December 6, 2024

Bhavana Tv

Its Your Channel

ಹಳದೀಪುರಕ್ಕೆ ಕೂಲಿಗಾಗಿ ಆಗಮಿಸಿ ಹೊನ್ನಾವರದ ಸರ್ಕಾರಿ ವಸತಿ ನಿಲಯದಲ್ಲಿ ವಾಸ್ಥವ್ಯದಲ್ಲಿದ್ದ ೬೬ ಕಾರ್ಮೀಕರು ಮರಳಿ ಸ್ವಗ್ರಾಮಕ್ಕೆ.

ಹೊನ್ನಾವರ: ಹಳದೀಪುರ ಸಮೀಪ ಕಳೆದ ತಿಂಗಳ ೨೯ರಿಂದ ಸರ್ಕಾರಿ ವಸತಿ ನಿಲಯದಲ್ಲಿ ವಾಸ್ಥವ್ಯ ಕಲ್ಪಿಸಿದ್ದ ಮುಂಡಗೋಡ ತಾಲೂಕಿನ ಮೈನಹಳ್ಳಿ ಮತ್ತು ತಿಮ್ಮನಕೊಪ್ಪ ಗ್ರಾಮದ ೬೬ ಕಾರ್ಮಿಕರನ್ನು ಸರ್ಕಾರದಿಂದ ನಿರ್ದೆಶನದಂತೆ ಸಾರಿಗೆ ಸಂಸ್ಥೆಯ ವಾಹನದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಲಾಯಿತು. ಬಹುತೇಕ ಕಾರ್ಮಿಕರು ತಾಲೂಕು ಆಡಳಿತ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆ ಪ್ರತಿದಿನ ಊಟ ಮತ್ತು ತಿಂಡಿ ವ್ಯವಸ್ಥೆ ಉತ್ತಮವಾಗಿ ನೀಡುವ ಮೂಲಕ ನೋಡಿಕೊಂಡಿರುದಕ್ಕೆ ಸಂತಸ ವ್ಯಕ್ತಪಡಿಸಿದರು.
ಅಲ್ಲದೇ ಪ್ರತಿಯೊರ್ವರು ಮಾಸ್ಕ ಧರಿಸಿ ಬಸ್ ನಲ್ಲಿಯೂ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದಲ್ಲದೇ ೨ ಬಸ್ಸುಗಳಲ್ಲಿ ಪೋಲಿಸ್ ಸಿಬ್ಬಂದಿ ಹಾಗೂ ಒರ್ವ ನೊಡೆಲ್ ಅಧಿಕಾರಿಗಳ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ತಾಲೂಕ ಆಡಳಿತ ಕಲ್ಪಿಸಿತ್ತು.

ಸರ್ಕಾರ ನಿರ್ದೇಶನ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿ ಅನ್ವಯ ೬೬ ಜನರನ್ನು ಪ್ರತಿದಿನ ಆರೊಗ್ಯ ತಪಾಸಣೆ ಹಾಗೂ ಊಟ ತಿಂಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರ್ಕಾರದ ಆದೇಶದಂತೆ ಇಂದು ಎಲ್ಲರನ್ನು ಅವರ ಗ್ರಾಮಕ್ಕೆ ಸಾರಿಗೆ ಬಸ್ ಮೂಲಕ ಕಳುಹಿಸಲಾಗುತ್ತಿದ್ದೆ ನಮ್ಮ ಜಿಲ್ಲೆಯ ಉಸ್ತುವಾರಿ ಸಚೀವರ ಮುತ್ತವರ್ಜಿ ಹಾಗೂ ಜಿಲ್ಲಾಡಳಿತ ಆದೇಶದಂತೆ ಇಂದು ಕಳುಹಿಸಲಾಗಿದೆ ಎಂದು ತಾಲೂಕ ದಂಡಾಧಿಕಾರಿ ವಿವೇಕ ಶೆಣ್ವಿ ತಿಳಿಸಿದರು.

error: