March 16, 2025

Bhavana Tv

Its Your Channel

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಶೇ.100 ಫಲಿತಾಂಶ

ಭಟ್ಕಳ ಮಾರ್ಚ/ಎಪ್ರಿಲ್ 2022 ರಲ್ಲಿ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ತಾಲೂಕಿನ ಪುರವರ್ಗದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (ಆಂಗ್ಲ ಮಾಧ್ಯಮ) ಈ ವರ್ಷವೂ ಶೇಕಡಾ 100 ಕ್ಕೆ 100 ಫಲಿತಾಂಶದೊAದಿಗೆ ಮುನ್ನುಗ್ಗಿದೆ. 1 ರಿಂದ 5 ನೇ ತರಗತಿಯ ವರೆಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಧ್ಯಯನ ಮಾಡಿ 6 ನೇ ತರಗತಿಗೆ ಈ ವಸತಿ ಶಾಲೆಗೆ ಪ್ರವೇಶ ಪಡೆದು ಆಂಗ್ಲ ಮಾಧ್ಯಮದಲ್ಲಿ 10 ನೇ ತರಗತಿಯ ವರೆಗೂ ಅಧ್ಯಯನ ಮಾಡಿ SSಐಅ ಪರೀಕ್ಷೆಗೆ ಹಾಜರಾದ 46 ವಿದ್ಯಾರ್ಥಿನಿಯರಲ್ಲಿ 46 ವಿದ್ಯಾರ್ಥಿನಿಯರೂ ಪಾಸಾಗಿದ್ದ್ದು 34 ಡಿಸ್ಟಿಂಕ್ಷನ್, 12 ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕುಮಾರಿ ಹರ್ಷಿತಾ ವಿಷ್ಣು ನಾಯ್ಕ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ, ಇಂಗ್ಲೀಷನಲ್ಲಿ 100 ಕ್ಕೆ 100 ಅಂಕ, ಹಿಂದಿಯಲ್ಲಿ 100 ಕ್ಕೆ 100 ಅಂಕ ಗಣಿತದಲ್ಲಿ 100 ಕ್ಕೆ 99 ಅಂಕ ವಿಜ್ಞಾನದಲ್ಲಿ 100 ಕ್ಕೆ 100 ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ 100 ಕ್ಕೆ 100 ಅಂಕ ಪಡೆದು ಒಟ್ಟಾರೆ 625 ಕ್ಕೆ 624 ಅಂಕ ಗಳಿಸಿ ಶೇಕಡ 99.84 ಅಂಕಗಳೊAದಿಗೆ ಶಾಲೆಗೆ ಪ್ರಥಮ ಸ್ಥಾನ ರಾಜ್ಯಕ್ಕೆ ದ್ವಿತೀಯ ಸ್ಥಾನ , ಕುಮಾರಿ ಜೀವಿತಾ ಮಂಜುನಾಥ ನಾಯ್ಕ 625 ಕ್ಕೆ 623 ಅಂಕ ಗಳಿಸಿ ಶೇಕಡ 99.68 ಅಂಕಗಳೊAದಿಗೆ ಶಾಲೆಗೆ ದ್ವಿತೀಯ ಸ್ಥಾನ ರಾಜ್ಯಕ್ಕೆ ತೃತೀಯ ಸ್ಥಾನ , ಹರ್ಷಿತಾ ಮಾಸ್ತಿ ಗೊಂಡ 625 ಕ್ಕೆ 616 ಅಂಕ ಗಳಿಸಿ ಶೇಕಡ 98.56 ಅಂಕಗಳೊAದಿಗೆ ತೃತೀಯ ಸ್ಥಾನ ರಾಜ್ಯಕ್ಕೆ ಹತ್ತನೇ ಸ್ಥಾನ, ಶ್ವೇತಾ ಗಣಪತಿ ನಾಯ್ಕ 625 ಕ್ಕೆ 614 ಅಂಕ ಗಳಿಸಿ ಶೇಕಡ 98.24 ಅಂಕಗಳೊAದಿಗೆ ಶಾಲೆಗೆ ನಾಲ್ಕನೇಯ ಸ್ಥಾನ ಹಾಗೂ ಭಾಗ್ಯ ಕೃಷ್ಣ ಗೊಂಡ 625 ಕ್ಕೆ 608 ಅಂಕ ಗಳಿಸಿ ಶೇಕಡ 97.28 ಅಂಕಗಳೊAದಿಗೆ ಶಾಲೆಗೆೆ ಐದನೇಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿತಂದಿರುತ್ತಾರೆ.

ಎಸ್. ಎಸ್.ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ವಸತಿ ಶಾಲೆಗೆ ಹಾಗೂ ಇಲಾಖೆಗೆ ಕೀರ್ತಿತಂದ ವಿದ್ಯಾರ್ಥಿನಿಯರನ್ನು ಹಾಗೂ ವಸತಿ ಶಾಲೆಯಲ್ಲಿ 100 ಕ್ಕೆ 100 ಫಲಿತಾಂಶ ಬರುವಲ್ಲಿ ಶ್ರಮಿಸಿದ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರನ್ನು, ವಸತಿ ಶಾಲೆಯ ಪ್ರಾಂಶುಪಾಲರಾದ ಶೀ ರಮೇಶ ಕೆ. ನಾಯ್ಕ ರವರು ಅಭಿನಂದಿಸಿ ಶುಭ ಹಾರೈಸಿದ್ದಾರೆ

error: