March 17, 2025

Bhavana Tv

Its Your Channel

ಭಟ್ಕಳ ಅರ್ಬನ್ ಬ್ಯಾಂಕಿನ 2021-22 ನೇ ಸಾಲಿಗೆ ರೂ. 1 ಕೋಟಿ 32 ಲಕ್ಷ ನಿವ್ವಳ ಲಾಭ

ಭಟ್ಕಳ: ಗ್ರಾಹಕರಿಗೆ ಅಪೂರ್ವ ಸೇವೆಯನ್ನು ನೀಡುವ ಮೂಲಕ ಜನಮನದಲ್ಲಿ ನೆಲೆಯಾಗಿರುವ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕು 58 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ, ಸಹಕಾರಿ ರಂಗದಲ್ಲಿ 59ನೇ ವರ್ಷಕ್ಕೆ ಪಾದಾರ್ಪಿಸಿದೆ. ನಿರಂತರವಾಗಿ ಗುರುತರ ಸಾಧನೆಯನ್ನು ಸಾಧಿಸುತ್ತಾ ಬಂದಿರುವ ಈ ಬ್ಯಾಂಕ್ ಮಾರ್ಚ 31 ರಂದು ಸಮಾಪ್ತಿಗೊಂಡ 2021-22 ನೇ ಸಾಲಿನ ಆರ್ಥಿಕ ವರ್ಷದ ಫಲಿತಾಂಶ ಪ್ರಕಟಿಸಿದ್ದು, ಬ್ಯಾಂಕು ರೂ. 4 ಕೋಟಿ 33, ಲಕ್ಷ ನಿರ್ವಹಣಾ ಲಾಭ ಗಳಿಸಿದ್ದು ಶಾಸನಬದ್ಧ ಅನುವು ಹಾಗೂ ಆದಾಯ ತೆರಿಗೆ ಪಾವತಿಯಾದ ನಂತರ ರೂ. 1 ಕೋಟಿ 32 ಲಕ್ಷ ನಿವ್ವಳ ಲಾಭವನ್ನು ಗಳಿಸಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ಠೇವಣಿಯು ರೂ. 500 ಕೋಟಿ 72 ಲಕ್ಷವಾಗಿದ್ದು, ಸಾಲ ಮುಂಗಡವು ರೂ. 249 ಕೋಟಿ 41 ಲಕ್ಷವಾಗಿದೆ. ಬ್ಯಾಂಕಿನ ಒಟ್ಟೂ ಗುಂತಾವಣಿಯು ರೂ. 289 ಕೋಟಿ 83 ಲಕ್ಷವಾಗಿರುತ್ತದೆ. ಬ್ಯಾಂಕಿನ ಷೇರು ಬಂಡವಾಳವು ರೂ. 15 ಕೋಟಿ 12 ಲಕ್ಷ ಮತ್ತು ಸ್ವಂತ ಬಂಡವಾಳವು ರೂ. 63 ಕೋಟಿ 88 ಲಕ್ಷ ವಾಗಿರುತ್ತಿದ್ದು, ಬ್ಯಾಂಕಿನ ದುಡಿಯುವ ಬಂಡವಾಳವು ರೂ. 579 ಕೋಟಿ 72 ಲಕ್ಷವಾಗಿದೆ. ವರದಿ ವರ್ಷದಲ್ಲಿ ಬ್ಯಾಂಕು ಒಟ್ಟೂ ರೂ. 750 ಕೋಟಿ 13 ಲಕ್ಷದಷ್ಟು ವ್ಯವಹಾರವನ್ನು ಮಾಡಿದ್ದು, ಸಹಕಾರಿ ಕ್ಷೇತ್ರದಲ್ಲಿ ಭದ್ರವಾಗಿ ತಳವೂರಿ ಪ್ರತಿ ವರ್ಷ ತನ್ನ ವ್ಯವಹಾರವನ್ನು ಹೆಚ್ಚಿಸುತ್ತಾ ಮುನ್ನೆಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಬ್ಯಾಂಕಿನ ಉತ್ತಮ ಸಾಧನೆಗೆ ಬ್ಯಾಂಕಿನ ಶೇರುದಾರರು, ಗ್ರಾಹಕರು, ಹಿತೈಷಿಗಳ ಸಹಕಾರ, ಪ್ರೋತ್ಸಾಹ ಹಾಗೂ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರುಗಳ ಮತ್ತು ಸಿಬ್ಬಂದಿಗಳ ಅವಿರತ ಪರಿಶ್ರಮವೇ ಕಾರಣ, ಬ್ಯಾಂಕು ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟೂ 9 ಶಾಖೆಗಳನ್ನು ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ ಎಲ್ಲಾ ಶಾಖೆಗಳು ಲಾಭ ಗಳಿಸಿ ಪ್ರಗತಿಯ ದಿಕ್ಕಿನತ್ತ ನಡೆದು ಬ್ಯಾಂಕಿನ ಗ್ರಾಹಕರಿಗೆ ಅತೀ ಆಧುನಿಕ ರೀತಿಯಲ್ಲಿ ಬ್ಯಾಂಕಿAಗ್ ಸೇವೆಯನ್ನು ನೀಡಲು 5 ಶಾಖೆಗಳಲ್ಲಿ ಏಟಿಎಮ್ ಸೌಲಭ್ಯವನ್ನು ಒದಗಿಸಿದೆ. ಬ್ಯಾಂಕು ನೀಡುತ್ತಿರುವ ಆಧುನಿಕ ಸೇವೆಗಳನ್ನು ಬ್ಯಾಂಕಿನ ಗ್ರಾಹಕರು ಪಡೆದುಕೊಂಡು ಬ್ಯಾಂಕು ಉನ್ನತಿಯ ಪಥದತ್ತ ಸಾಗುತ್ತಾ, ಗ್ರಾಹಕರಿಗೆ ಉನ್ನತ ಸೇವೆಯನ್ನು ನೀಡುವಲ್ಲಿ ಸಫಲವಾಗಲಿ ಎಂಬ ಆಶಯವನ್ನು ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಧಾನ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: