December 22, 2024

Bhavana Tv

Its Your Channel

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ

ಗುಂಡ್ಲುಪೇಟೆ. ಸಂವಿಧಾನ ಶಿಲ್ಪಿ ಭಾರತರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯನ್ನು ಗುಂಡ್ಲುಪೇಟೆ ಪಟ್ಟಣದ ನೆಹರು ಪಾರ್ಕ್ ಹಳೆ ಬಸ್ ನಿಲ್ದಾಣದಲ್ಲಿ ನಡೆಯಿತು.
ಅಂಬೇಡ್ಕರ್ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಾನಪದ ಕಲಾ ತಂಡಗಳೊAದಿಗೆಮತ್ತು ಅಂಗನವಾಡಿ ಕಾರ್ಯಕರ್ತರಿಂದ ಪೂರ್ಣಕುಂಭದೊAದಿಗೆ ಮೆರವಣಿಗೆ ನೆರವೇರಿತು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 131ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮುಖಾಂತರ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ರವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ಈಗಿನ ಕಾಲದಲ್ಲಿ ಹಿಂದಿನ ತಲೆಮಾರುಗಳನ್ನು ಸ್ಮರಿಸಲು ಆಗುತ್ತಿಲ್ಲ ಇಂತಹ ಶ್ರೇಷ್ಠ ಮಹಾ ನಾಯಕರನ್ನ ಪೂಜ್ಯ ಭಾವನೆ ಯಿ0ದ ನೋಡುತ್ತೇವೆ . ಹಾಗಾಗಿ ವಿಶ್ವಸಂಸ್ಥೆಯಲ್ಲಿ ಇವರ ಭಾವಚಿತ್ರವನ್ನು ಇಟ್ಟು ಇಂದಿಗೂ ಪೂಜೆ ಮಾಡುತ್ತಾರೆ ಅಲ್ಲದೆ ಮಹಿಳೆಯರಿಗೆ, ಅಸಂಘಟಿತರಿಗೆ, ಕಾರ್ಮಿಕರಿಗೆ ಸ್ವತಂತ್ರವಾಗಿ ಬದುಕಲು ಸಂವಿಧಾನದ ಮೂಲಕ ನೀಡಿದ್ದಾರೆ. ಹಾಗಾಗಿ ಮುಂದಿನ ಪೀಳಿಗೆಯವರು ಇವರ ಆದರ್ಶ ಮತ್ತು ತತ್ವವನ್ನು ಅನುಸರಿಸಕೊಳ್ಳಬೇಕು ಎಂದರು . ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಪೂಜ್ಯ ಬೋಧಿದತ್ತ ಬಂತೇಜಿ , ಡಾಕ್ಟರ್ ಶಿವಕುಮಾರ್ ಭಾಷಣಕರರು, ಡಿವೈಎಸ್ಪಿ ಪ್ರಿಯದರ್ಶನಿ ಸಾನಿ ಕೊಪ್ಪ , ಶಾಸಕರಾದ ಸಿಎಸ್ ನಿರಂಜನ್ ಕುಮಾರ್, ಪುರಸಭೆ ಅಧ್ಯಕ್ಷ ಪಿ. ಗಿರೀಶ್ , ಉಪಾಧ್ಯಕ್ಷರಾದ ಶ್ರೀಮತಿ ದೀಪಿಕಾ ಅಶ್ವಿನ್, ಎಚ್ ಎ0 ಮಹೇಶ್, ಜಯರಾಮ್, ಪುರಸಭಾ ಸದಸ್ಯರುಗಳು, ಜನಪ್ರತಿನಿಧಿಗಳು ,ತಾಲೂಕು ದಂಡಾಧಿಕಾರಿ ರವಿಶಂಕರ್, ಶ್ರೀಕಂಠ ರಾಜ್ ಅರಸ್, ಹೇಮಂತ್ ರಾಜ್, ಶಿವಮೂರ್ತಿ ಮತ್ತು ನಂಜುAಡೇಗೌಡ ,ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ: ಸದಾನಂದ ಕನ್ನೇಗಾಲ

error: