
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದರೂ ಸಹ ಬುಧವಾರ ಸಾಧಾರಣ ಮಳೆಯಾಗಿದ್ದು ಯಾವುದೇ ರೀತಿಯ ಹಾನಿ ಸಂಭವಿಸಿರಲಿಲ್ಲ. ಆದರೆ ಗುರುವಾರ ಬೆಳಿಗ್ಗೆಯಿಂದ ಆರಂಭವಾದ ಮಳೆ ತೀವ್ರವಾಗಿ ಸುರಿಯಲಾರಂಭಿಸಿದ್ದು ಅನೇಕ ಕಡೆಗಳಲ್ಲಿ ಅಪಾಯದ ಗಂಟೆ ಭಾರಿಸುತ್ತಿದೆ.
ಭಟ್ಕಳ ತಾಲೂಕಿನಲ್ಲಿ ಮೇ.19ರ ಬೆಳಿಗ್ಗೆ 11 ಗಂಟೆಯ ತನಕ ಕೇವಲ 11 ಮಿ.ಮಿ. ಮಳೆಯಾಗಿದ್ದು ನಂತರ ಜೋರಾದ ಮಳೆಯ ಪ್ರಭಾವ ಮಧ್ಯಾಹ್ನದ ಸಮಯ ತೀವ್ರಗತಿಯನ್ನು ಪಡೆದುಕೊಂಡಿದ್ದು ಹೆಚ್ಚಿನ ಕಡೆಗಳಲ್ಲಿ ನೀರು ತುಂಬಿಕೊAಡಿದೆ. ತಾಲೂಕಿನ ಅನೇಕ ಭಾಗದಲ್ಲಿ ಜಮೀನುಗಳಲ್ಲಿ ನೀರು ತುಂಬಿಕೊAಡಿದ್ದರೆ ಸಂಜೆಯಾಗುತ್ತಲೇ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚು ಮಳೆ ಸುರಿಯಲಾರಂಭಿಸಿದ್ದು ಜನತೆ ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಗಿದೆ. ಅನೇಕ ಕಡೆಗಳಲ್ಲಿ ಜನತೆ ಹೊಸ ಮನೆ ಕಟ್ಟುವುದು, ಹಳೆ ಮನೆಗಳನ್ನು ರಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದು ಧಾರಾಕಾರ ಮಳೆ ಸುರಿಯುತ್ತಿದ್ದುದರಿಂದ ಅಲ್ಲಲ್ಲಿ ಹಾಕಿದ್ದ ಮಣ್ಣು, ಜಲ್ಲಿ, ಮರಳು, ಸಿಮೆಂಟ್ ಎಲ್ಲವೂ ಜಲಾವೃತವಾಗಿ ನಷ್ಟ ಸಂಭವಿಸುವAತೆ ಮಾಡಿದೆ. ಹಲವು ಮನೆಗಳ ರಿಪೇರಿಗೆಂದು ತಯಾರಿ ಮಾಡಿಕೊಂಡಿದ್ದರೆ, ಮಳೆಯಿಂದಾಗಿ ಇನ್ನಷ್ಟು ವಿಳಂಭವಾಗುವ ಸಾಧ್ಯತೆ ಇದೆ. ಮಳೆಯ ತೀವ್ರತೆಯಿಂದಾಗಿ ಕೂಲಿ ಕೆಲಸಕ್ಕೆ ಹೋದವರು ವಾಪಾಸು ಬಂದಿದ್ದು ಒಂದು ದಿನದ ಕೂಲಿ ಸಹಿತ ಇಲ್ಲವಾದಂತಾಗಿದೆ.
ಶಿರಾಲಿ, ಬೇಂಗ್ರೆ, ಮಾವಿನಕಟ್ಟೆ ಕಡೆಗಳಲ್ಲಿ ಹಲವು ರೈತರು ಗದ್ದೆಗೆ ಬೀಜ ಬಿತ್ತನೆ ಮಾಡಿದ್ದು ಅಧಿಕ ಮಳೆಯಾಗಿರುವುದರಿಂದ ಬೀಜ ಮೊಳೆಕೆಯೊಡಿಯುವ ಕುರಿತು ರೈತರು ಚಿಂತಿತರಾಗಿದ್ದಾರೆ. ಇನ್ನು 2-3 ದಿನಗಳ ಕಾಲ ಇದೇ ರೀತಿಯಾಗಿ ಮಳೆ ಮುಂದುವರಿದರೆ ಈ ಭಾಗರ ರೈತರು ಮತ್ತೆ ಬೀಜ ಬಿತ್ತನೆ ಮಾಡಬೇಕಾಗ ಬಹುದು ಎನ್ನುವ ಚಿಂತೆಯಲ್ಲಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ