March 17, 2025

Bhavana Tv

Its Your Channel

ಭಟ್ಕಳ ರೈಲ್ವೆ ನಿಲ್ದಾಣದ ಎದುರು ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ, ದಂಡ ಸಹಿತ ವಾಹನಕ್ಕೆ ಸರಪಳಿ ಹಾಕಿ ಲಾಕ್

ಭಟ್ಕಳ: ಭಟ್ಕಳ ರೈಲ್ವೆ ನಿಲ್ದಾಣದ ಎದುರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುತ್ತಿದ್ದ ಹಿನ್ನೆಲೆ ರೈಲ್ವೆ ಪೋಲೀಸ್ ರಿಂದ ದಂಡ ಸಹಿತ ವಾಹನಕ್ಕೆ ಸರಪಳಿ ಹಾಕಿ ಲಾಕ್ ಮಾಡಲಾಗುತ್ತಿದ್ದು ಈ ಕ್ರಮದಿಂದ ಪಾರ್ಕಿಂಗ ವ್ಯವಸ್ಥೆ ಶಿಸ್ತುಬದ್ದವಾಗಿದೆ.

ಕಳೆದ ಸಾಕಷ್ಟು ವರ್ಷದಿಂದ ಭಟ್ಕಳ ರೈಲ್ವೆ ನಿಲ್ದಾಣದ ಎದುರು ಪ್ರಯಾಣಿಕರು ಹಾಗೂ ಸಾರ್ವಜನಿಕರು ನೋ ಪಾರ್ಕಿಂಗ ನಾಮಫಲಕ ಇದ್ದರು ಸಹ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುತ್ತಿದ್ದ ಹಿನ್ನೆಲೆ ಈಗ ರೈಲ್ವೆ ಪೋಲೀಸರು ನಿಲ್ದಾಣದೆದುರಿನ ಎರಡು ಕಡೆಗಳಲ್ಲಿ ವಾಹನ ನಿಲ್ಲಿಸಿದ್ದಲ್ಲಿ ದಂಡ ಸಹಿತ ವಾಹನಕ್ಕೆ ಸರಪಳಿ ಹಾಕಿ ಲಾಕ್ ಮಾಡುತ್ತಿದ್ದು ಈ ಕ್ರಮದಿಂದ ಪಾರ್ಕಿಂಗ ವ್ಯವಸ್ಥೆ ಶಿಸ್ತುಬದ್ದವಾಗಿದೆ.

ನೋ ಪಾರ್ಕಿಂಗ್ ಇದ್ದರು ಸಹ ನಿಲ್ದಾಣದ ಎದುರು ಬೈಕ್, ಕಾರ ಪಾರ್ಕ್ ಮಾಡಿ ನಿಲ್ದಾಣದೊಳಗೆ ಹೋಗುತ್ತಿದ್ದ ಸಾರ್ವಜನಿಕರು, ಪ್ರಯಾಣಿಕರು ರೈಲ್ವೆ ಪೊಲೀಸರ ಯಾವುದೇ ಕ್ರಮಕ್ಕೂ ಕ್ಯಾರೆ ಎನ್ನದೇ ವಾಹನ ನಿಲುಗಡೆ ಮಾಡುತ್ತಿದ್ದರು. ಇದರಿಂದ ಉಳಿದ ಪ್ರಯಾಣಿಕರು ನಿಲ್ದಾಣದೊಳಗೆ ಬರಲು ಹಾಗೂ ಆಟೋ ರಿಕ್ಷಾದಲ್ಲಿ ಬರುವ ವೃದ್ದರು, ಮಹಿಳೆಯರು ಮಕ್ಕಳಿಗೆ ಕಿರಿಕಿರಿಯಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸೂಚನೆ ನೀಡುತ್ತಿದ್ದರು ವಾಹನ ಪಾಕಿಂಗ್ ನಿಲ್ದಾಣದ ಅಕ್ಕಪಕ್ಕವೇ ಯಥಾಸ್ಥಿತಿಯಲ್ಲಿಯೇ ಮಾಡಲಾಗುತ್ತಿತ್ತು.
ಈಗಾಗಲೇ ಪ್ರಯಾಣಿಕರಿಗಾಗಿ ವಾಹನ ಪಾರ್ಕಿಂಗ್ ಗೋಸ್ಕರ ರೈಲ್ವೆ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿ ಎರಡು ಕಡೆ ಶೆಡ್ ನಿರ್ಮಿಸಿದ್ದು ಅಲ್ಲಿ ವಾಹನ ನಿಲ್ಲಿಸದೇ ನಿಲ್ದಾಣದ ಎದುರಿಗೆ ನಿಲ್ಲಿಸುತ್ತಿದ್ದಿರುವುದು ರೈಲ್ವೆ ಪೋಲಿಸರಿಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಈಗ ಭಟ್ಕಳ ರೈಲ್ವೆ ಪೋಲಿಸರಿಂದ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವುದು ವಾಹನ ಪಾರ್ಕಿಂಗ ವ್ಯವಸ್ಥೆ sಸುಧಾರಣೆಯಾದಂತಾಗಿದೆ.
ರೈಲ್ವೆ ನಿಲ್ದಾಣದ ಎರಡು ಕಡೆಗಳಲ್ಲಿ ಬೈಕ, ಕಾರು ನಿಲ್ಲಿಸಿದ್ದಲ್ಲಿ ದಂಡ ಸಹಿತ ವಾಹನಕ್ಕೆ ಸರಪಳಿ ಹಾಕಿ ಪಾರ್ಕಿಂಗ್ ಮಾಡಿದವರಿಂದ ಹೇಳಿಕೆ ಪಡೆದು ವಾಹನ ಬಿಡುವ ವ್ಯವಸ್ಥೆ ರೂಪಿಸಲಾಗಿದೆ. ಒಟ್ಟಾರೆ ರೈಲ್ವೆ ಪೋಲೀಸರ ಪರಿಣಾಮಕಾರಿ ಕಾರ್ಯಚರಣೆಯಿಂದ ಈಗ ಶಿಸ್ತುಬದ್ದವಾಗಿ ನಿಗದಿತ ಶೆಡನಲ್ಲಿಯೇ ವಾಹನ ನಿಲ್ಲಿಸಿ ಬರುವಂತಾಗಿದೆ.

error: