March 12, 2025

Bhavana Tv

Its Your Channel

ಭಟ್ಕಳದಲ್ಲಿ ಏ.24ರಂದು ವಿವಿಧ ಸಂಘಟನೆ ಸಹಯೋಗದಲ್ಲಿ ಬೃಹತ್ ಹೃದಯ ತಪಾಸಣಾ ಶಿಬಿರ

ಭಟ್ಕಳ: ಕ್ರೀಯಾಶೀಲ ಗೆಳೆಯರ ಸಂಘ, ಭಟ್ಕಳ, ಇವರ ನೇತೃತ್ವ ಹಾಗೂ ಕರ್ನಾಟಕ ಜರ್ನಲಿಸ್ಟ ಯೂನಿಯನ್ ಉತ್ತರಕನ್ನಡ, ಶ್ರೀ ಕುಟುಮೇಶ್ವರ ವಿವಿದ್ದೋದ್ದೇಶಗಳ ಸೌಹಾರ್ಧ ಸಹಕಾರಿ ಸಂಘ ನಿ..ಮಾವಿನಕುರ್ವೆ ಜೆಸಿಐ.ಭಟ್ಕಳ ಸಿಟಿ ಇವರ ಸಹಯೋಗದಲ್ಲಿ ಏ. 24ರಂದು ಬೆಳಿಗ್ಗೆ 9 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ ಭಟ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.


ಈ ಕುರಿತು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಕ್ರೀಯಾಶೀಲ ಗೆಳೆಯ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಮಾಹಿತಿ ನೀಡಿದರು. ಭಟ್ಕಳದವರೇ ಆದ ಸದ್ಯ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಖ್ಯಾತ ಹೃದಯ ರೋಗ ತಜ್ಞ ಡಾ. ರಾಜೇಶ ಚಿತ್ತರಂಜನ್ ಹಾಗೂ ಅವರ ತಂಡ ಹೃದಯ ತಪಾಸಣೆ ನಡೆಸಲಿದೆ. ಇಂದಿನ ದಿನಗಳಲ್ಲಿ ಅತಿ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ಪ್ರಿಕಾಷನ್ ಇಸ್ ಬೆಟರ್ ದ್ಯಾನ್ ಕ್ಯೂರ್ ಶೀರ್ಷಿಕೆಯಡಿಯಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಉಚಿತವಾಗಿ ಐಪಿ ಚೆಕ್ ಅಪ್, ಉಚಿತ ಇಸಿಜಿ ತಪಾಸಣೆ, ಉಚಿತ ಟಿಎಂಟಿ ತಪಾಸಣೆ ಹಾಗೂ ರೋಗಿಗಳಿಗೆ ಔಷಧಿ ಅಗತ್ಯವಿದ್ದಲ್ಲಿ ಉಚಿತ ಔಷಧಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವ ಹೃದ್ರೋಗಿಗಳು ಈ ಹಿಂದೆ ಬೇರೆ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಸದರಿ ರೋಗಿಗಳು ತಮ್ಮ ವೈದ್ಯರು ನೀಡಿದ ಚೀಟಿಯನ್ನು ತರಬೇಕು ಎಂದು ತಿಳಿಸಿದರು. ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಲಕ್ಷ್ಮೀಶ ಮಾತನಾಡಿ, ಈಗಿನ ಯುವಜನರು ಹೆಚ್ಚಾಗಿ ಹೃದಯ ರೋಗದಿಂದ ಸಾವಿಗೀಡಾಗುತ್ತಿದ್ದಾರೆ. ಅಧಿಕ ಬಿಪಿ, ಹೆಚ್ಚು ದಪ್ಪಗಿರುವವರು, ಉಸಿರಾಟದ ಸಮಸ್ಯೆ ಇದ್ದವರು, ಸ್ವಲ್ಪ ತಿರುಗಾಡಿದಾಗ ಸುಸ್ತು ಹಾಗೂ ಎದೆ ನೋವು ಬರುತ್ತಿರುವವರು, ಮೆಟ್ಟಿಲು ಹತ್ತುವಾಗ ಎದೆ ನೋವಿನಿಂದ ಬಳಲುವವರು ಆದಷ್ಟು ಬೇಗ ಬಂದು ತಪಾಸಣೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ 40 ವರ್ಷದ ಒಳಗಿನ ಅನೇಕ ಯುವಕರು ನಮ್ಮ ಕಣ್ಣೆದುರು ಹೃದಯಾಘಾತದಿಂದ ಜೀವ ಕಳೆದುಕೊಂಡಿದ್ದಾರೆ. ಜನರು ಎದೆ ನೋವು ಕಾಣಿಸಿಕೊಂಡ ಕೂಡಲೇ, ಅದನ್ನು ಗ್ಯಾಸ್ಟಿಕ್ ನೋವು ಅಂತ ಅಪಾರ್ಥ ಮಾಡಿಕೊಳ್ಳದೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ಕರ್ನಾಟಕ ಜರ್ನಲಿಸ್ಟ ಯೂನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ ಮಾತನಾಡಿ, ಭಟ್ಕಳದ ಜನತೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಜೆಸಿಐ ಸಿಟಿ ಭಟ್ಕಳ ಇದರ ಅಧ್ಯಕ್ಷ ಪಾಂಡು ನಾಯ್ಕ, ಶ್ರೀ ಕುಟುಮೇಶ್ವರ ವಿವಿದ್ದೋದೇಶಗಳ ಸೌಹಾರ್ದ ಸಂಘದ ಅಧ್ಯಕ್ಷ ರಾಮಾ ಖಾರ್ವಿ ಉಪಸ್ಥಿತರಿದ್ದರು. ವೆಂಕಟೇಶ ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು. ಕ್ರೀಯಾಶೀಲ ಗೆಳೆಯರ ಸಂಘದ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ವಂದಿಸಿದರು.

error: