March 17, 2025

Bhavana Tv

Its Your Channel

ಈದ್-ಉಲ್-ಫಿತ್ರ ಹಬ್ಬದ ಪ್ರಯುಕ್ತ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರಿಗೆ ಸಿಹಿ ಹಂಚಿದ ಅತೀಕುರ್ ರೆಹಮಾನ್ ಶಾಬಂದ್ರಿ

ಭಟ್ಕಳ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯ ಅತೀಕುರ್ ರೆಹಮಾನ್ ಶಾಬಂದ್ರಿ ಅವರು ತಮ್ಮ ಭಟ್ಕಳ್ ನ್ಯೂಸ್ ಸಂಸ್ಥೆಯ ವತಿಯಿಂದ ಈದ್-ಉಲ್-ಫಿತ್ರ ಹಬ್ಬದ ಪ್ರಯುಕ್ತ ಪರಸ್ಪರ ಶುಭಾಷಯಗಳನ್ನು ಹೇಳಿ ಸಿಹಿಯನ್ನು ಹಂಚಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ನಮ್ಮ ಸಂಘದ ಮುಖ್ಯ ಉದ್ದೇಶವೇ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಸಹಬಾಳ್ವೆಯನ್ನು ಸಾರುವುದಾಗಿದೆ. ಪತ್ರಕರ್ತರ ಬರವಣಿಗೆಯು ಸಮಾಜದ ಹಿತ ಕಾಪಾಡುವತ್ತ ಹೆಚ್ಚು ಗಮನ ಕೊಡಬೇಕು. ಕೋಮು ಸಾಮರಸ್ಯ ಕಾಪಾಡುತ್ತ ಕೂಡಾ ಗಮನ ನೀಡಬೇಕು ಎನ್ನುವ ಉದ್ದೇಶದಿಂದಲೇ ಸಂಘ ಸ್ಥಾಪನೆಯಾಗಿದ್ದು ಕಳೆದ 29 ವರ್ಷಗಳಿಂದ ಅದನ್ನು ಮಾಡಿಕೊಂಡು ಬಂದಿದೆ ಎಂದರು. ಹಬ್ಬಗಳ ಸಂದರ್ಭದಲ್ಲಿ ಪರಸ್ಪರರಲ್ಲಿ ಶುಭಾಷಯ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಕಳೆದ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ ಎಂದ ಅವರು ಇಲ್ಲಿ ಹಣ ವಸ್ತುಗಳು ಮುಖ್ಯವಲ್ಲ, ಬದಲಾಗಿ ಉತ್ತಮ ಮನಸ್ಸುಗಳು ಮುಖ್ಯ ಎಂದರಲ್ಲದೇ ಸಂಘದಲ್ಲಿರುವವರು ಸಂಘದ ಕುರಿತು ಅಭಿಮಾನವನ್ನು ಹೊಂದಿರಬೇಕು ಎಂದೂ ಹೇಳಿದರು.
ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಮಹಮ್ಮದ್ ರಿಜ್ವಾನ್ ಗಂಗಾವಳಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಘದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸದಸ್ಯ ಸತೀಶ್‌ಕುಮಾರ್ ಮಾತನಾಡಿ ನಮ್ಮಲ್ಲಿ ನಾವು ಪರಸ್ಪರರಲ್ಲಿ ಉತ್ತಮ ಬಾಂಧ್ಯವನ್ನು ಸಂಘದಲ್ಲಿ ಬೆಳೆಸಿಕೊಂಡು ಬಂದಿದ್ದೇವೆ. ಸಂಘ ಸ್ಥಾಪನೆಯ ಉದ್ದೇಶವನ್ನು ಕಾಪಾಡಿಕೊಂಡು, ಎಲ್ಲರ ಸದಸ್ಯರ ಭಾವನೆಗಳಿಗೆ ಸ್ಪಂದಿಸುತ್ತಾ ಬರಲಾಗಿದ್ದು ಮುಂದೆಯೂ ಇದು ಮುಂದುವರಿಯಬೇಕು ಎಂದು ಆಗ್ರಹಿಸಿದರು.
ಇನ್ನೋರ್ವ ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್ ಮಾತನಾಡಿ ನಮ್ಮ ಸಂಘದಲ್ಲಿ ಪರಸ್ಪರರಲ್ಲಿ ಹಬ್ಬದ ಸಂಧರ್ಭದಲ್ಲಿ ಶುಭಾಷಯ ಕೋರುವ ಕಾರ್ಯಕ್ರಮವನ್ನು ಹಲವಾರು ವರ್ಷಗಳಿಂದ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಇದು ಇನ್ನು ಮುಂದೆಯೂ ಕೂಡಾ ಮುಂದುವರಿದುಕೊAಡು ಬರಬೇಕು ಎಂದು ಹಾರೈಸಿದರು.
ಜಿಲ್ಲಾ ಸಂಘದ ಮಾಜಿ ಕಾರ್ಯಕಾರಿಣಿ ಸದಸ್ಯ ಎಂ.ಆರ್. ಮಾನ್ವಿ ಮಾತನಾಡಿ ನಮ್ಮಲ್ಲಿ ಪರಸ್ಪರರಲ್ಲಿ ನಂಬಿಕೆ ಮುಖ್ಯವಾಗಿದೆ. ನಾವು ನಮ್ಮ ನಮ್ಮ ಆಚರಣೆಯನ್ನು ಅವರವರ ನಂಬಿಕೆಯAತೆಯೇ ಮಾಡಿಕೊಂಡು ಬಂದರೂ ಸಹ ಪರಸ್ಪರರಲ್ಲಿ ನಂಬಿಕೆ, ವಿಶ್ವಾಸದಿಂದ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದರು.
ಸಂಘದ ಸದಸ್ಯರಿಗೆ ಸಿಹಿ ಹಂಚಿದ ಭಟ್ಕಳ ನ್ಯೂಸ್ ನ ಅತೀಕುರ್ ರೆಹಮಾನ್ ಶಾಬಂದ್ರಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯ ಫಯ್ಯಾಜ್ ಮುಲ್ಲಾ, ಶೈಲೇಶ ವೈದ್ಯ ಮುಂತಾದವರು ಉಪಸ್ಥಿತರಿದ್ದರು

error: