
ಭಟ್ಕಳ: ಕಾರಿನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು 400 ಕೆಜಿ ಮಾಂಸ ಸಹಿತ ಕಾರು ಹಾಗೂ ಆರೋಪಿಯನ್ನು ವಶಪಡಿಸಿಕೊಂಡ ಘಟನೆ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಆರೋಪಿಗಳಾದ ಸೈಯ್ಯದ್ ಮೋಹಿದೀನ್ ಅಲಿ ರಸೂಲ್ ಸಾಬ್ ಸವಣೂರು ಬೆಂಡೆಕಾನ ನಿವಾಸಿ, ಆರೋಪಿ ಸಿಕ್ಕಿದ್ದು, ಇನ್ನೂ ಉಳಿದ ಗಜಬರ್ ಯಾನೆ ಸಮೀರ್ ಮುಹಮ್ಮದ್ ಹುಸೇನ್ ಸಾಬ್,ಹನೀಫಾಭಾದ್ ನಿವಾಸಿ, ಇಬ್ರಾಹಿಂ ಮುಹಮ್ಮದ್ ಹುಸೇನ್ ಹವಾ ಹನೀಫಾಭಾದ್ ನಿವಾಸಿ ಹಾಗೂ ನಾಸೀರ್ ಎಮ್ ಎಸ್ ಹಮೀದ್ ತಗ್ಗರಗೋಡ್ ನಿವಾಸಿ ಈ ಮೂರು ಜನ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಡಿವಾಯ್‌ಎಸ್ಪಿ ಕೆ.ಯು.ಬೆಳ್ಳಿಯಪ್ಪ ಹಾಗೂ ಸಿ.ಪಿ.ಐ ಮಹಾಬಲೇಶ್ವರ ಎಸ್. ನಾಯ್ಕ ಮಾರ್ಗದರ್ಶನದಲ್ಲಿ ಗ್ರಾಮಿಣ ಠಾಣೆಯ ಪಿ.ಎಸ್.ಐ ರತ್ನಾ ಎಸ್,ಕುರಿ, ಸಿಬ್ಬಂದಿಗಳಾದ ಮಹೇಶ ಪಟಗಾರ, ಶಿವಶರಣಪ್ಪ ಸಿನ್ನೂರ ಆರೋಪಿಯಿಂದ 80.000 ರೂಪಾಯಿ ಮೌಲ್ಯದ ಸುಮಾರು 400 ಕೆಜಿ ಆಗುವಷ್ಟು ಧನದ ಮಾಂಸ ಹಾಗೂ ಆರೋಪಿಗಳು ಬಳಸಿದ್ದ ಕಾರೊಂದನ್ನು ಜಫ್ತುಪಡಿಸಿಕೊಂಡು. ಸೈಯ್ಯದ್ ಮೊಹಿದ್ದೀನ್ ಅಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ