March 17, 2025

Bhavana Tv

Its Your Channel

ಅಕ್ರಮವಾಗಿ ವಿದೇಶಿ ಸಿಗರೇಟ್ ಮಾರಾಟ ಹಿನ್ನೆಲೆ ಭಟ್ಕಳ ಪೊಲೀಸರಿಂದ ಭರ್ಜರಿ ಕಾರ್ಯಚರಣೆ

ಭಟ್ಕಳ:ತಾಲ್ಲೂಕಿನ ಹೂವಿನ ಚೌಕದ ಹತ್ತಿರ ರೀಮ್ಸ ಅಂಗಡಿ ಒಂದರಲ್ಲಿ ವಿನ್ (win)ಕಂಪನಿಯ ವಿದೇಶಿ ಸೀಗರೇಟ್ ಸಂಗ್ರಹಿಸಿಟ್ಟ ಗೋದಾಮಿನ ಮೇಲೆ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 7 ಬಾಕ್ಸ್ ಸಿಗರೇಟ್ ನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಕೆಲವು ಜಾಗದಲ್ಲಿ ತ್ವರಿತ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡದೆ ಅಸಮರ್ಪಕವಾಗಿರು ಸಿಗರೇಟ್
ವಶದಲ್ಲಿಟ್ಟುಕೊಂಡು 18 ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡುತ್ತಿದ್ದಾಗ
ನಗರ ಠಾಣೆಯ ಸಿ.ಪಿ.ಐ ದಿವಾಕರ ನೇತೃತ್ವ ತಂಡ ಎಕ್ ಕಾಲದಲ್ಲಿ ದಾಳಿ ನಡೆಸಿ ಸಂಗ್ರಹಿಸಿಟ್ಟ 2,25,500 ರೂಪಾಯಿ ಮೌಲ್ಯದ ಸುಮಾರು 3500 ವಿದೇಶಿ ಸೀಗರೇಟ್ ಪ್ಯಾಕೇಟ್ ಗಳು ವಶಪಡಿಸಿಕೊಂಡು
ಆರೋಪಿ ಮರಜುಕ್ ಅಹ್ಮದ ತಂದೆ ಮಹಮ್ಮದ್ ಪಾರೂಕ್ ಬಂದರ ರೋಡ್ 2ನೇ ಕ್ರಾಸ್ ನಿವಾಸಿಯನ್ನು ಬಂಧಿಸಿದ್ದಾರೆ.ತಾಲೂಕಿನಲ್ಲಿ ಈ ಪ್ರಕರಣವು ಮೊದಲು ಬಾರಿ ಆಗಿದ್ದು ಈ ಬಗ್ಗೆ ನಗರ ಠಾಣೆ ಪಿ.ಎಸೈ ಯಲ್ಲಪ್ಪ ಮಾದರ ದೂರು ನೀಡಿದ್ದು ಕೊಟ್ಪಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪಿ ಎಸ್ ಐ ಸುಮಾ ಆಚಾರ್ಯ ತನಿಖೆ ಕೈಗೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ನಾರಾಯಣ ನಾಯ್ಕ, ಲೋಕೇಶ ಕಪ್ಪಿ, ನಾಗರಾಜ ಮೊಗೇರ, ಸಿದ್ದು ಕಾಂಬ್ಳೆ, ಸಿದ್ದು, ಈರಣ್ಣ ಉಪಸ್ಥಿತರಿದ್ದರು

error: