
ಭಟ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವರಿಗೆ ಶಾಸಕ ಸುನೀಲ ನಾಯ್ಕ ಕುಟುಂಬ ಸದಸ್ಯರು ಚಿನ್ನದ ಮುಖವಾಡವನ್ನು ಕಾಣಿಕೆಯಾಗಿ ಆರ್ಪಿಸಿದರು.

ತಂದೆ ಬಿ.ಕೆ.ನಾಯ್ಕ, ತಾಯಿ ಪದ್ಮಾವತಿ, ಪತ್ನಿ, ಕ್ಷಮಾ ಹಾಗೂ ಮಕ್ಕಳು, ಸಹೋದರ ಸಿದ್ಧಾರ್ಥ ಮತ್ತಿತರರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಶಾಸಕರು, ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಹೋಮ, ಹನುಮ, ಗರುಡ, ಹಯಗ್ರೀವ ಹೋಮ, ಪ್ರಾಯಶ್ಚಿತ್ತಾಂಗ ಹೋಮ, ಅಷ್ಟವಧಾನ ಸೇವೆ, ನೈವೇದ್ಯ ಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ವೇದಮೂರ್ತಿ ಆಗಮ ಪ್ರವೀಣ ಶ್ರೀ ಲಕ್ಷ್ಮೀಪತಿ ಗೋಪಾಲಾಚಾರ್ಯ
ಹಾಗೂ ತ0ಡದವರ ವೈದಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ