
ಭಟ್ಕಳ ಗ್ರಾಮೀಣ ಭಾಗದ ಜನತೆಗೂ ಕೂಡಾ ಕಾನೂನಿನ ಅರಿವು ಮೂಡಿಸಬೇಕು, ಕಾನೂನಿನ ನೆರವು ದೊರೆಯಬೇಕು ಎನ್ನುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಕೂಡಾ ಕಾನೂನು ನೆರವು ಕೇಂದ್ರ ತೆರೆಯಲಾಗುತ್ತಿದೆ ಎಂದು ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ. ಹೇಳಿದರು. .
ಅವರು ತಾಲೂಕಿನ ಅತೀ ಗ್ರಾಮೀಣ ಪ್ರದೇಶವಾದ ಉತ್ತರ ಕೊಪ್ಪ ಹಾಗೂ ಮಾವಳ್ಳಿ-1 ಮತ್ತು ಶಿರಾಲಿ ಗ್ರಾಮ ಪಂಚಾಯತ್‌ಗಳಲ್ಲಿ ಕಾನೂನು ನೆರವು ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಗರ ಪ್ರದೇಶದಿಂದ ದೂರ ಇರುವ ಇಲ್ಲಿನ ಜನತೆ ಕಾನೂನು ಸಲಹೆ ಪಡೆಯಬೇಕು ಎಂದರೆ ನಗರಕ್ಕೆ ಬರಬೇಕಾಗುತ್ತದೆ. ಅದೇ ಜನತೆಗೆ ಅವರಿರುವಲ್ಲಿಯೇ ಕಾನೂನು ಸಲಹೆ ದೊರೆಯುತ್ತದೆ ಎಂದ ಅವರು ಗ್ರಾಮ ಪಂಚಾಯತ್ ಸದಸ್ಯರು, ಜನಪ್ರತಿನಿದಿಗಳು ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ನಾಯ್ಕ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕಾನೂನು ನೆರವು ಕೇಂದ್ರವನ್ನು ಉದ್ಘಾಟಿಸಿರುವುದು ತುಂಬಾ ಸಂತಸ ತಂದಿದೆ. ಗ್ರಾಮೀಣ ಭಾಗದ ಜನತೆಗೂ ಕೂಡಾ ಕಾನೂನು ಅರಿವು, ಸಲಹೆ, ಸಹಾಯ ದೊರೆಯಬೇಕು ಎನ್ನುವುದು ಕಾನೂನು ನೆರವು ಕೇಂದ್ರದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಮಾತನಾಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಕೀಲರೋರ್ವರು ವಾರದಲ್ಲಿ ಎರಡು ದಿನ ಲಭ್ಯವಿದ್ದು ಗ್ರಾಮೀಣ ಜನತೆ ತಮಗೆ ಅಗತ್ಯವಿರುವ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ತಾಲೂಕಾ ಕೇಂದ್ರದಲ್ಲಿ ಸುಮಾರು 45 ಕಿ.ಮಿ. ದೂರದಲ್ಲಿರುವ ಕೊಪ್ಪ ಗ್ರಾಮ ಪಂಚಾಯತ್‌ದಲ್ಲಿ ಕಾನೂನು ಸಲಹಾ ಕೇಂದ್ರ ಸ್ಥಾಪಿಸಿರುವುದು ಅತ್ಯಂತ ಸಂತಸ ತಂದಿದೆ. ಈ ಭಾಗದ ಜನತೆ ಇದರ ಸದುಪಯೋಗ ಪಡೆಯಲಿ, ಕಾನೂನು ಅರಿಯುವಲ್ಲಿ ಸಹಕಾರಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ನಾಯ್ಕ, ಮಾವಳ್ಳಿ-1 ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾದೇವಿ ನಾಯ್ಕ, ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ನಾಯ್ಕ, ನ್ಯಾಯವಾದಿ ಶಂಕರ ಕೆ. ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ ನಾಯ್ಕ, ದಿನೇಶ ನಾಯ್ಕ, ಕೊಪ್ಪ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಾಗಮ್ಮ ಗೊಂಡ, ಸದಸ್ಯರಾದ ಗೋವಿಂದ ಮರಾಠಿ, ಮಾಸ್ತಿ ಗೊಂಡ, ಮಾಸ್ತಿ ಎಂ. ಗೊಂಡ, ಲಕ್ಷಿö್ಮÃ ಮೊಗೇರ ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ