ಗುಂಡ್ಲುಪೇಟೆ:– ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 131 ನೇ ಜನ್ಮದಿನದ ಪ್ರಯುಕ್ತ ಯುವ ವಿಜ್ಞಾನಿ ಡಾ.ನವೀನ್ ಮೌರ್ಯ ಮತ್ತು ಅಭಿಮಾನಿ ಬಳಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಅನಾಥಾಶ್ರಮದ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಕಲ್ಪಿಸಿ ವಿಶಿಷ್ಠವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಿದರು..
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆಯನ್ನ ಯುವ ವಿಜ್ಞಾನಿ ಡಾ.ನವೀನ್ ಮೌರ್ಯ ಅಭಿಮಾನಿ ಬಳಗ ಸಿಎಂಎಸ್ ಅನಾಥಾಶ್ರಮ ಮಕ್ಕಳಿಗೆ ಮತ್ತು ಪೃಥ್ವಿ ಬುದ್ಧಿಮಾಂದ್ಯ ವಸತಿಯ ಮಕ್ಕಳಿಗೆ ಉಪಹಾರ , ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ವಿಭಿನ್ನವಾಗಿ ಸಂವಿಧಾನ ಶಿಲ್ಪಿ ಮಹಾನ್ ನಾಯಕರ ಜನ್ಮದಿನವನ್ನ ಆಚರಿಸಿದರು..
ಅಂಬೇಡ್ಕರ್ ಜನ್ಮದಿನವನ್ನ ವಿಶಿಷ್ಟವಾಗಿ ಅರ್ಥಪೂರ್ಣವಾಗಿರಿಸಿದ ಯುವ ವಿಜ್ಞಾನಿ ಡಾ.ನವೀನ್ ಮೌರ್ಯ ಮಾತನಾಡಿ ಶೋಷಿತರ ಧ್ವನಿಯಾಗಿದ್ದ ಬಾಬಾ ಸಾಹೇಬರ ಕುರಿತಾದ ಸಂಪುಟಗಳ ಹಂಚಿಕೆ ಕಾರ್ಯಕ್ರಮವನ್ನ ನಾಳೆಯಿಂದ ಶುರುಮಾಡಲಿದ್ದು ಏಪ್ರಿಲ್ ತಿಂಗಳ ಅಂತ್ಯದವರೆಗೂ ಪುಸ್ತಕ ಹಂಚಿಕೆ ಮಾಡಲಾಗುವುದು, ವೃದ್ದಾಶ್ರಮ, ಅನಾಥಾಶ್ರಮ ನಿರ್ಗತಿಕರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲ್ಸ ಮಾಡಲಾಗುವುದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು..
ಕಳೆದ ಬಾರಿ ಕಾರಣಾಂತರಗಳಿAದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚಾರಣೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ, ಆದ್ರೆ ಈ ಬಾರಿ ತಾಲೂಕಿನ ಎಲ್ಲೆಡೆ ಹಬ್ಬದ ವಾತಾವರಣೆ ಸೃಷ್ಟಿಯಾಗಿದ್ದು ಜಗತ್ತು ಕಂಡ ಮಹಾನ್ ನಾಯಕನಿಗೆ ಗಮ್ಯ ಗೌರವವನ್ನ ವ್ಯಕ್ತಪಡಿಸಲಾಗುತ್ತಿದೆ…
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.