July 14, 2024

Bhavana Tv

Its Your Channel

ಆಶಾ ಕಾರ್ಯಕರ್ತರಿಗೆ ಹಣ್ಣು ಹಂಪಲು ಹಾಗೂ ನಗದು ನೀಡಿ ಗೌರವಿಸಿದ ತಾ.ಪ.ಸದಸ್ಯೆ ಮೀನಾಕ್ಷಿ ನಾಯ್ಕ

ಭಟ್ಕಳ: (ಕೋವಿಡ್-೧೯) ಕೊರೋನಾ ವೈರಸ್ ನ್ನು ನಮ್ಮಿಂದ ದೂರ ಇರಿಸುವ ಉದ್ದೇಶದಿಂದ ತಮ್ಮ ಕುಟುಂಬ ತೊರೆದು ಜನರ ಮನೆ ಮನೆಗೆ ತೆರಳಿ ತಮ್ಮ ಸೇವೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆಯರೂ ಸಹ ಈ ಹೋರಾಟದಲ್ಲಿ ಕೊರೋನಾ ವಾರಿಯರ್ಸ್ ಆಗಿದ್ದಾರೆ. ಅವರಿಗೆ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುಟ್ಟಳ್ಳಿ, ಮುಂಡಭಟ್ಕಳ, ತಲಾನ,ಬೆಳಲಖಂಡ, ಆಶಾ ಕಾರ್ಯಕರ್ತೆ ರಿಗೆ ಶನಿವಾರ ತಾಲ್ಲೂಕು ಪಂಚಾಯತ ಸದಸ್ಯೆ ಮೀನಾಕ್ಷಿ ಜಟಪ್ಪ ನಾಯ್ಕ ಅವರು ಎಲ್ಲಾ ಆಶಾ ಕಾರ್ಯಕರ್ತೆ ರಿಗೆ ಹಣ್ಣು ಹಂಪಲು ಹಾಗೂ ಒಬ್ಬರಿಗೆ ತಲಾ ೧೫೦೦ ರೂಪಾಯಿ ನಗದು ನೀಡಿ ಗೌರವಿಸಿದರು.ಹಾಗೂ ಸ್ಥಳೀಯ ಆರೋಗ್ಯ ಕಾರ್ಯಕರ್ತೆ ಮುಂಕಾAಬಿ ಎಮ್ ಮೊಗೇರ್ ಅವರಿಗೆ ಹಣ್ಣು ಹಂಪಲು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಸದಸ್ಯೆ ಮೀನಾಕ್ಷಿ ಜಟಪ್ಪ ನಾಯ್ಕ ಮಾತನಾಡಿ ನಾವು ಸುರಕ್ಷಿತವಾಗಿರಲು ಶ್ರಮಿಸುತ್ತಿರುವ ಇವರ ಕುಟುಂಬಗಳು ಕಷ್ಟದಲ್ಲಿರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಜಟಪ್ಪ ನಾಗಪ್ಪ ನಾಯ್ಕ,ಗ್ರಾಮ ಪಂಚಾಯತ್ ಸಿಬ್ಬಂದಿ ದಾಮು ನಾಯ್ಕ ಉಪಸ್ಥಿತರಿದ್ದರು.

error: