
ಭಟ್ಕಳ: ಕೊರೋನಾ ಈ ಜಗತ್ತಿಗೆ ಒಂದು ದೊಡ್ಡ ಪಾಠವನ್ನು ಬಿಟ್ಟು ಹೋಗಿದ್ದು ಇದರಿಂದ ಮಾನವೀಯತೆಯ ಪಾಠಕಲಿಯದ ನಾವು ಸಮಾಜದಲ್ಲಿ ಅಶಾಂತಿಯನ್ನು ಹರಡುವಲ್ಲಿ ಸಕ್ರೀಯರಾಗಿದ್ದೇವೆ. ರಾಜಕೀಯ ಪ್ರೇರಿತ ಮನಸ್ಸುಗಳೇ ದೇಶಒಡೆಯುವಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಸದ್ಭಾವನಾ ಮಂಚ್ ಅಧ್ಯಕ್ಷ ಸಾಮಾಜಿಕ ಕಾರ್ಯಕರ್ತ ಸತೀಶ್‌ಕುಮಾg Àಹೇಳಿದರು.
ಅವರು ರವಿವಾರ ಸಂಜೆಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುರುಳಿಸಾಲ್ ನಲ್ಲಿರುವಆಹ್ಮದ್ ಸಯೀದ್‌ಜಾಮಿಯಾ ಮಸೀದಿಯಲ್ಲಿ ಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಆಯೋಜಿಸಿದ್ದ ಇಫ್ತಾರ್ ಸೌಹಾರ್ದಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇನ್ನೂ ಮುಂದಿನ ವರ್ಷದವರೆಗೆ ಇಂದಿನ ಸ್ಥಿತಿಯೆ ಮುಂದುವರೆಯಲಿದ್ದುರಾಜಕೀಯ ಕುತಂತ್ರಿಗಳು ತಮ್ಮ ಲಾಭಕ್ಕೋಸ್ಕರ ಸಮಾಜದಲ್ಲಿ ಗಲಭೆ, ಅಶಾಂತಿಯನ್ನು ಸೃಷ್ಟಿಸುತ್ತಾರೆ ಎಂದು ಹೇಳಿದ ಅವರು ಇಂತಹ ಕುತಂತ್ರಿಗಳಿಗೆ ಯಾವುದೇ ಮಣೆಹಾಕದೆ ಅಂತಹ ದುಷ್ಟಶಕ್ತಿಗಳ ಹೆಡೆಮುರಿಕಟ್ಟಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ವೀರಾಂಜನೆಯ ದೇವಸ್ಥಾನದಲ್ಲಿ ಧರ್ಮದರ್ಶಿ ಉಗ್ರಾಣಿಮನೆ ಅನಂತ್ ನಾಯ್ಕ, ಮೊಗೇರ್ ಸಮಾಜದ ಮುಖಂಡ ಎಪ್.ಕೆ.ಮೊಗೇರ್, ನಾಮಧಾರಿ ಸಮಾಜದ ಹಿರಿಯ ಮುಖಂಡಎA.ಆರ್. ನಾಯ್ಕ, ಪತ್ರಕರ್ತ ಎಂ.ಆರ್.ಮಾನ್ವಿ ಮಾತನಾಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪಾ, ಆಹ್ಮದ್ ಸಯೀದ್ ಜಾಮಿಯಾ ಮಸೀದಿಯ ಖತೀಬ್, ಇಮಾಮ್ ಮೌಲಾನ ಮುಹಮ್ಮದ್‌ಜಾಫರ್ ನದ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ. ನಾಯ್ಕ, ಜನತಾ ವಿದ್ಯಾಲಯ ಶಿರಾಲಿ ಇದರ ಪ್ರಾಂಶುಪಾಲ ಎ.ಬಿ.ರಾಮರಥ್, ಅಂಜುಮನ್ ಕಾಲೇಜಿನ ಪ್ರೋ.ಗಣೇಶ್ ಯಾಜಿ, ಆರ್.ಎನ್.ಎಸ್. ರೂರಲ್ ಪಾಲಿಟೆಕ್ನಿಕ್ಸ್ ನ ಉಪ ಪ್ರಾಂಶುಪಾಲ ಕೆ.ಮರಿಸ್ವಾಮಿ ಸದ್ಭಾವನಾ ಮಂಚ್ ಉಪಾಧ್ಯಕ್ಷ ಪಾಸ್ಕಲ್‌ಗೂಮ್ಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ