ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ಸುನಿಲ್ ಬಿ. ನಾಯ್ಕರವರು ಕೋವಿಡ್-೧೯ ಕೊರೋನಾ ವೈರಾಣು ಸೋಂಕಿನಿAದ ದಿಕ್ಕೆಟ್ಟಿರುವ ಸಮಾಜದ ವಿವಿಧ ಸ್ತರದ ಜನತೆಯನ್ನು ಗುರುತಿಸಿ ತನ್ನಿಂದಾದ ಸಹಾಯ ಸಹಕಾರದ ಜೊತೆಗೆ ದಾನಿಗಳು, ಸಂಘಸAಸ್ಥೆಗಳ ಮುಲಕವೂ ನೆರವಿಗಾಗಿ ಮನವಿ ಮಾಡಿಕೊಂಡAತೆ ಜಿಲ್ಲೆಯಲ್ಲಿ ಆರೋಗ್ಯ ಸೇವೆಯ ಜೊತೆಗೆ ವಿವಿಧ ರಂಗದಲ್ಲಿ ಗುರುತಿಸಿಕೊಂಡಿರುವ ಶಿರಸಿಯ ಸ್ಕೋಡ್‌ವೆಸ್ ಸೇವಾ ಸಂಸ್ಥೆಯವರು, ವಿಪ್ರೋದ ಅಜೀಮ್ ಪ್ರೇಮ್‌ಜಿ ಫಿಲಾಂತರೋಪಿಕ್ ಇನಿಟಿಯೆಟರಿವ್ಸ್ ರವರು ಪ್ರಾಯೋಜಿಸಿದ ಸುಮಾರು ೧೦ ಲಕ್ಷ ರೂ. ಮೌಲ್ಯದ ಆಹಾರ ದಾನ್ಯಗಳ ಕಿಟ್‌ನ್ನು ಕ್ಷೇತ್ರದ ೭೩೭ ಎಂಡೋಸೆಲ್ಪಾನ್ ಪಿಡಿತರಿಗೆ ನೀಡಲು ಮುಂದೆ ಬಂದಿದ್ದಾರೆ. ದಿನಾಂಕ ೨೯.೦೪.೨೦೨೦ ಬುಧವಾರ ಬೆಳಿಗ್ಗೆ ಶಿರಾಲಿಯಲ್ಲಿ ಸ್ಕೋಡ್‌ವೆಸ್ ಸಂಸ್ಥೆಯ ಅಧ್ಯಕ್ಷರು, ಶಿರಸಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಕ ಹಾಗೂ ತಾಲ್ಲೂಕ ಆಡಳಿತದ ಪ್ರಮುಖರ ಸಮ್ಮೂಖದಲ್ಲಿ ಶಾಸಕರಾದ ಶ್ರೀ ಸುನಿಲ್ ಬಿ. ನಾಯ್ಕ ರವರು ಆಹಾರ ದಾನ್ಯದ ಕಿಟ್‌ನ್ನು ಪೀಡಿತರಿಗೆ ಸಾಂಕೇತಿಕವಾಗಿ ವಿತರಿಸಿ ಚಾಲನೆ ನೀಡಲಿದ್ದಾರೆ.
ಭಟ್ಕಳ ತಾಲ್ಲೂಕಿನ ೧೦ ಗ್ರಾಮ ಪಂಚಾಯತದ, ಪುರಸಭೆ, ಪಟ್ಟಣಪಂಚಾಯತ ವ್ಯಾಪ್ತಿಯಲ್ಲದೇ ಹೊನ್ನಾವರದ ಬಳಕೂರು ಬಾಗದಲ್ಲು ಎಂಡೋಸಲ್ಪಾನ್ ದ್ರಾವಣ ಸಿಂಪರಣೆಯ ಪರಿಣಾಮ ಅಂಗವೈಕಲ್ಯ, ಬುದ್ಧಿ ಮಾಂದ್ಯತೆಗೊಳಗಾದವರಿದ್ದು ಈ ಹಿಂದೆ ಸರಕಾರ ವಿವಿಧ ಗ್ರಾಮ ಪಂಚಾಯತ ಮಟ್ಟದಲ್ಲಿ ಕ್ಯಾಂಪ್‌ಗಳ ಮೂಲಕ ಎಂಡೋಸಲ್ಪಾನ್ ಪೀಡಿತರನ್ನ ಗುರುತಿಸುವ ಕಾರ್ಯ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಒಟ್ಟು ೭೩೭ ಜನರನ್ನು ಗುರುತಿಸಿ ಗುರುತು ಪತ್ರ ನೀಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾಸಾಸನದಲ್ಲೂ ಹೆಚ್ಚಳ ಮಾಡಲಾಗಿತ್ತು.
ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಎಂಡೋಸಲ್ಪಾನ್ ಪೀಡಿತರಿರುವದನ್ನ ಅರಿತಿದ್ದ ಶಾಸಕ ಶ್ರೀ ಸುನಿಲ್ ಬಿ. ನಾಯ್ಕ ರವರು ಪೀಡಿತರೊಂದಿಗೆ ಸಂಪರ್ಕದಲ್ಲಿದ್ದ ಶಿರಸಿಯ ಸ್ಕೋಡ್‌ವೆಸ್ ಸೇವಾ ಸಂಸ್ಥೆರವರನ್ನ ದಿನಾಂಕ:೧೭.೦೪.೨೦೨೦ ರಂದು ಪತ್ರ ಮುಖೇನ ಸಂಪರ್ಕಿಸಿ ತನ್ನ ನೇರವಿನ ಅಭಿಯಾನದಲ್ಲಿ ಕೈ ಜೊಡಿಸುವಂತೆ ವಿನಂತಿಸಲಾಗಿತ್ತು. ತಕ್ಷಣ ಸ್ಪಂದಿಸಿದ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಕ ರವರು ಪ್ರಾಯೋಜಕರನ್ನ ಗುರುತಿಸಿ ಭಟ್ಕಳ-ಹೊನ್ನಾವರ ಕ್ಷೇತ್ರದ ಎಂಡೋಸಲ್ಪಾನ ಪೀಡಿತರಿಗೆ ಬಹುದೊಡ್ಡ ನೆರವಿನ ಹಸ್ತ ಚಾಚಿದ್ದಕ್ಕಾಗಿ ಶಾಸಕರು ಸಂಸ್ಥೆಯವರನ್ನ ಅಭಿನಂದಿಸಿದ್ದಾರೆ.
ದಿನಾAಕ: ೨೯.೦೪.೨೦೨೦ ಬುಧವಾರ ಮತ್ತು ದಿನಾಂಕ: ೩೦.೦೪.೨೦೨೦ ಗುರುವಾರ ಆಯ್ದ ಸ್ಥಳದಲ್ಲಿ ದಿನಸಿ ಕಿಟ್‌ನ್ನು ವಿತರಿಸಲು ವೇಳಾ ಪಟ್ಟಿ ಸಿದ್ದಪಡಿಸಿದ್ದು ಆಯಾ ಭಾಗದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿ ವಿತರಿಸಲು ಯೋಜಿಸಿದ್ದು, ತಾಲ್ಲೂಕ ಆಡಳಿತ ಈ ಅಭಿಯಾನದಲ್ಲಿ ಸಹಕರಿಸಲು ಶಾಸಕರು ಕೋರಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
¸
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.