March 14, 2025

Bhavana Tv

Its Your Channel

“ಅಪೂರ್ವ ಸಂಗಮ” ಎಸ್ ಎಸ್ ಎಲ್ ಸಿ 1994 ರ ಮಿತ್ರರಿಂದ ಸಮಾಜಮುಖಿ ಕಾರ್ಯ

ಭಟ್ಕಳ: “ಅಪೂರ್ವ ಸಂಗಮ” , ಎಸ್ ಎಸ್ ಎಲ್ ಸಿ 1994 ರ ಮಿತ್ರರ ಒಂದು ವಾಟ್ಸಪ್ ಗ್ರೂಪ್ ಸಮಾಜಮುಖಿ ಕಾರ್ಯಗಳಲ್ಲಿ ತನ್ನದೇ ಆದ ರೀತಿಯಲ್ಲಿ ತೊಡಗಿಸಿಕೊಂಡAತಹ ಮಿತ್ರರಪಡೆ.ಅನೇಕ ನೊಂದ ಜೀವಗಳಿಗೆ ಸಹಾಯಹಸ್ತವನ್ನು ನೀಡಿದ ಸಮಾನ ಮನಸ್ಕ ಗೆಳೆಯರ ಗುಂಪು.ಇದುವರೆಗೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಸಹಾಯಧನವನ್ನು ಅನೇಕರಿಗೆ ಮಾಡಿರುತ್ತದೆ

ಈ ಗುಂಪಿನ ಅತೀ ಸಕ್ರೀಯ ಗೆಳೆಯರಲ್ಲಿ ಒಬ್ಬ ದಿನೇಶ ನಾಯ್ಕ ,ಅನೇಕ ನೊಂದ ಜೀವಗಳ ಅವಶ್ಯಕತೆಗಳಾದ ಆಸ್ಪತ್ರೆ,ಔಷಧ,ಮಕ್ಕಳ ವಿದ್ಯಾಬ್ಯಾಸ ಇತ್ಯಾದಿಗಳ ನೆರವಿನ ಪ್ರಸ್ತಾವನೆಯನ್ನು ತಂದು ಗೆಳೆಯರ ಸಹಾಯದಿಂದ ನೆರವನ್ನು ಒದಗಿಸುವುದರಲ್ಲಿ ಮಂಚೂಣಿಯಲ್ಲಿರುವ ವ್ಯಕ್ತಿ, ಇಂದು ನಮ್ಮೊಂದಿಗೆ ಇಲ್ಲದಿರುವುದು ಅತೀವ ದುಃಖದ ವಿಷಯವಾಗಿದೆ ಎಂದಿದ್ದಾರೆ.

ಇoತಹ ಸಮಯದಲ್ಲಿ ಗೆಳೆಯನ ಕುಟುಂಬಕ್ಕೆ ನೆರವಾಗಲು ಅಪೂರ್ವ ಸಂಗಮ ಗೆಳೆಯರ ಬಳಗವು ಮಿತ್ರ ದಿನೇಶನ ಮಕ್ಕಳ ವಿದ್ಯಾಬ್ಯಾಸಕ್ಕೆ ನೆರವು ನೀಡಬೇಕೆಂಬ ಮಹದಾಸೆಯಿಂದ ಸುಮಾರು ಎರಡು ಲಕ್ಷ ಐವತ್ತಮೂರು ಸಾವಿರದ ಎರಡು ರೂಪಾಯಿ ಹಣವನ್ನು ಒಟ್ಟುಗೂಡಿಸಿದ್ದು ,ಅವರ ವಿದ್ಯಾಭ್ಯಾಸ ದ ಅವಶ್ಯಕತೆಗನುಗುಣವಾಗಿ ಉಪಯೋಗಿಸಲು ಮೀಸಲಿಟ್ಟಿದ್ದಾರೆ

ಈ ಸಮಯದಲ್ಲಿ ದಿನೇಶನ ಆತ್ಮಕ್ಕೆ ಮಿತ್ರರು ಚಿರಶಾಂತಿಯನ್ನು ಕೋರಿದ್ದಾರೆ

error: