May 19, 2024

Bhavana Tv

Its Your Channel

ಲಾಕ್ ಡೌನ್ ಕರ್ಪ್ಯೂ ಉಲ್ಲಂಘನೆ: ಅಕ್ರಮವಾಗಿ ವಾಹನದಲ್ಲಿ ಎಮ್ಮೆ ಸಾಗಾಟ, ಆರೋಪಿಗಳು ಪರಾರಿ’

ಭಟ್ಕಳ : ಲಾಕ್ ಡೌನ್ ಕರ್ಪ್ಯೂ ಜಾರಿಗೊಳಿಸಿದರು ಸಹ ಟಾಟಾ ಎಕ್ಸಿನೋನ್ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಎಮ್ಮೆ ಸಾಗಿಸುತ್ತಿದ್ದ ವೇಳೆ ಪೊಲೀಸ ವಾಹನ ನೋಡಿ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ತಾಲೂಕಿನ ಬೆಳೆಕೆ ಕೊಚ್ರೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ನಡೆದಿದೆ.

ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕ ರೋಗವು ತೀವ್ರವಾಗಿ ವ್ಯಾಪಿಸುವುದನ್ನು ಹಾಗೂ ಸುರಕ್ಷತಾ ಕ್ರಮವನ್ನು ಕೈಗೊಳ್ಳಲು ಸರ್ಕಾರದ ಪರವಾಗಿ ಜಿಲ್ಲಾಧಿಕಾರಿಗಳು, ದಿನಾಂಕ: ೦೩-೦೫-೨೦೨೦ ರವರೆಗೆ ಯಾರೂ ಮನೆಯಿಂದ ಹೊರ ಬಾರದಂತೆ ಕೊರೊನಾ ಕರ್ಫ್ಯೂವನ್ನು (ಲಾಕ್ ಡೌನ್) ಜಾರಿಗೊಳಿಸಿದರೂ ಸಹ ಟಾಟಾ ಎಕ್ಸಿನೋನ್ ಪಿಕ್‌ಅಪ್ ವಾಹನ ನಂ: ಕೆ.ಎ-೪೭/೬೧೭೮ ನೇದರಲ್ಲಿ ಸುಮಾರು ೫,೦೦೦/- ರೂಪಾಯಿ ಬೆಲೆಯ ತಿಳಿ ಬಿಳಿ ಬಣ್ಣದ ಎಮ್ಮೆ-೦೧, ಇನ್ನೊಂದು ತಿಳಿ ಬಿಳಿ ಬಣ್ಣದ ಎಮ್ಮೆ ಕರು-೦೧, ಮತ್ತೊಂದು ಕಪ್ಪು ಬಣ್ಣದ ಎಮ್ಮೆ ಕರು-೦೧ ಇವುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿ ಇವುಗಳಿಗೆ ನೀರು, ಹುಲ್ಲು ಆಹಾರ ನೀಡದೇ ತೀರಾ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಾಟ ಮಾಡಲು ಯಾವುದೇ ಪರವಾನಿಗೆ ಪಡೆಯದೇ, ಬೆಳಕೆಯ ಕೊಚ್ರೆ ಕಡೆಯಿಂದ ಭಟ್ಕಳ ಕಡೆಗೆ ಸಾಗಾಟ ಮಾಡುತ್ತಿರುವಾಗ ಕೊಚ್ರೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಪೊಲೀಸ್ ವಾಹನವನ್ನು ನೋಡಿ ವಾಹನ ಬಿಟ್ಟು ಓಡಿ ಹೋಗಿದ್ದು ವಾಹನವನ್ನು ಗ್ರಾಮೀಣ ಪೋಲೀಸರು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಕುರಿತು ಗ್ರಾಮೀಣ ಠಾಣೆ ಪಿ.ಎಸ್.ಐ ಓಂಕಾರಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ

error: