March 12, 2025

Bhavana Tv

Its Your Channel

ಭಟ್ಕಳ : ಜಿಲ್ಲೆಯಲ್ಲಿ ಅತೀ ಹೆಚ್ಚು ಅರಣ್ಯವಾಸಿಗಳಿಗೆ ದೌರ್ಜನ್ಯ ,ಏಪ್ರೀಲ್ ೩೦ ಕ್ಕೆ ಅರಣ್ಯಾಧಿಕಾರಿಯೊಂದಿಗೆ ಮುಕ್ತ ಚರ್ಚೆ.

ಟ್ಕಳ: ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿoದ ಜರಗುತ್ತಿರುವ ದೌರ್ಜನ್ಯ, ಕಿರುಕುಳ ಭಟ್ಕಳ ತಾಲೂಕಿನಲ್ಲಿ ಮುಂದುವರೆದಿದ್ದು ಹೋರಾಟಗಾರರ ವೇದಿಕೆಯು ಏಪ್ರೀಲ್ ೩೦ ರಂದು ಭಟ್ಕಳ ಅರಣ್ಯಾಧಿಕಾರಿಯೊಂದಿಗೆ ಮುಕ್ತ ಚರ್ಚೆ ಜರುಗಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರು ದಿನಾಂಕ ೨೫, ಸೋಮವಾರದಂದು ಭಟ್ಕಳ ತಾಲೂಕಿನ ಅರಣ್ಯ ಸಿಬ್ಬಂದಿಗಳಿAದ ಕಿರುಕುಳಕ್ಕೆ ಒಳಗಾದ ಉಮ್ಮರಶೇಟ್, ಜಾಲಿ ಮುಂತಾದ ಪ್ರದೇಶಗಳಲ್ಲಿ ಭೇಟಿ ನೀಡಿದ ನಂತರ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶಗಳು ಅರಣ್ಯವಾಸಿಗಳ ಪರ ಇದ್ದಾಗಲೂ ಅರಣ್ಯ ಸಿಬ್ಬಂದಿಗಳು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಕಾರ್ಯ ಜರುಗಿಸುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.

ಅತೀ ಹೆಚ್ಚು ದೌರ್ಜನ್ಯ : ಭಟ್ಕಳ.
ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳಿAದ ಅರಣ್ಯ ವಾಸಿಗಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯವನ್ನು ಅವಲೋಕಿಸಿದಾಗ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅರಣ್ಯವಾಸಿಗಳು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಖೇದಕರ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ವಿಷಾದ ವ್ಯಕ್ತಪಡಿಸಿದರು

error: