
ಭಟ್ಕಳ: 2021-2022 ನೇ ಸಾಲಿನಲ್ಲಿ ಕಾರವಾರದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಭಟ್ಕಳ ತಾಲೂಕಿನ ವಿವಿಧ ಇಲಾಖೆಗಳ ಸರಕಾರಿ ನೌಕರರಿಗೆ ಸರಕಾರಿ ನೌಕರರ ಸಂಘ ಭಟ್ಕಳ ತಾಲೂಕು ಶಾಖೆಯಿಂದ ಗೌರವ ಸಮರ್ಪಣೆ
ಕಾರ್ಯಕ್ರಮವನ್ನು ಮಿನಿ ವಿಧಾನಸೌಧದಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಟ್ಕಳ ಸಹಾಯಕ ಆಯುಕ್ತೆ ಶ್ರೀಮತಿ ಮಮತಾದೇವಿ ಮಾತನಾಡಿ ‘ಸರಕಾರಿ ನೌಕರರು ಸಿಗುವ ಅಲ್ಪ ಸಮಯದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿರುವುದು ಶ್ಲಾಘನೀಯ ಮತ್ತು ಅಭಿನಂದನೀಯನಾರ್ಹ. ಹಾಗೂ ಒತ್ತಡದ ಕೆಲಸದ ನಡುವೆ ಇದೇ ದಿಸೆಯಲ್ಲಿ ಭಟ್ಕಳ ತಾಲೂಕಿನ ನೌಕರರ ಸಂಘವು ಪ್ರತಿಭಾವಂತ ನೌಕರರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ಸAಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ ನಮ್ಮ ಈಗಿನ ಸಂಘವು ಉತ್ಸಾಹಿ ಪದಾಧಿಕಾರಿಗಳಿಂದ ಕೂಡಿದ್ದು ಬಹಳಷ್ಟು ನೌಕರರ ಸ್ನೇಹಿ ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಭಟ್ಕಳ ತಾಲೂಕಿನ ಅಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಸಂಘಟಿತರಾಗಿ ಒಗ್ಗೂಡಿ ಉತ್ತಮ ಕೆಲಸ ಮಾಡುತ್ತಿರುವ ಭಟ್ಕಳ ತಾಲೂಕಿನ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಅಭಿನಂದನಾರ್ಹರೆAದು ಪ್ರಶಂಶಿಸಿದರು.
ಸAಘದ ಪ್ರಧಾನ ಕಾರ್ಯದರ್ಶಿ ಗಣೇಶ ಹೆಗಡೆ ನಿರೂಪಿಸಿದರು, ರಾಜ್ಯ ಪರಿಷತ್ ಸದಸ್ಯರಾದ ಪ್ರಕಾಶ ಶಿರಾಲಿ ಸ್ವಾಗತಿಸಿದರು, ಉಪಾಧ್ಯಕ್ಷ ರಾದ ಶಂಶುದ್ದೀನ್ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಯವರಾದ ಶ್ರೀಮತಿ ವಿದ್ಯಾ ಹೆಗಡೆ, ಉಪಾಧ್ಯಕ್ಷ ಶ್ರೀಮತಿ ಭಾಗೀರಥಿ ನಾಯ್ಕ, ಕ್ರೀಡಾ ಕಾರ್ಯದರ್ಶಿ ವಾಸುದೇವ ಮೊಗೇರ, ಸದಸ್ಯರಾದ ಸುನೀಲ ಕೊಚರೀಕರ್, ಶ್ರೀಮತಿ ರಜನಿ ದೇವಡಿಗ, ಉಮೇಶ್ ಕೆರೆಕಟ್ಟೆ, ತಾಲೂಕಿನ ವಿವಿಧ ಇಲಾಖೆಗಳ ನೌಕರರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ