March 12, 2025

Bhavana Tv

Its Your Channel

ಸಕಾಲ ಯೋಜನೆಯು 10 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆ ಭಟ್ಕಳ ತಾಲೂಕಾಡಳಿತದ ವತಿಯಿಂದ ಅರಿವು ಮೂಡಿಸುವ ಜಾಥಾ

ಭಟ್ಕಳ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಕಾಲ ಯೋಜನೆಯು 10 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಾಡಳಿತದ ವತಿಯಿಂದ ಅರಿವು ಮೂಡಿಸುವ ಜಾಥಾಕ್ಕೆ ಬುಧವಾರದಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಸಕಾಲ ಮತ್ತು ಸೇವಾಸಿಂಧು ಅಡಿಯಲ್ಲಿ ಅರ್ಜಿಗಳನ್ನು ಸಾರ್ವಜನಿಕರು ನೀಡುತ್ತಿರುವದು ಇನ್ನು ಮುಂದೆ ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ನಿಗದಿತ ದಿನದೊಳಗೆ ಸಾರ್ವಜನಿಕರಿಗೆ ಸೇವೆ ನೀಡುವಂತಹ ಉದ್ದೇಶ ಇದಾಗಿದೆ. ಅದೇ ರೀತಿ ಜನರಿಗೆ ಸಕಾಲದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಹಾಗೂ ತ್ವರಿತವಾಗಿ ಸೇವೆ ಸಿಗುತ್ತಿರುವದರ ಬಗ್ಗೆ ಮಾಹಿತಿ ತಲುಪಿಸುವ ಹಿನ್ನೆಲೆ ಜಾಥಾ ಮೆರವಣಿಗೆಯನ್ನು ಮಾಡಲಾಯಿತು. ದಶಮಾನೋತ್ಸವ ಹಿನ್ನೆಲೆ ಸರಕಾರದಿಂದ ವಿಶೇಷವಾಗಿ ಸಕಾಲ ಘೋಷಣೆ ಇಂದು ನಾಳೆ ತಪ್ಪಿಲ್ಲ- ಹೇಳಿದ ದಿನ ತಪ್ಪೊಲ್ಲ ಸಿದ್ದಪಡಿಸಲಾಗಿದೆ ಎಂದರು.

ಈ ಸಂಧರ್ಭದಲ್ಲಿ ಜಾಥಾವೂ ಇಲ್ಲಿನ ತಾಲೂಕಾ ಆಡಳಿತ ಸೌದದಿಂದ ಹೊರಟು ಸಂಶುದ್ದೀನ್ ಸರ್ಕಲ ಮಾರ್ಗವಾಗಿ ಪುನಃ ಆಡಳಿತ ಸೌಧಕ್ಕೆ ಬಂದು ಮುಕ್ತಾಯಗೊಂಡಿತು. ಈ ಸಂಧರ್ಭದಲ್ಲಿ ತಹಸೀಲ್ದಾರ್ ಡಾ. ಸುಮಂತ್, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಮನೆ, ಸಿ.ಡಿ.ಪಿ.ಒ ಸುಶೀಲಾ ಮೊಗೇವೀರ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್, ಪುರಸಭೆ ಮುಖ್ಯಾಧಿಕಾರಿ ದಯಾನಂದ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

error: