
ಭಟ್ಕಳ: ಬಸ್ ಅಪಘಾತ ಪಡಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಭಟ್ಕಳ ಪೋಲಿಸರು ಯಶಸ್ವೀಯಾಗಿದ್ದಾರೆ.
ಕಳೆದ 2017ರಲ್ಲಿ ವಾಹನ ಅಪಘಾತ ಪಡಿಸಿ ಓರ್ವನ ಸಾವಿಗೆ ಕಾರಣನಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದ ಆರೋಪಿಯೋರ್ವನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಯಶಸ್ವೀಯಾಗಿದ್ದಾರೆ.
ಬಂಧಿತನನ್ನು ಸಾಗರದ ಜನ್ನತ್ ನಗರದ ನಿವಾಸಿ ಮಹಮ್ಮದ್ ನಯಾಜ್ ತಂದೆ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಆರೋಪಿತನು ಹೊನ್ನಾವರದ ಶ್ರೀಕುಮಾರ ಖಾಸಗೀ ಬಸ್ ಚಾಲಕನಾಗಿದ್ದು ವಾಹನ ಅಪಘಾತ ಪಡಿಸಿ ಓರ್ವನ ಸಾವಿಗೆ ಕಾರಣನಾಗಿದ್ದನು. ನಂತರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದು ನ್ಯಾಯಾಲಯ ಈತನ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ನಗರ ಠಾಣೆಯ ಇನ್ಸಪೆಕ್ಟರ್ ದಿವಾಕರ ಪಿ.ಎಂ. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಗಿರೀಶ್ ಅಂಕೋಲೆಕರ್ ಹಾಗೂ ಜೈರಾಮ್ ಹೊಸ್ಕಟ್ಟಾ ಅವರು ಆರೋಪಿಯನ್ನು ತೀರ್ಥಹಳ್ಳಿಯ ಕೊಪ್ಪದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆರೋಪಿಗೆ 1,500 ದಂಡ ವಿಧಿಸಿ ಜಾಮೀನು ನೀಡಿದೆ.
ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವೀಯಾದ ಇನ್ಸಪೆಕ್ಟರ್ ದಿವಾಕರ ಪಿ.ಎಂ ಹಾಗೂ ತಂಡಕ್ಕೆ ಬಸ್ ಮಾಲಿಕರಾದ ವೆಂಕಟ್ರಮಣ ಹೆಗಡೆಯವರು ಅಭಿನಂದನೆ ಸಲ್ಲಿಸಿದ್ದಾರೆ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ