ಗುಂಡ್ಲುಪೇಟೆ:- ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ಕಾವಲು ಪಡೆ ವತಿಯಿಂದ ದಿವಂಗತ ಮುನಿಯಮ್ಮ ರವರ ಸ್ಮರಣಾರ್ಥ ಸಿ ಎಂ ಎಸ್ ಚಿಲ್ಡ್ರನ್ಸ್ ಹೊಮ್ ಮಕ್ಕಳಿಗೆ ಸಿಹಿ ವಿತರಣಾ ಸರಳ ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಅವರು ಮಾತನಾಡುತ್ತಾ ಮುನಿಯಮ್ಮರವರು ಓರ್ವ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಜತೆಗೆ ಜನಹಿತ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರ ಹಾದಿಯಲ್ಲೇ ಸಮಾಜ ಸೇವಕರಾದ ಗಿರೀಶ್ ಬಾಬು ಮತ್ತು ಮಕ್ಕಳು ನಿರಂತರ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ . ಇವರ ಕುಟುಂಬದ ಸದಸ್ಯರು ಉದ್ಯಮಿಯಾಗಿ ,ಸಿನಿಮಾ ನಟರಾಗಿ , ಸಮಾಜ ಸೇವಕರು ಆಗಿ ಹೆಸರು ಮಾಡಲು ಮುನಿಯಮ್ಮ ರವರ ಬದುಕಿದ ಮಾರ್ಗವೇ ಅವರಿಗೆ ಆದರ್ಶವಾಗಿದೆ ಎಂದರು.
ಈ ಸಂಧರ್ಭದಲ್ಲಿ ದೊಡ್ಡ ರಾಜ್ ಬೆಂಡರವಾಡಿ ,ಪರಮೇಶ ಹುಲಸಗುಂದಿ , ಕರ್ನಾಟಕ ಕಾವಲು ಪಡೆಯ ಟೌನ್ ಅಧ್ಯಕ್ಷರಾದ ಸಾಧಿಕ್ ಪಾಷಾ , ಕಾರ್ಯದರ್ಶಿ , ಸಂಚಾಲಕ ಮಿಮಿಕ್ರಿ ರಾಜೀವ್ , ಮುಬಾರಕ್ ,ಸಿ ಸಿ ದೇವರಾಜ್ , ಕೆ ಎಂ ಮನಸ್ ,ನಿಲಯ ವ್ಯವಸ್ಥಾಪಕರಾದ ಸೆಲ್ವ ರಾಜ್, ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ:ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.