March 12, 2025

Bhavana Tv

Its Your Channel

ಸದ್ದಾಂ ಹುಸೇನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ,ಇಶಾಕ್ ಅಬ್ದುಲ್ ಖಾದಿರ್‌ನನ್ನು ಬಂಧಿಸಿದ ಭಟ್ಕಳ ಪೊಲೀಸರು

ಟ್ಕಳ: ಭಟ್ಕಳ ಸುತ್ತಮುತ್ತ ಗೋವುಗಳನ್ನು ಕದ್ದು ಸಾಗಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಶಂಕೆಯ ಮೇರೆಗೆ ಕಳೆದ 2021ರ ಡಿಸೆಂಬರ್‌ನಲ್ಲಿ ಭಟ್ಕಳ ಜಾಲಿರೋಡ್ ನಿವಾಸಿ, ಬದ್ರಿಯಾ ಕಾಲೋನಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಸದ್ದಾಂ ಹುಸೇನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಮುಸ್ತಫಾ ಆರೋಪಿಗಳ ಪೈಕಿ ತಲೆ ಮರೆಸಿಕೊಂಡಿದ್ದ ನಾವುಂದದ ನಿವಾಸಿ ಇಶಾಕ್ ಅಬ್ದುಲ್ ಖಾದಿರ್‌ನನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈತ ಭಟ್ಕಳ ಘಟನೆಯ ನಂತರ ಬೆಂಗಳೂರಿಗೆ ಪರಾರಿಯಾಗಿದ್ದು, ಕಳೆದ ಒಂದು ತಿಂಗಳ ಹಿಂದೆಯಷ್ಟೇ ದರೋಡೆಗೆ ಯತ್ನಿಸಿ ಬೆಂಗಳೂರು ಸಂಪಿಗೆಹಳ್ಳಿ ಪೊಲೀಸರು ಈತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲು ಪಾಲಾಗಿದ್ದ ಭಟ್ಕಳ ಬದ್ರಿಯಾ ಕಾಲೋನಿ ಮಾರಣಾಂತಿಕ ಹಲ್ಲೆ ಪ್ರಕರಣ ಈತನನ್ನು ಭಟ್ಕಳ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಮಂಗಳವಾರ ಇಲ್ಲಿನ ಬಿಳಲಖಂಡ ಮನೆ ಒಂದರಲ್ಲಿ ಬಚ್ಚಿಟ್ಟ ತಲಾವಾರ ಮತ್ತು ಇತರ ಮಾರಕಾಸ್ತ್ರಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆಯೇ ಹಲ್ಲೆ ಘಟನೆಗೆ ಸಂಬAಧಿಸಿದAತೆ ಮುಲ್ಕಿಯ ಆಲ್ಫಾಜ್ ಎಂಬಾತನನ್ನು ಭಟ್ಕಳ ಪೊಲೀಸರು ಬಂಧಿಸಿದ್ದರೆ, ಕೊಲೆ ಆರೋಪಿ ಬಶೀರ್ ಮುಲ್ಕಿ ಪೊಲೀಸರ ವಶದಲ್ಲಿ ಇದ್ದಾನೆ. ಆತನನ್ನು ಇನ್ನಷ್ಟೇ ಭಟ್ಕಳ ಪೊಲೀಸರು ವಿಚಾರಣೆಗೆ ಭಟ್ಕಳಕ್ಕೆ ಕರೆದುಕೊಂಡು ಬರಬೇಕಿದೆ. ಇಶಾಕ್ ಬಂಧನದೊದಿಗೆ ಹಲ್ಲೆ ಘಟನೆಯಲ್ಲಿ ಬಂಧಿತರಾದವರ ಸಂಖ್ಯೆ ಮೂರಕ್ಕೆ ಏರಿದೆ. ಘಟನೆಯಲ್ಲಿ ಪಾಲ್ಗೊಂಡ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಗೋಳ್ಳತನದ ಆರೋಪಿ ಮುಲ್ಕಿಯ ಮುಸ್ತಫಾ ಓರ್ವ ಕೊಲೆಯ ಆರೋಪಿಯಾಗಿದ್ದ. 2018ರಲ್ಲಿ ಈತ ಕೆಲವರೊಂದಿಗೆ ಸೇರಿಕೊಂಡು ಅಲ್ಲಿನ ಚಿನ್ನದ ಅಂಗಡಿಯ ಇಬ್ಬರು ವ್ಯಕ್ತಿಗಳ ( ಮಾವ ಮತ್ತು ಅಳಿಯ) ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವರು ಮೃತ ಪಟ್ಟಿದ್ದರು. ಘಟನೆಯ ನಂತರ ಅಲ್ಲಿಂದ ತಲೆ ಮರೆಸಿಕೊಂಡು ಭಟ್ಕಳಕ್ಕೆ ಓಡಿ ಬಂದಿದ್ದ ಮುಸ್ತಫಾ ಇಲ್ಲಿನ ಗುಳಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದುಕೊಂಡು ಗೆಳೆಯರೊಂದಿಗೆ ವಾಸವಾಗಿದ್ದ. ಭಟ್ಕಳದಲ್ಲಿ ಗೋಕಳ್ಳತನವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ ಈತ, ಕೊಲೆ ಆರೋಪಕ್ಕೆ ಸಂಬAಧಿಸಿದAತೆ ಹೈಕೋರ್ಟಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಂತದಲ್ಲಿಯೇ ಗೋಕಳ್ಳತನ ಪ್ರಕರಣದಲ್ಲಿ ಮುಸ್ತಫಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಇನ್ನು ಸಹೋದರನಿಗೆ ಉಳಿಗಾಲ ಇಲ್ಲ ಎಂದು ಅರಿತ ಆತನ ಸಹೋದರ ಬಶೀರ್, ಇದಕ್ಕೆಲ್ಲ ಭಟ್ಕಳದಲ್ಲಿ ಇರುವ ಸದ್ದಾಂನೇ ಕಾರಣ ಎಂದು ಶಂಕೆ ವ್ಯಕ್ತಪಡಿಸಿ ದಾಳಿಗೆ ಯೋಜನೆ ರೂಪಿಸಿದ್ದ. ನಂತರ ತಂಡ ಕಟ್ಟಿಕೊಂಡು ಬದ್ರಿಯಾ ಕಾಲೋನಿಯಲ್ಲಿ ಅಂಗಡಿ ನಡೆಸುತ್ತಿದ್ದ ಸದ್ದಾಂನ ಮೇಲೆ ದಾಳಿ ನಡೆಸಿ ಅಲ್ಲಿಂದ ಕಾಲು ಕಿತ್ತಿದ್ದ.

ಆರೋಪಿಗಳೂ ಚಿಕ್ಕ ವಯಸ್ಸಿನಲ್ಲೇ ದರೋಡೆ, ಸುಲಿಗೆ, ಕಳ್ಳತನ, ಹಸುಗಳ್ಳತನ, ಕೃತ್ಯದಲ್ಲಿ ತೊಡಗುತ್ತಿದ್ದರು. ಉಡುಪಿ, ಮಂಗಳೂರು, ಕುಂದಾಪುರ ಕಡೆ ‘ಟೀಂ ಗರುಡ 900’ ಹೆಸರಿನ ತಂಡ ರಚಿಸಿ ರಾತ್ರಿ ಹೊತ್ತು ಓಡಾಡುವವರನ್ನು ದರೋಡೆ ಮಾಡುತ್ತಿದ್ದರು. ಬಂದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದರು. ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು
ಎಸ್ಪಿ ಸುಮನ್ ಪೆನ್ನೇಕರ್, ಡಿವಾಯ್‌ಎಸ್ಪಿ ಕೆ.ಯು.ಬೆಳ್ಳಿಯಪ್ಪ ಮಾರ್ಗದರ್ಶನ ಹಾಗೂ ಸಿಪಿಐ ದಿವಾಕರ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದ ಭಟ್ಕಳ ಪೊಲೀಸರು ಆರೋಪಿಗಳು ಬಳಸಿದ್ದ ಸ್ವಿಫ್ಟ್ ಕಾರೊಂದನ್ನು ಜಫ್ತುಪಡಿಸಿಕೊಂಡು ತನಿಖೆ ಮುಂದುವರೆಸಿದ್ದರು.

error: