March 14, 2025

Bhavana Tv

Its Your Channel

ಭಟ್ಕಳದಲ್ಲಿ ನಾಳೆ ತಾಲೂಕಾ ಕಸಾಪದಿಂದ ಸಂಸ್ಥಾಪನಾ ದಿನಾಚರಣೆ.

ಭಟ್ಕಳ– ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ದಿನಾಂಕ: 5-5-2022 ರ ಬೆಳಿಗ್ಗೆ 11 ಗಂಟೆಗೆ ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಸಾಹಿತಿಗಳಾದ ಡಾ.ಆರ್.ವಿ.ಸರಾಫ್, ಉದ್ಘಾಟಿಸಲಿದ್ದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಾಹಿತಿ ನಾರಾಯಣ ಯಾಜಿ ಹಾಗೂ ಸಿದ್ಧಾರ್ಥ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ ಯು. ಪಾಲ್ಗೊಳ್ಳಲಿದ್ದು ಸಾಹಿತಿ ಹಾಗೂ ಶಿಕ್ಷಕಿ ಪೂರ್ಣಿಮಾ ಕರ್ಕಿಕರ್ ಸಂಸ್ಥಾಪನಾ ದಿನದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರುಗಳು ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಾಲೂಕಾ ಸಾಹಿತ್ಯ ಪರಿಷತ್ ಘಟಕ ಕೋರಿದೆ.

error: