December 22, 2024

Bhavana Tv

Its Your Channel

ತಾಲೂಕು ಮಟ್ಟದ ಬೃಹತ್ ಉಚಿತ ಆರೋಗ್ಯ ಮೇಳ

ಗುಂಡ್ಲುಪೇಟೆ :– 75ನೇ ವರ್ಷದ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಪ್ರಯುಕ್ತ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗುಂಡ್ಲುಪೇಟೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಾಮರಾಜನಗರ ವತಿಯಿಂದ ತಾಲೂಕು ಮಟ್ಟದ ಬೃಹತ್ ಉಚಿತ ಆರೋಗ್ಯ ಮೇಳ ಕಾರ್ಯಕ್ರಮವನ್ನು ಜರುಗಿತು.

ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷರಾದ ಪಿ ಗಿರೀಶ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿನೂತನ ಕಾರ್ಯಕ್ರಮ ಇದಾಗಿದ್ದು ಸಾರ್ವಜನಿಕರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಈಗಿನ ಕಾಲದಲ್ಲಿ ಕರೆಯದೆ ಬರುವ ಕಾಯಿಲೆಗಳೆಂದರೆ ಬಿಪಿ, ಶುಗರ್, ಇದ್ದೇ ಇರುತ್ತದೆ ಹಾಗಾಗಿ ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಉಚಿತವಾಗಿ ಆರೋಗ್ಯ ತಪಾಸಣೆ ನೀಡುತ್ತದೆ ಎಂದರು.
ತಪಾಸಣೆಯಲ್ಲಿ ಬಿಪಿ ಶುಗರ್ ತಪಾಸಣೆ , ಆಯುಷ್ಮಾನ್ ಕಾರ್ಡ್ ಮಾಡಿಸುವುದು, ಅಲ್ಲದೆ ಶಸ್ತ್ರಚಿಕಿತ್ಸೆಗೂ ಕೂಡ ತಪಾಸಣೆ ಮಾಡಿಸಿದರು ಇನ್ನೂ ಅನೇಕ ರೀತಿಯ ಕಾಯಿಲೆಗಳಿಗೆ ಔಷಧಿಗಳನ್ನು ಕೊಡುವುದರ ಮೂಲಕ ನೂರಾರು ಜನಗಳಿಗೆ ಅನುಕೂಲವನ್ನು ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನಾಗೇಶ್, ತಾಲೂಕು ದಂಡಾಧಿಕಾರಿ ಯಾದ ರವಿಶಂಕರ್, ಇಓ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಯಾದ ಡಾ. ರವಿಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿಯಾದ ಚೆಲುವರಾಜು, ಮಹಿಳಾ ಅಧಿಕಾರಿ ರುದ್ರವ್ವ, ಸಂಯೋಜಕರಾದ ಚಾಂದಿನಿ ಮತ್ತು ಸಂತೋಷ್, ಹಾಗೂ ದಾದಿಯರು, ಅಂಗನವಾಡಿ ಕಾರ್ಯಕರ್ತರು , ಆಶಾ ಕಾರ್ಯಕರ್ತರು ಹಾಜರಿದ್ದರು.
ವರದಿ:-ಸದಾನಂದ ಕನ್ನೆಗಾಲ ಗುಂಡ್ಲಪೇಟೆ

error: