
ಭಟ್ಕಳ: ಅಕ್ರಮವಾಗಿ ಕುಂದಾಪರ ಕಡೆಯಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಜಾನುವಾರು ತುಂಬಿದ ವಾಹನವನ್ನು ತಡೆದಿರುವ ಪೊಲೀಸರು, ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದು,ಇನ್ನೋರ್ವ ಪರಾರಿಯಾಗಿರುವ ಘಟನೆ ಶಿರೂರು ಗೇಟ ಸಮೀಪದ ಗೊರಟೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ
ಬಂಧಿತ ಆರೋಪಿಗಳನ್ನು ಭಟ್ಕಳ ತಾಲೂಕಿನ ಮುಗ್ಧಮ್ ಕಾಲೋನಿಯ ಮಹ್ಮದ್ ಫಯಾಜ್ ಮಹ್ಮದ್ ಇಲಿಯಾಸ್, ಉಡುಪಿ ಐಕಾಡಿ ಮೂಲದ ನೂರುಲ್ಲಾ ಮಹದ್ ಗೌಸ್ ಎಂದು ಗುರುತಿಸಲಾಗಿದ್ದು, ಭಟ್ಕಳ ಮುಗ್ಧಮ್ ಕಾಲೋನಿಯ ಹಸನ್ ಶಬ್ಬ ಇಸ್ಟೈಲ್ ಖಾಜಿಯಾ ಪರಾರಿಯಾಗಿದ್ದಾನೆ.
ಆರೋಪಿಗಳಿಂದ 8 ಜಾನುವಾರು ಹಾಗೂ ಕರುವನ್ನು ಜಸ್ತುಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ರು.15 ಸಾವಿರ ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಪಿ.ಎಸೈ ರತ್ನಾ ಎಸ್ ಕುರಿ, ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು ಗೋ ಹತ್ಯೆ ನಿಷೇದ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡ ಪಿ.ಎಸೈ ಭರತ ಕುಮಾರ ವಿ,ಇಬ್ಬರು ಆರೋಪಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ