂತನ ಭಕ್ತರು ದಾರಿಯುದ್ದಕ್ಕೂ ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿದರು.


ಪುಟ್ಟ ಪುಟ್ಟ ಮಕ್ಕಳು ಹನುಮಂತನಿಗೆ ನಮಿಸಿ ಜಯಕಾರ ಕೂಗಿದರು, ಅಶ್ವಾರೂಢ ವಾಹನದಲ್ಲಿ ವಿರಾಜಮಾನರಾದ ಸ್ವಾಮೀಜಿಯವರನ್ನು ಇಲ್ಲಿನ ವೆಂಕಟಾಪುರದಿAದ ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು, ಚಂಡೆ ವಾದನ, ಗೊಂಬೆ ಕುಣಿತ, ಬೃಹದಾಕಾರದ ಹನುಮಾನ್, ಆಗಸದಲ್ಲಿ ಗಧೆಯೊಂದಿಗೆ ಹಾರಿ ಬಂದ ಆಂಜನೇಯ, ಇಲ್ಲಿನ ಗೊಂಡರ ಸಮಾಜದ ಸಾಂಪ್ರದಾಯಿಕ ಢಿಕ್ಕೆ ಕುಣಿತ, ಇಲ್ಲಿನ ಕುಂಬ್ರಿ ಮರಾಠಿ ಜನಾಂಗದ ಗುಮೆ ನೃತ್ಯಗಳು ಮೆರವಣಿಗೆಗೆ ವಿಶೇಷ ಮೆರುಗನ್ನು ತಂದವು, ಸರಿಸುಮಾರು 15 ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಕಾಸ್ಕಾರ್ಡ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ಮತ್ತಿತರ ಗಣ್ಯರು ತಮ್ಮ ಬೆಂಬಲಿಗರೊAದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು,


ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ನಿಂತು ಭವ್ಯ ಮೆರವಣಿಗೆಯನ್ನು ಕಣ್ಣುಂಬಿಸಿಕೊAಡರು. ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಸುಬ್ರಾಯ ನಾಯ್ಕ ತರ್ನಮಕ್ಕಿ, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ, ಮಾವಳ್ಳಿ ಹೋಬಳಿ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ ಗುಮ್ಮನಹಕ್ಕು, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಸ್ವಯಂ ಸೇವಕರು ಮುಂದೆ ನಿಂತು ಎಲ್ಲಿಯೂ ನೂಕು ನುಗ್ಗಲು ಉಂಟಾಗದAತೆ ನೋಡಿಕೊಂಡರು. ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಸ್ವಯಂ ಸೇವಕರು ಮುಂದೆ ನಿಂತು ಎಲ್ಲಿಯೂ ನೂಕು ನುಗ್ಗಲು ಉಂಟಾಗದAತೆ ನೋಡಿಕೊಂಡರು. ಗೊರಟೆ ಕ್ರಾಸ್ನಿಂದ ಸಾರದಾಹೊಳೆ ದೇವಸ್ಥಾನದವರೆಗೂ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ್, ಮಹಾಬಲೇಶ್ವರ ನಾಯ್ಕ ನೇತ್ರತ್ವದಲ್ಲಿ ಪಿಎಸ್ಐಗಳು ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಹಾಗೂ ಸಂಚಾರ ವ್ಯವಸ್ಥೆ ನಿಯಂತ್ರಿಸಿದರು.


More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ