March 13, 2025

Bhavana Tv

Its Your Channel

ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಚಿಣ್ಣರ ಮೇಳದ ಸಮಾರೋಪ ಸಮಾರಂಭ

ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಸುದರ್ಶನ ಭಟ್ಕಳ ಇವರ ನೇತೃತ್ವದ ಅಸ್ಥೆಟಿಕ್ ಕಲ್ಚರಲ್ ಮತ್ತು ಎಜ್ಯುಕೇಶನಲ್ ಫೌಂಡೇಶನ್ ಆಯೋಜಿಸಿದ್ದ ಚಿಣ್ಣರ ಮೇಳದ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಡೋಲು ಬಾರಿಸುವುದರ ಮೂಲಕ ಅರ್ಬನ ಬ್ಯಾಂಕನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಶಂಭು ಎನ್ ಹೆಗಡೆ ಚಾಲನೆ ನೀಡಿದರು.

ಚಿಣ್ಣರ ಮೇಳ ಬೇಸಿಗೆ ಶಿಬಿರವು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯು ಬೆಳಕಿಗೆ ಬರಲು ಸಹಕಾರಿಯಾಗಿದೆ. ಕಳೆದ ಎರಡು ವ಼ರ್ಷಗಳಲ್ಲಿ ಕರೋನಾ ಮಹಾಮಾರಿಯಿಂದ ಮಕ್ಕಳು ಶೈಕ್ಷಣಿಕ ಸಾಂಸ್ಕೃÈತಿಕ ಚಟುವಟಿಕೆಗಳಿಂದ ದೂರ ಇದ್ದು ಮೊಬೈ¯ಗೆ ತೀರ ಹತ್ತಿರವಾಗಿದ್ದು ಬಹಳ ತೊಂದರೆಯನ್ನು ಅನುಭವಿಸಿದ್ದಾರೆ, ಪಾಲಕರು ಕೂಡ ಮಕ್ಕಳ ಬಗ್ಗೆ ಚಿಂತಿತರಾಗಿದ್ದ ಸಂದರ್ಭದಲ್ಲಿ ಈ ಚಿಣ್ಣರ ಮೇಳ ಸಂಜೀವಿನಿಯಾಗಿ ಬಂದಿದೆ ಹಲವಾರು ವೈವಿಧ್ಯಮಯ ಕಲೆ, ಸಂಸ್ಕೃತಿ ದೇಶಾಭಿಮಾನ , ಮಾನವೀಯ ಮೌಲ್ಯಗಳು ಮಕ್ಕಳಿಗೆ ಈ ಚಿಣ್ನರ ಮೇಳದಿಂದ ಸಿಕ್ಕಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಚಿಣ್ಣರ ಮೇಳ ಆಯೋಜಿಸ ಬೇಕು ಎಂದು ಸಾಹಿತಿಗಳು ಮತ್ತು ಭಟ್ಕಳ ಅರ್ಬನ ಬ್ಯಾಂಕನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಶಂಭು ಎನ್ ಹೆಗಡೆ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸುದರ್ಶನ ನಾಯ್ಕ, ಭಟ್ಕಳದ ಮಕ್ಕಳಿಗಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕೆನ್ನುವ ತುಡಿತ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನಾನು ಪಟ್ಟ ಪರಿಶ್ರಮಕ್ಕೆ ಇಂದು ಮಕ್ಕಳು ನೀಡಿದ ಪ್ರತಿಭಾ ಪ್ರದರ್ಶನ ಮತ್ತು ಪಾಲಕರು ನೀಡಿದ ಪ್ರತಿಕ್ರಿಯೆಯು ಸಮಾಧಾನ ನೀಡಿದ್ದು, ಮುಂದಿನ ದಿನಗಳಲ್ಲಿ ಇಂತಹುದೆ ಕಾರ್ಯಕ್ರಮಗಳನ್ನು ಆಯೋಜಿಸುವ ಹುಮ್ಮಸ್ಸು ನೀಡಿದೆ ಎಂದು ಹೇಳಿದರು. ಸಭಾ ಕಾರ್ಯಕ್ರಮದ ನಂತರ ಭಾಗವಹಿಸಿದ ವಿದ್ಯಾರ್ಥಿಗಳಿಂದ ಯಕ್ಷಗಾನ, ಭರತನಾಟ್ಯ, ಕಂಸಾಳೆ, ಕರಗ ಕೋಲಾಟ, ಚಂಡೆ, ನಾಟಕ ಮತ್ತು ಥಿಯೇರ‍್ನ ಪ್ರದರ್ಶನ ಪಾಲಕರಿಂದ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಯಿತು. ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಅನುಭವವನ್ನು ಶಿಬಿರಾರ್ಥಿಗಳಾದ ವಿಹಾ ಶಾನಭಾಗ, ಸ್ಮೃತಿ ಮತ್ತು ಅಕ್ಷರಾ ಹಂಚಿಕೊAಡರು. ಪಾಲಕರ ಕಡೆಯಿಂದ ಡಾ. ಲಕ್ಷಿö್ಮÃಶ ಮತ್ತು ಉಪನ್ಯಾಸಕರಾದ ಗುರುರಾಜ್ ಗೌಡ ಮಾತನಾಡುತ್ತಾ, ಇಂದಿನ ವೇಗದ ಜೀವನದಲ್ಲಿ ಇಂತಹ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಬಿಂಬಿಸುವಲ್ಲಿ ಪೂರಕವಾಗಿ ಕೆಲಸ ಮಾಡುತ್ತದೆ. ಜೊತೆಗೆ ಮಕ್ಕಳು ವೈವಿಧ್ಯಮಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಜಾ ಅವಧಿಯ ಸದುಪಯೊಗ ಪಡೆದುಕೊಂಡರು ಎಂದು ಹೇಳಿದರು. ಬೆಂಗಳೂರಿನಿAದ ಬಂದAತಹ ಕಲಾವಿದರನ್ನು ಮತ್ತು ಸ್ಥಳೀಯ ಕಲಾವಿದರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು

ಗಾನಶ್ರೀ ಕಲಾ ಸಂಸ್ಥೆ ಭಟ್ಕಳದ ಸಂಸ್ಥಾಪಕರಾದ ಶ್ರೀ ಈಶ್ವರ ಹಕ್ರೆ ಉಪಸ್ಥಿತರಿದ್ದರು. ರಾಜ್ಯ ಪರಿಷತ್ ಸದಸ್ಯರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಭಟ್ಕಳ ಶ್ರೀ ಪ್ರಕಾಶ ಶಿರಾಲಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದಿ ನ್ಯೂ ಇಂಗ್ಲೀಷ ಪಿ. ಯು. ಕಾಲೇಜನ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಭಾಗ ವಂದಿಸಿದರು. ಲತಾ ನಾಯ್ಕ ನಿರೂಪಿಸಿದರು.

error: