December 20, 2024

Bhavana Tv

Its Your Channel

‘ಲಾಕ್ ಡೌನ್ ವೇಳೆ ಭಟ್ಕಳ ಜಾಲಿಯಲ್ಲಿ ೧೦-೧೨ ಮನೆಯ ದನಗಳ್ಳತನ ‘ ‘ಭಟ್ಕಳದಲ್ಲಿ ತಲೆಎತ್ತಿದೆ ದನ ಕದ್ದು ಮೈದಾನದಲ್ಲಿ ಕಡಿದು ಮಾಂಸ ಸಾಗಾಟದ ಕುಕ್ರತ್ಯ ತಂಡ’

ಭಟ್ಕಳ: ಲಾಕ್ ಡೌನನಿಂದ ಸಾಕಷ್ಟು ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದು, ಆದರೆ ಭಟ್ಕಳದಲ್ಲಿ ರಾತ್ರೋರಾತ್ರಿ ದನಗಳ್ಳತನ ಪ್ರಕರಣಗಳು ಜಾಲಿ ತಲಗೇರಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು ಈಗಾಗಲೇ ೧೦-೧೨ ಜನರ ಮನೆಯ ದನಗಳು ಕಳುವಾಗಿದ್ದು ಇಲ್ಲಿನ ತನಕ ಯಾವುದೇ ಪ್ರಕರಣ ದಾಖಲಾಗಿಲ್ಲವಾಗಿದೆ.

ತಾಲುಕಿನ ಜಾಲಿ, ತಲಗೇರಿ ವ್ಯಾಪ್ತಿಯಲ್ಲಿ ಮನೆಯಲ್ಲಿ ಕಟ್ಟಿರುವ ದನ, ಕರುಗಳನ್ನು ರಾತ್ರೋರಾತ್ರಿ ಹಗ್ಗ ಸಮೇತ ಕದ್ದು ಜಾಲಿ ವ್ಯಾಪ್ತಿಯ ಮೈದಾನದಲ್ಲಿ ದನವನ್ನು ಕಡಿದು ಮಾಂಸ ತೆಗೆದು ಸಾಗಿಸುವ ತಂಡವೊAದು ಸಜ್ಜಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಲಾಕ್ ಡೌನ್ ಆರಂಭದ ದಿನದಿಂದ ದನಗಳ್ಳತನ ನಡೆಯುತ್ತಿರುವ ಬಗ್ಗೆ ದನ ಕಳೆದುಕೊಂಡ ಜನರು ಮಾಹಿತಿ ನೀಡಿದ್ದು, ಒಂದೇ ಮನೆಯ ಎರಡು ದನ, ಇನ್ನೊಂದು ಮನೆಯ ಕರು ಸಮೇತ ಈಗಾಗಲೇ ೧೦-೧೨ ಮನೆಗಳ ದನಕರುಗಳು ವಾಪಸ್ಸು ಬಂದಿಲ್ಲವಾಗಿದೆ. ದನ ಮನೆಗೆ ಬಾರದೇ ಇರುವ ಹಿನ್ನೆಲೆ ದನದ ಮಾಲೀಕರೋರ್ವರು ನಿತ್ಯ ದನ ಮೇಯಲು ಹೋಗುವ ಸ್ಥಳದಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಜಾಲಿ ವ್ಯಾಪ್ತಿಯ ನವನೀ ಹಾಲ್ ಮೈದಾನ ಎಂಬಲ್ಲಿ ದನಗಳನ್ನು ಕಡಿದಿರುವ ಕುರುಹುಗಳು ಕಂಡು ಬಂದಿದ್ದು ದನದ ಹೊಟ್ಟೆಯೊಳಗಿನ ತ್ಯಾಜ್ಯ ಹಾಗೂ ಕೆಲವು ಕಡೆ ದನದ ರುಂಡಗಳೆಲ್ಲ ಕಂಡು ಬಂದಿದ್ದು ಇದನ್ನು ಕಂಡು ದಿಗಿಲಾದ ದನದ ಮಾಲೀಕರು ಬೇಸರಗೊಂಡು ಮನೆಗೆ ತೆರಳಿ ದನಕಳೆದ ಮನೆ ಮಂದಿಗೆ ವಿಚಾರ ತಿಳಿಸಿದ್ದಾರೆ.
ದನ ಹುಡುಕಿ ಬಂದ ಮಾಲೀಕನ ದನದ ಕುತ್ತಿಗೆಗೆ ಹಾಕಿದ ಹಗ್ಗದ ಕುರುಹುದಿಂದ ಮನೆಯ ದನವೂ ಕಟುಕರ ಪಾಲಾಗಿರುವುದು ತಿಳಿದು ಬಂದಿದೆ.

ದನಗಳ್ಳರ ತಂಡ : ಲಾಕ್ ಡೌನ ಆದ ದಿನದಿಂದ ಇತ್ತೀಚಿನ ದಿನದಲ್ಲಿ ಜಾಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ೩-೪ ಜನರುಳ್ಳ ತಂಡ ದನಗಳ್ಳತನ ಮಾಡಿ ಅದನ್ನು ಕಡಿದು ಸಾಗಾಟ ಮಾಡುವ ಅಕ್ರಮ ಕೆಲಸದ ತಂಡವೊAದು ಈ ಕುಕ್ರತ್ಯ ನಡೆಸುತ್ತಿದೆ. ಈ ಬಗ್ಗೆ ತಕ್ಷಣವೇ ಪೊಲೀಸ ಇಲಾಖೆ ಇಂತಹ ಕುಕ್ರತ್ಯ ವೆಸಗಿದವರನ್ನು ಬಂಧಿಸಿ ಶಿಕ್ಷಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ದನ ಕಳೆದುಕೊಂಡ ಜನರು.

ದನ ಕದಿಯಲು ಲಾಕ್ ಡೌನ್ ಉತ್ತಮ: ಕೋರೋನಾ ಮಹಾಮಾರಿ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಲಾಕ್ ಡೌನ ಮಾಡಿ ಜನರ ಓಡಾಟ ಕಡಿವಾಣ ಹಾಕಲು ಯತ್ನಿಸುತಿದ್ದರೆ ಅತ್ತ ಕಡೆ ಇದನ್ನೆ ಉತ್ತಮ ಸಮಯವೆಂದು ರಾತ್ರಿಯಲ್ಲಿ ದನಗಳನ್ನು ಕದ್ದು ಕಡಿದು ಸಾಗಾಟ ಮಾಡುವ ತಂಡ ಇದರ ಸದುಪಯೋಗ ಪಡೆದುಕೊಳ್ಳುತ್ತಿದೆ.
ಮನೆಯಲ್ಲಿ ಸಾಕಿರುವ ದನಗಳ ಕಳ್ಳತನ ನಡೆಯುವದರೊಂದಿಗೆ ಮೈದಾನವೊಂದರಲ್ಲಿ ಕತ್ತರಿಸುವುದು. ಹಾಗು ತಲಗೇರಿ ಭಾಗದಲ್ಲಿನ
ಕೆರೆಯಲ್ಲಿ ದನದ ಮುಖವನ್ನು ಕತ್ತರಿಸಿ ಬೀಸಾಡುವುದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಶೇಖರ ನಾಗಪ್ಪ ನಾಯ್ಕ, ದಿನೇಶ ವಿಠ್ಠಲ ನಾಯ್ಕ,ಸುಬ್ಬು ಕನ್ನಯ್ಯ ನಾಯ್ಕ ಸೇರಿ ೧೦- ೧೨ ಜನರ ಮನೆಯ ದನ ಕಳುವಾಗಿದ್ದು, ದನ ಕಳೆದುಕೊಂಡ ಬೇಸರದಲ್ಲಿ ಠಾಣೆಗೆ ದೂರು ಸಹ ನೀಡಿಲ್ಲವಾಗಿದ್ದು ಈ ಬಗ್ಗೆ ಪೊಲೀಸರು ಕಠಿಣ ತನಿಖೆ ನಡೆಸಿ ಈಗ ದನ ಕಳೆದುಕೊಂಡು ವ್ಯಥೆ ಪಡುವ ಜನರಂತೆ ಮುಂದೆ ಯಾರಿಗೂ ಆಗಬಾರದು ಎನ್ನುವುದು ಸ್ಥಳೀಯರ ಮಾತಾಗಿದೆ.

‘ ಒಂದು ತಿಂಗಳಿನಿAದ ಈ ವ್ಯಾಪ್ತಿಯಲ್ಲಿ ದನಗಳನ್ನು ಕಳ್ಳತನ ಮಾಡಿ ಕಡಿದು ಸಾಗಾಟ ಮಾಡುವುದು ತಿಳಿದು ಬಂದಿದೆ. ನಮ್ಮ ಮನೆಯ ಎರಡು ದನಗಳು ಈಗಾಗಲೇ ಕಳುವಾಗಿ ಕಟುಕರ ಪಾಲಾಗಿದೆ. ನಮ್ಮಂತೆ ಯಾರ ಮನೆಯ ದನವು ಕಟುಕರ ಕೈ ಸೇರಬಾರದು ಈ ಬಗ್ಗೆ ಇಲಾಖೆ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು ಎಂದು ಶೇಖರ ನಾಯ್ಕ- ದನ ಕಳೆದುಕೊಂಡ ವ್ಯಕ್ತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

‘ಈ ವ್ಯಾಪ್ತಿಯಲ್ಲಿ ಹೈನುಗಾರಿಕೆ ನಂಬಿ ಬದುಕುವವರು ಹೆಚ್ಚಿದ್ದು ಈ ರೀತಿಯ ದನಕಳ್ಳತನ ನಡೆದರೆ ರೈತರು ಎನು ಮಾಡಬೇಕು. ಪೊಲೀಸರ ತಕ್ಷಣಕ್ಕೆ ಕಾರ್ಯಪ್ರವ್ರತ್ತರಾಗಿ ಆರೋಪಿಗಳನ್ನು ಬಂದಿಸಬೇಕು ಸ್ಥಳೀಯರಾದ ಹರೀಶ ನಾಯ್ಕ ಮತ್ತು ಸುಬ್ಬು ಕನ್ನಯ್ಯ ನಾಯ್ಕ ಹೇಳಿದ್ದಾರೆ

error: