
ಭಟ್ಕಳ ತಾಲೂಕಿನ ಚೌಥನಿಯ ಕಿರು ಗುಡ್ಡದ ಮೇಲೆ ಸ್ಥಾಪನೆಗೊಂಡಿರುವ ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ 26ನೇ ವರ್ಷದ ಪ್ರತಿಷ್ಠಾ ವರ್ಧಂತಿ, ಸಾಮೂಹಿಕ ಶನಿಪೂಜೆ ಹಾಗೂ ಸ್ವಯಂವರ ಕಲ್ಯಾಣ ಮಂಟಪದ ಉದ್ಘಾಟನೆ ಸಮಾರಂಭವೂ ಮೇ 7 ಮತ್ತು 8 ರಂದು ನಡೆಯಲಿದೆ ಎಂದು ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ಎಮ್. ಅಬ್ಬಿಹಿತ್ತಲ್ ಹೇಳಿದರು.

ಅವರು ಮಂಗಳವಾರದAದು ದೇವಸ್ಥಾನದ ನೂತನ ಕಲ್ಯಾಣ ಮಂಟಪದ ಆವರಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಾಸ್ಮುಡಿ ಹನುಮಂತ ದೇವರ ಹೆಸರೇ ಹೇಳುವಂತೆ ಬೇಡಿ ಬಂದ ಭಕ್ತರಿಗೆ ಕಾಸಿನ ಮುಡಿಯೇ ಕೈಯಲ್ಲಿ ನೀಡಿ ಕಳಿಸುವ ಆರಾಧ್ಯದೈವನಾಗಿ ನೆಲೆಸಿದ್ದಾನೆ. ಮದುವೆಯೇ ಆಗದೇ ಕೊರಗುವ ಜನಕ್ಕೆ ಚಿಕ್ಕ ಸಂಕಲ್ಪದಿAದ ಕಂಕಣ ಭಾಗ್ಯ ಕೂಡಿ ಬಂದಿರುವುದು, ಜೀವನದಲ್ಲಿ ಸೋತು ಕಾಸಿನ ಮುಡಿಯೇ ನೀಡಿ ಉದ್ದರಿಸುವ ಉದಾಹರಣೆ ಸಹ ಉಂಟು. ಈ ಹಿಂದಿನಿAದಲೂ ದೇವರಿಗೆ ಪೂಜೆ ಹಾಗೂ ಭಜನೆ ಶಾಸ್ತçಬದ್ದ ರೀತಿಯಲ್ಲಿ ಮಾಡಿಕೊಂಡು ಬಂದಿದ್ದೇವೆ. ದೇವರ ಪೂಜೆ ಪುನಸ್ಕಾರದಲ್ಲಿ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಂಡಿದ್ದೇವೆ. 1996ರಲ್ಲಿ ಜೀರ್ಣೊದ್ದಾರವಾದ ಬಳಿಕ ನಮ್ಮಲ್ಲಿನ ಭಕ್ತರಲ್ಲಿ ದೇವಸ್ಥಾನದಿಂದ ಬಡವರ ಅನೂಕೂಲಕ್ಕಾಗಿ ಸ್ವಯಂವರ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಉದ್ದೇಶ ಕಮಿಟಿ ಅವರು ತೀರ್ಮಾನಿಸಲಾಯಿತು. ಕಲ್ಯಾಣ ಮಂಟಪದ ಕಾಮಗಾರಿಯನ್ನು ಕರ ಸೇವೆಯ ಮೂಲಕ ಎಲ್ಲಾ ಕರ ಸೇವಕರು ಆರಂಭಿಸಿಕೊAಡರು. ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಯಾವುದೇ ವೆಚ್ಚವೆಂದು ಲೆಕ್ಕಹಾಕದೇ ಇವೆಲ್ಲವೂ ಹನುಮ ದೇವರ ಆರ್ಶೀವಾದ ಹಾಗೂ ನೂರಾರು ಕರ ಸೇವಕರ ನಿಸ್ವಾರ್ಥದಿಂದ ಹಗಲಿರುಳು ದುಡಿದಿರುವ ಪ್ರತಿಫಲವಾಗಿ ಈಗ ಲೋಕಾರ್ಪಣೆಗೆ ಸಿದ್ದವಾಗಿದೆ ಎಂದರು.
ಇದು ಇಲ್ಲಿನ ಎಲ್ಲಾ ಸಮಾಜದವರ ಸಹಕಾರ ಹಾಗೂ ಶ್ರಮದಾನ ಮೂಲಕ ಶರವೇಗದಲ್ಲಿ ನಡೆಸಲಾಗುತ್ತಿದೆ. ಮುಂದಿನ ದಿನದಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಸಮಾವೇಶಗಳು ನಡೆಸುವ ಮೂಲಕ ಭಟ್ಕಳದಲ್ಲಿ ಹೊಸ ಸಾಮಾಜಿಕ ಕ್ರಾಂತಿ ಮಾಡಲು ಇದು ಸದ್ಬಳಕೆಯಾಗಲಿ ಎಂಬುದು ನಮ್ಮೆಲ್ಲರ ಉದ್ದೇಶವಾಗಿದೆ. ಇಲ್ಲಿ ನಡೆಯಲಿರುವ ಮದುವೆಗಳಿಗೆ ಯಾವುದೇ ಬಾಡಿಗೆ ತೆಗೆದುಕೊಳ್ಳದೇ ಕೇವಲ ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ 5 ಸಾವಿರ ನೀಡಿ ಕಲ್ಯಾಣ ಮಂಟಪ ನೀಡಲಿದ್ದೇವೆ. ಇನ್ನು 25 ಸಾವಿರ ರೂ. ನೀಡಿ ಅಜೀವ ಸದಸ್ಯತ್ವ ಪಡೆದುಕೊಂಡಲ್ಲಿ ವರ್ಷದಲ್ಲಿ ಒಂದು ದಿನ ಉಚಿತವಾಗಿ ಕಲ್ಯಾಣ ಮಂಟಪದ ಬಳಕೆಗೆ ನೀಡಲಿದ್ದೇವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನದ ಸ್ವಯಂವರ ಕಲ್ಯಾಣ ಮಂಟಪದ ದಾನಿ ಪ್ರಕಾಶ ಅರಬೈಲು ಕುಮಟಾ ಮಾತನಾಡಿ ಎರಡು ದಿನಗಳ ಕಾಲ ನಡೆಯುವ ಸ್ವಯಂವರ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲ ದಿನವಾದ ಮೇ 7 ರಂದು ಬೆಳಿಗ್ಗೆ 6 ಗಂಟೆಯಿAದ ಸಾಮೂಹಿಕ ಪಂಚಾಮೃತ ಅಭಿಷೇಕ, 9 ಗಂಟೆಗೆ ಶನಿಕಥೆ, 10 ಗಂಟೆಗೆ ಸ್ವಯಂವರ ಕಲ್ಯಾಣ ಮಂಟಪ ಲೋಕಾರ್ಪಣೆಗೊಳ್ಳಲಿದೆ.
ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1 ಗಂಟೆಯಿAದ 2.30ರ ತನಕ ಮಹಾ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ಅಂತರ ಜಿಲ್ಲಾ ಮಟ್ಟದ ಭಜನಾ ಕುನಿತ ಸ್ಪರ್ಧೇ ನಡೆಯಲಿದೆ.
ಮೇ 8 ಭಾನುವಾರದಂದು ಸಂಜೆ 6 ಗಂಟೆಗೆ ದೇವಸ್ಥಾನದ ಕಲ್ಯಾಣ ಮಂಟಪದ ಕರಸೇವಕರಿಗೆ, ದಾನಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಮನರಂಜನಾ ಕಾರ್ಯಕ್ರಮ ಜರುಗಲಿದೆ ಎಂದರು.
ಈ ಸಂಧರ್ಬದಲ್ಲಿ ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಗೌರವಾಧ್ಯಕ್ಷ ಈರಪ್ಪ ಗರ್ಡೀಕರ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮೃತ್ಯುಂಜಯ ಆಚಾರ್ಯ, ಸುಬ್ರಾಯ ನಾಯ್ಕ, ದೇವಸ್ಥಾನದ ಕಮಿಟಿ ಸದಸ್ಯರು ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ