
ಭಟ್ಕಳ: ರವಿವಾರ ಸಂಜೆ ಕರಾವಳಿ ಪ್ರದೇಶದ ಕುಮಟಾದಲ್ಲಿ ಚಂದ್ರ ದರ್ಶನವಾಗಿರುವ ಕುರಿತು ಖಚಿತವಾಗಿದ್ದರಿಂದ ಭಟ್ಕಳದಲ್ಲಿ ಸೋಮವಾರವೇ ಈದ್-ಉಲ್-ಫಿತ್ರ್ (ರಮ್ಜಾನ್) ಹಬ್ಬ ಆಚರಿಸಲು ನಿರ್ಧರಿಸಿದ್ದರಿಂದ ಭಟ್ಕಳದಲ್ಲಿ ಸೋಮವಾರ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿAದ ಆಚರಿಸಲಾಯಿತು.
ಹಬ್ಬ ಆಚರಣೆಯ ಕುರಿತು ರವಿವಾರ ರಾತ್ರಿ ಪ್ರಧಾನ ಖಾಜಿ ಮೌಲಾನಾ ಅಬ್ದುಲ್ ರಬ್ ನದ್ವಿ ಹಾಗೂ ಮೌಲಾನಾ ಖ್ವಾಜಾ ಮೊಹಿದ್ದೀನ್ ಅಕ್ರಮಿ ಮದನಿ ನದ್ವಿ ಇವರು ಘೋಷಣೆ ಮಾಡಿದ ನಂತರದಲ್ಲಿ ಭಟ್ಕಳದಾದ್ಯಂತ ಹಬ್ಬದ ತಯಾರಿ ಜೋರಾಗಿಯೇ ನಡೆದಿತ್ತು. ಇತ್ತ ರಮ್ಜಾನ್ ಪೇಟೆಯಲ್ಲಿಯೂ ಕೂಡಾ ಜನ ಜಂಗುಳಿ ಜಾಸ್ತಿಯಾಗುತ್ತಾ ಮಧ್ಯ ರಾತ್ರಿಯ ತನಕವೂ ವ್ಯಾಪಾರ ಜೋರಾಗಿಯೇ ನಡೆಯಿತು.
ಸೋಮವಾರ ಬೆಳಿಗ್ಗೆ ನಗರದ ಈದ್ಗಾ ಮೈದಾನದಲ್ಲಿ ಹಾಗೂ ತಾಲೂಕಿನ ವಿವಿದೆಡೆಗಳಲ್ಲಿ ಸಾಮೂಹಿಮ ಪ್ರಾರ್ಥನೆ ಸಲ್ಲಿಸಲಾಯಿತು. ಮೂವತ್ತು ದಿನಗಳ ಕಠಿಣ ಉಪವಾಸದ ನಂತರ ರಂಮ್ಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಉಪವಾಸ ವೃಥವೆಂದರೆ ಕೇವಲ ಹಸಿವೆ ಮತ್ತು ಬಾಯಾರಿಕೆಯನ್ನು ನಿಯಂತ್ರಿಸುವುದಲ್ಲ. ಮಾನವನ ಎಲ್ಲಾ ಅಂಗಾAಗ ಗಳನ್ನು ಕೂಡಾ ಹಿಡಿತದಲ್ಲಿಟ್ಟುಕೊಂಡು ನಿಯಂತ್ರಿಸುವುದಲ್ಲದೇ ಕೆಟ್ಟದನ್ನು ಮಾಡದೇ, ಬೇರೆಯವರಿಗೆ ಕೆಡುಕನ್ನು ಬಯಸದೇ ಮಾನವನ ಷಡ್ ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳನ್ನು ತ್ಯಜಿಸಿ ಆತ್ಮವನ್ನು ನಿಯಂತ್ರಣದಲ್ಲಿಡುವುದು ಎನ್ನುವುದು ಉಪವಾಸದ ಅರ್ಥವಾಗಿದೆ. ಉಪವಾಸ ವೃಥವು ಬಡವ-ಬಲ್ಲಿದನಲ್ಲಿ ಯಾವುದೇ ಬೇಧವಿಲ್ಲ ಎನ್ನುವುದನ್ನು ಕೂಡಾ ಸಾರಿ ಹೇಳುತ್ತದೆ.
ಭಟ್ಕಳ ನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ನೇತೃತ್ವವನ್ನು ವಹಿಸಿದ್ದ ಮರ್ಖಜಿ ಖಲೀಫಾ ಜಮಾತುಲ್ ಮುಸ್ಲಿಮೀನ್‌ನ ಮುಖ್ಯ ಖಾಜಿ ಮೌಲಾನಾ ಮಹಿನುದ್ದೀನ್ ಖ್ವಾಜಾ ಅಕ್ರಮಿ ನದ್ವಿ ಅವರು ಈದ್-ಉ¯-ಫಿತ್ರ್ ಹಬ್ಬದ ಮಹತ್ವವನ್ನು ಹಾಗೂ ಉಪವಾಸದ ಮಹತ್ವವನ್ನು ತಿಳಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ